ಉಗ್ರವಾದಿಗಳು ಅಂದ್ರೆ ಹೇಗಿರ್ತಾರೆ… ಯಾರ ಕಣ್ಣಿಗೂ ಬೀಳದೆ ಭೂಗತರಾಗಿರ್ತಾರೆ. ಎಲ್ಲೆಂದ್ರಲ್ಲಿ ವಾಸ ಮಾಡ್ತಾರೆ. ವಿದ್ವಂಸಕ ಕೃತ್ಯಗಳಲ್ಲಿ ತೊಡಗಿರ್ತಾರೆ.. ಆದ್ರೆ ಇದೆಲ್ಲಕ್ಕೂ ವಿಭಿನ್ನವಾದ ಲೈಫ್ ಸ್ಟೈಲ್ ಈ ಐಸಿಸ್ ಉಗ್ರರರದ್ದು.
ಹೌದು…ಇರಾಕ್ ನ ಮೊಸುಲ್ ಸಿಟಿಯಲ್ಲಿ ಐಸಿಸ್ ಉಗ್ರ ಸಂಘಟನೆ ತನ್ನ ವಿಸಿಟಿಂಗ್ ಕಮಾಂಡರ್ಸ್ ಹಾಗೂ ಅತಿಥಿಗಳಿಗಾಗಿ ಲಕ್ಸುರಿ 5 ಸ್ಟಾರ್ ಹೋಟಲ್ ಒಂದನ್ನ ನಿರ್ಮಾಣ ಮಾಡಿತ್ತು. ಈ ಹೋಟೆಲ್ ಸಕಲ ಸೌಲಭ್ಯಗಳನ್ನು ಒಳಗೊಂಡಿತ್ತು. ಒಮ್ಮೆ ಹೋಟೆಲ್ ನ ವಿನ್ಯಾಸ ನೋಡದ್ರೆ ರಾಜ ಮಹಾರಾಜ್ರು ವಾಸಿಸುತ್ತಿದ್ದ ಅರಮನೆ ನೆನಪಾಗೋದು ಸತ್ಯ.
ಅರಮನೆಯಂತ ಹೋಟಲ್ ನಿರ್ಮಾಣ ಮಾಡಿ ಅದಕ್ಕೊಂದು ಚಂದದ ಹೆಸರನ್ನು ಇಟ್ಟಿದ್ರು ಐಸಿಸ್ ಉಗ್ರರು. ನಿನಾವಾ ಇಂಟರ್ ನ್ಯಾಷನಲ್ ಹೋಟಲ್ ಅಂತ ನಾಮಕರಣ ಮಾಡಿ ಉಗ್ರ ಲೋಕದಲ್ಲಿ ಹೊಸ ಭಾಷ್ಯ ಬರೆದಿತ್ತು.
ಐಸಿಸ್ ಅನ್ನೋ ಹೆಸ್ರು ಕೇಳದ್ರೆ ಸಾಕು ಇಡೀ ವಿಶ್ವವೇ ಒಮ್ಮೆ ತಿರುಗಿ ನೋಡುತ್ತೆ.. ಅಷ್ಟರ ಮಟ್ಟಿಗೆ ಕುಖ್ಯಾತಿ ಗಳಿಸಿರೋ ಖ್ಯಾತಿ ಐಸಿಸ್ ಉಗ್ರ ಸಂಘಟನೆ ಗೆ ಸಲ್ಲಬೇಕು. ಹಾಗಾಗೇ ಉಗ್ರಗಾಮಿಗಳ ಈ ಹೋಟಲ್ ಬ್ರಾಂಡಿಗ್ ಗೆ ಹೋಟಲ್ ಉದ್ಗಾಟನೆಗೂ ಮುನ್ನವೇ ಹಲವಾರು ಸಕಾರಾತ್ಮಕ ವಿಮರ್ಶೆಗಳು ಬಂದಿತ್ತು.
ಇನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಅಂಗ ಸಂಸ್ಥೆ ಹೋಟಲ್ ನಿರ್ಮಾಣ ಹಂತದ ಫೋಟೋಗಳನ್ನು ಬಿಡುಗಡೆ ಮಾಡೋ ಮೂಲಕ ಈ 5 ಸ್ಟಾರ್ ಹೋಟಲ್ ನ ವೈಭೋಗ ಗೋಚರವಾಗುವಂತೆ ಮಾಡಿತ್ತು. ಸಾಮಾಜಿಕ ಜಾಲತಾಣ ಗಳಲ್ಲೂ ಈ ಫೋಟೋಗಳು ಭಾರಿ ಸದ್ದು ಮಾಡಿತ್ತು. ಈ ಫೋಟೋಗಳನ್ನ ಬಿಡುಗಡೆ ಮಾಡಿ ಉಗ್ರ ಹೋಟಲ್ ಐಶಾರಾಮಿತನವನ್ನ ಇಡೀ ಜಗತ್ತಿಗೆ ಸಾರೋ ಉದ್ದೇಶ ಸಂಘಟನೆಯದ್ದಾಗಿತ್ತು.
ಈ ಹೋಟಲ್ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ವಿಶಾಲವಾದ 262 ರೂಮ್ ಗಳನ್ನ ಹೊಂದಿದೆ. ಎರಡು ಮಂದಿರಗಳು, ಎರಡು ರೆಸ್ಟೋರೆಂಟ್ ಹಾಗೂ ಇತರ ಸೌಲಭ್ಯಗಳೊಂದಿಗೆ ಒಂದು ವ್ಯಾಯಾಮಶಾಲೆಯೂ ಇದೆ.
ಇಷ್ಟೆಲ್ಲ ವೈಭವೋಪೇತವಾದ ಈ ಹೋಟೆಲ್ ಉದ್ಗಾಟನೆಗೊಂಡು ಇಂದಿಗೆ ಒಂದು ವರ್ಷ. ಈ ಸಂಘಟನೆ ಮೇ 1 2015 ರ ರಾತ್ರಿ ಈ ಹೋಟಲ್ ಅನ್ನು ಉದ್ಘಾಟನೆ ಮಾಡಿತ್ತು .ಇದಕ್ಕಾಗಿ ಭಾರಿ ಪ್ರಚಾರ ಮಾಡಿದ ಸಂಘಟನೆ ತನ್ನ ಟ್ವಿಟ್ಟ್ರರ್ ಖಾತೆಯಲ್ಲಿ ಮುಸ್ಲಿಮರನ್ನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು ಅಷ್ಟೇ ಅಲ್ಲದೇ ಎಲ್ಲಾ ಮುಸ್ಲಿಮರಿಗೆ ಉಚಿತ ಪ್ರವೇಶ ಘೋಷಣೆ ಮಾಡಿತ್ತು.
ಅರಮನೆಯಲ್ಲಿದ್ದೋರೆಲ್ಲ ಅರಸನಾಗಲ್ಲ ಹಾಗೆ 5 ಸ್ಟಾರ್ ಹೋಟೆಲ್ ನಿರ್ಮಾಣ ಮಾಡಿದ್ದ ಮಾತ್ರಕ್ಕೆ ಉಗ್ರ ಸಂಘಟನೆ ಉದ್ಯಮವಾಗಿ ಬದಲಾಗಲ್ಲ. ಈಗಾಗ್ಲೆ ವಿಶ್ವದಾದ್ಯಂತ ತನ್ನ ವಿಧ್ವಂಸಕ ಕೃತ್ಯಗಳಿಂದ ಹೆಸರುವಾಸಿಯಾಗಿರುವ ಐಸಿಸ್ ಹಲವು ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗಿದೆ.
ತನ್ನ ಅಸ್ತಿತ್ವವನ್ನ ಉಳಿಸಿ ಬೆಳೆಸಲು ಮತ್ತು ಇನ್ನಷ್ಟು ವಿಸ್ತರಿಸಲು ನಾನಾ ಮಸಲತ್ತುಗಳನ್ನ ಐಸಿಸ್ ಮಾಡುತ್ತಲೇ ಇದೆ. ಇನ್ನೊಂದೆಡೆ ಐಸಿಸ್ ಹೆಡೆಮುರಿ ಕಟ್ಟಲು ಅಮೇರಿಕಾ ಭಾರತ ಸೇರಿದಂತೆ ಹಲವು ಬಲಾಢ್ಯ ರಾಷ್ಟ್ರಗಳು ಟೊಂಕಕಟ್ಟಿ ನಿಂತಿವೆ.
ಸಂಘಟನೆಯ ಸದಸ್ಯರಿಗೆ ಈ ಭೀತಿ ಇರೋದ್ರಿಂದ ಹೆಚ್ಚಾಗಿ ಪಾರ್ಟಿ ಮತ್ತು ಎಲ್ಲರೂ ಒಟ್ಟಾಗಿ ಡಿನ್ನರ್ ಮಾಡದಿರಲು ನಿರ್ಧರಿಸಿದ್ದಾರಂತೆ. ಅಷ್ಟೇ ಅಲ್ಲದೆ ಯಾವುದೇ ಸ್ಪೋಟಕಗಳನ್ನು ಇಲ್ಲಿ ಸಂಗ್ರಹಿಸಿಡದಿರಲು ತೀರ್ಮಾನಿಸಲಾಗಿದೆ. ಒಟ್ಟಾರೆ ಉಗ್ರವಾದಿಗಳು ಹೈ ಫೈ ಲೈಫ್ ಸ್ಟೈಲ್ ಗೆ ಮಾರುಹೋಗಿದ್ದಾರೆ ಅನ್ನೋದಕ್ಕೆ ಇದು ಜೆಸ್ಟ್ ಎಕ್ಸಾಂಪಲ್ ಅಷ್ಟೇ…
- ಶ್ರೀ
POPULAR STORIES :
ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ
ರೈ… ಅನ್ ಟೋಲ್ಡ್ ಸ್ಟೋರಿಗೆ ಮುಹೂರ್ತ ಫಿಕ್ಸ್..!
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!
ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?
ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ