ದಿ ವಿಲನ್ ಟೀಸರ್ ನೋಡೋಕೆ‌ 500 ರೂ ಕೊಡ್ಬೇಕು…!

admin
By admin
1 Min Read

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ‌ ‘ದಿ ವಿಲನ್ ‘ ಟೀಸರ್ ಯಾವಾಗ ಬಿಡುಗಡೆ ಆಗುತ್ತೆ ಎಂದು ನಿರ್ದೇಶಕ ಪ್ರೇಮ್ ಮತ್ತು ತಂಡವನ್ನು ಅಭಿಮಾನಿಗಳು ಬಹು ದಿನಗಳಿಂದ ಪ್ರಶ್ನಿಸುತ್ತಿದ್ದರು.
ದಿ ವಿಲನ್ ಟೀಸರ್ ಇದೇ 28 ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಜಿ ಟಿ ವರ್ಲ್ಡ್ ಮಾಲ್ ನಲ್ಲಿ ಬಿಡುಗಡೆ ಆಗಲಿದೆ.
ವಿಶೇಷವೆಂದರೆ ಟೀಸರ್ ಶೋ‌ಗೆ 500 ರೂ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ನೀವು 500 ರೂ ನೀಡಿ ಟೀಸರ್ ನೋಡಬೇಕಿದೆ.


ಸುಮಾರು 2500 ಟಿಕೆಟ್ ಗಳನ್ನು ಮಾರಾಟ ಮಾಡುವ ನಿರೀಕ್ಷೆಯನ್ನು ಪ್ರೇಮ್ ಹೊಂದಿದ್ದು, ಇದರಿಂದ ಬರುವ ಹಣವನ್ನು ಸಂಕಷ್ಟದಲ್ಲಿರುವ ನಿರ್ದೇಶಕರಿಗೆ ನೀಡುತ್ತಾರೆ.

Share This Article