ಎಲ್ಲರಿಗೂ ದೀಪಾವಳಿ ಶುಭಾಶಯಗಳು.. ದೀಪಾವಳಿ ಸಡಗರ ಎಲ್ಲೆಡೆ ಜೋರಾಗಿದೆ ಅಲ್ವಾ..? ನೀವೂ ಕೂಡ ದೀಪಾವಳಿ ಸಂಭ್ರಮದಲ್ಲಿದ್ದೀರಿ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹಬ್ಬವನ್ನು ಆಚರಿಸಲಾಗ್ತಾ ಇದೆ. ಅಂತೆಯೇ ಮಧ್ಯಪ್ರದೇಶದ ರತ್ಲಾಮ್‍ನಲ್ಲಿರೋ ಮಹಾಲಕ್ಷ್ಮೀ ದೇವಸ್ಥಾನದಲ್ಲಿಯೂ ಕೂಡ..! ಈ ದೇವಸ್ಥಾನದ ಬಗ್ಗೆ ಮಾತ್ರ ಯಾಕ್ ಹೇಳೋದ್ ಅಂತಾನಾ..? ಕಾರಣ ಇದೆ.. ಇಲ್ಲಿ ದೇವಿಗೆ ಮಾಡಿರೋ ಅಲಂಕಾರ ನೋಡಲು ಎರಡು ಕಣ್ಣುಗಳು ಸಾಲದು..! ದೇವಿಯನ್ನು ಐಷಾರಾಮಿಯಾಗಿ ಸಿಂಗರಿಸಲಾಗಿದೆ..! ಬರೀ ಚಿನ್ನಾಭರಣ, ನೋಟುಗಳಿಂದ ಮಹಾಲಕ್ಷ್ಮೀಯನ್ನು ಅಲಂಕರಿಸಲಾಗಿದೆ.
ಪ್ರತಿವರ್ಷ ದೀಪಾವಳಿಯಲ್ಲಿಯೂ ದೇವಿಗೆ ಹೀಗೆ ಅಲಂಕಾರ ಮಾಡ್ತಾರೆ. ಈ ವರ್ಷ ಇನ್ನೂ ವೈಭವಯುತವಾಗಿದೆ..! ಈ ಬಾರಿ ಚಿನ್ನಾಭರಣಗಳ ಜೊತೆಗೆ ಬಳಸಿರೀ ನಗುದು ಬರೊಬ್ಬರಿ 100 ಕೋಟಿ ರೂ…!
ದೀಪಾವಳಿ ಹಬ್ಬಕ್ಕೆ ಈ ದೇವಾಲಯಕ್ಕೆ ನಾನಾ ಕಡೆಗಳಿಂದ ಭಕ್ತರು ಬರ್ತಾರೆ. ಅವರ ಬಳಿಯಲ್ಲಿನ ಚಿನ್ನಾಭರಣಗಳನ್ನು ತಂದು ದೇವಿ ಅಲಂಕಾರಕ್ಕೆ ಕೊಡ್ತಾರಂತೆ. ದೀಪಾವಳಿ ಮುನ್ನ ದಿನವೇ ಬಂದು ಬೆಲೆ ಬಾಳುವ ವಸ್ತುಗಳನ್ನು ಭಕ್ತರು ಕೊಡ್ತಾರೆ. ಅದನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟು ಹಬ್ಬದ ಬಳಿಕ ಆ ವಸ್ತುಗಳನ್ನು ಹಿಂದಿರುಗಿಸಲಾಗುತ್ತಂತೆ. ಈ ವರ್ಷವಂತೂ ದೇವಿ ಹೊಸ ಗರಿ ಗರಿ ನೋಟುಗಳಿಂದ ಕಂಗೊಳಿಸ್ತಾ ಇದ್ದಾಳೆ..!
ಕೇವಲ ಗರ್ಭಗುಡಿ ಮಾತ್ರವಲ್ಲ ಗರ್ಭಗುಡಿಯ ಹೊರ ಪ್ರಾಂಗಣದಲ್ಲೂ ನೋಟಿನ ಅಲಂಕಾರ ಮಾಡಲಾಗಿದೆ. ಎಲ್ಲಿ ನೋಡಿದರಲ್ಲಿ ಚಿನ್ನಾಭರಣ, ಹೊಸ ಗರಿ ಗರಿ ನೋಟುಗಳು..!