‘ದಿ ವಿಲನ್’ ಹಾಡು ವಿವಾದಕ್ಕೆ ಸಿಲುಕಲಿದೆಯೇ…?

admin
By admin
1 Min Read

‘ಬಾಸ್’ ಕಾಂಟ್ರವರ್ಸಿಗೆ ಸ್ಯಾಂಡಲ್ ವುಡ್ ‌ನಲ್ಲಿ ಬ್ರೇಕ್ ಬೀಳುವ ಲಕ್ಷಣ ಸದ್ಯಕ್ಕೆ ಕಂಡುಬರುತ್ತಿಲ್ಲ. ಇದೀಗ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾದ ಹಾಡೊಂದು ವಿವಾದಕ್ಕೆ ಸಿಲುಕುವ ಸಾಧ್ಯತೆ ಇದೆ.


ಈ ಚಿತ್ರದಲ್ಲಿ ‘ನಿನ್ನೆ ಮೊನ್ನೆ ಬಂದೋರೆಲ್ಲ ನಾನೇ ನಂಬರ್ ಒನ್ ಅಂತಾರೋ’ …ಎಂಬ ಹಾಡಿದೆ. ಈ ಹಾಡಿಗೆ ಶಿವಣ್ಣ ಸಖತ್ ಸ್ಟೆಪ್ ಹಾಕಿದ್ದಾರೆ.


ಈ ಹಾಡಿನ ಸಾಲನ್ನು ಬರೆದು ನಿರ್ದೇಶಕ ಪ್ರೇಮ್ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನಿಧಾನಕ್ಕೆ ಚರ್ಚೆ ಶುರುವಾಗಿದೆ. ಕಾಂಟ್ರವರ್ಸಿ ಮಾಡೋಕೆ‌ ರೆಡಿನಾ ಎಂದು ಪ್ರೇಮ್ ಅವರನ್ನು ಪ್ರಶ್ನಿಸಲಾಗುತ್ತಿದೆ. ಇದು ದೊಡ್ಡ ವಿವಾದವನ್ನು ಸೃಷ್ಟಿಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.

https://www.facebook.com/TheVillainMovie/posts/2000283336670945

Share This Article