ಬಡ ಕುಟುಂಬದಲ್ಲಿ ಹುಟ್ಟಿದ ಎಲ್ಲರಂತೆಯೇ ಅವರಿಗೂ ದುಡ್ಡು ಮಾಡೋ ಆಸೆ ಇತ್ತು..! ಮನೆಯ ಆರ್ಥಿಕ ಸಮಸ್ಯೆ ಅವರನ್ನು ಪದೇ ಪದೇ ಕಾಡ್ತಾ ಇತ್ತು..! ಓದಿ ಕೆಲಸಕ್ಕೆ ಸೇರಿದ್ರೂ, ಒಳ್ಳೆಯ ಸಂಬಳ ಬಂದ್ರೂ ಆ ಕೆಲಸ ಮತ್ತು ಸಂಬಳ ಎರಡೂ ಅವರಿಗೆ ಹಿಡಿಸಲಿಲ್ಲ..! ತನ್ನ ಅಭಿರುಚಿಗೆ ತಕ್ಕದಾದ ಕೆಲಸ ಇದಲ್ಲಾ ಅಂತ ಅವರು ಡಿಸೈಡ್ ಮಾಡಿ ಬಿಟ್ರು..! ಕಂಪನಿ ಉನ್ನತ ಸ್ಥಾನವನ್ನು ನೀಡಿ ಇನ್ನೂ ಹೆಚ್ಚನ ಸಂಬಳವನ್ನುಕೊಡ್ತೀವಿ ಬಿಟ್ಟು ಹೋಗ್ಬೇಡಿ ಸಾರ್ ಅಂತ ಅವರನ್ನು ಕೇಳಿಕೊಂಡಿತ್ತು..! ಆದರೆ ಯಾವತ್ತೂ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಮತ್ತೆ ಹಿಂದಕ್ಕೆ ತೆಗೆದುಕೊಳ್ಳೊ ಜೀವಮಾನ ಅವರದ್ದಾಗಿರ್ಲಿಲ್ಲ..! ಕೆಲಸವನ್ನು ಬಿಟ್ಟೇ ಬಿಟ್ಟರು..! ಬೇರೆ ಕಂಪನಿಗೂ ಕೆಲಸಕ್ಕೆ ಹೋಗ್ಲಿಲ್ಲ..! ಇಡೀ ಜಗತ್ತನ್ನೇ ಸುತ್ತೋ ಕೆಲಸವನ್ನು ಮಾಡಿದ್ರು..! ಜಗತ್ತನ್ನು ಸುತ್ತಿ ಹಣ ಮಾಡುವಲ್ಲಿ ಗೆದ್ದೇ ಬಿಟ್ರು..! ವಾವ್ಹ್..
ಅವರ ಹೆಸರು ಜಾನಿ ವಾರ್ಡ್ ಅಂತ. ಐರ್ಲ್ಯಾಂಡ್ ನವರು ಮನೆಯಲ್ಲಿ ಕಷ್ಟವಿತ್ತು. ಕಷ್ಟದಲ್ಲಿ ಬೆಳೆದ ಇವರಿಗೆ ಹಣದ ಬೆಲೆ ಗೊತ್ತಿತ್ತು. ಕಷ್ಟಪಟ್ಟು ಓದಿದ್ರು, ಪದವಿ ಮುಗೀತಾ ಇದ್ದಂಗೇನೇ ಆಸ್ಟ್ರೇಲಿಯಾದಲ್ಲಿ ಸೇಲ್ಸ್ ಜಾಬ್ ಸಿಕ್ತು. ತಿಂಗಳ ಸಂಬಳ ಬರೊಬ್ಬರಿ 1325969.00 ರೂಪಾಯಿಗಳು (20,000ಡಾಲರ್). ಖುಷಿಯಿಂದಲೇ ಕೆಲಸ ಮಾಡ್ತಾ ಇದ್ರು..! ಆದ್ರೆ ಇದ್ದಕ್ಕಿದ್ದಂತೆ ಒಂದು ದಿನ ನಾನು ಬೇರೆ ಏನಾದರೂ ಹೊಸದನ್ನು ಮಾಡ್ಬೇಕು ಅಂತ ನಿರ್ಧಾರ ಮಾಡಿಬಿಟ್ಟರು..! ಸ್ವಂತವಾಗಿ ಏನಾದರೂ ಮಾಡ್ಬೇಕು..! ನಾನು ಮಾಡೊ ಕೆಲಸದಲ್ಲಿ ಖುಷಿಯೂ ಇರ್ಬೇಕು, ಎಂಜಾಯ್ಮೆಂಟ್ ಕೂಡ ಸಿಗ್ಬೇಕು ಅಂತ ತುಂಬಾನೇ ಯೋಚ್ನೆ ಮಾಡಿದ್ರು..! ಹಾಗೆ ಯೋಚನೆ ಮಾಡಿ ಮಾಡಿ ಕೊನೆಗೂ ಡಿಸೈಡ್ ಮಾಡ್ತಾರೆ ಜಗತ್ತನ್ನು ಸುತ್ತಲು..! ವಿಶ್ವ ಸುತ್ತೋ ಆಲೋಚನೆ ತಲೆಯಲ್ಲಿ ಬಂದಿದ್ದೇ ತಡ ಕೆಲಸಕ್ಕೆ ರಾಜೀನಾಮೆ ನೀಡಿದ್ರು..! ಬೇಡ ಸಾರ್ ನೀವು ನಮ್ಮಲ್ಲಿ ಇರಿ, ಹೋಗ್ಬೇಡಿ, ಉನ್ನತ ಹುದ್ದೆಯನ್ನು ಕೊಡ್ತೀವಿ..! ಸಂಬಳವನ್ನು ಎರಡು ಪಟ್ಟು ಹೆಚ್ಚಿಸ್ತೀವಿ..! ಅಂತ ಕಂಪನಿಯವರು ಕೇಳಿಕೊಂಡರೂ ಮನಸ್ಸು ಬದಲಾಯಿಸದ ವಾರ್ಡ್ ಜಿಂಬಾಬ್ವೆ ಕಡೆ ಹೋಗಿಯೇ ಬಿಟ್ಟರು..! ಜಿಂಬಾಬ್ವೆಯಿಂದ ಶುರುವಾಯಿತು ಇವರ ವಿಶ್ವಪ್ರವಾಸ.
ವಿಶ್ವಪ್ರವಾಸ ಮಾಡ್ತಾ ಮಾಡ್ತಾ ಇದ್ದಂಗೂ ದುಡ್ಡು ಖರ್ಚು ಆಗುವುದಕ್ಕಿಂತ ಹೆಚ್ಚು ಹೆಚ್ಚಾಗಿ ಬರಲಾರಂಭಿಸ್ತು..! ದುಡ್ಡು ಬರೋಕೆ ಕಾರಣ ಅವರು ವಿಶ್ವ ಸುತ್ತಿದ್ದಲ್ಲ ಸಾರ್. ವಿಶ್ವ ಸುತ್ತಿ ನೋಡಿದ ಸ್ಥಳಗಳ ಬಗ್ಗೆ ತನ್ನ ಬ್ಲಾಗ್ ನಲ್ಲಿ ಬರೆದುಕೊಳ್ಳೋಕೆ ಶುರುಮಾಡಿದ್ದು..!
ಇವತ್ತು ಸೋಶಿಯಲ್ ಮೀಡಿಯಾ ತುಂಬಾನೇ ಪ್ರಸಿದ್ಧವಾಗಿದೆ. ಇದನ್ನು ಚೆನ್ನಾಗಿ ಅರಿತಿರವ ವಾರ್ಡ್ ಆನ್ ಲೈನ್ ಮೀಡಿಯಾದತ್ತ ಮುಖಮಾಡಿ, ದುಡ್ಡು ಮಾಡೋದನ್ನು ಕಲಿತರು. OneStep4Ward ಎಂಬ ತನ್ನ ಬ್ಲಾಗ್ನಲ್ಲಿ ಫೋಟೋದೊಂದಿಗೆ ತಾವು ನೋಡಿದ ಸ್ಥಳದ ಬಗ್ಗೆ ಬರೆದರು ಈ ಬ್ಲಾಗ್ ಅನ್ನು Step4Ward Media ಎಂಬ ಆನ್ ಲೈನ್ ಮೀಡಿಯಾವನ್ನಾಗಿ ಮಾರ್ಪಡಿಸಿದ್ರು..! ಈ ತಮ್ಮ ಮೀಡಿಯಾದಲ್ಲಿ ತಮ್ಮ ಪ್ರವಾಸವನ್ನು ದಾಖಲಿಸುತ್ತಾ, ಓದುಗರಿಗೆ ಬೇರೆ ಬೇರೆ ದೇಶದ ಬಗ್ಗೆ ತಿಳಿಸತೊಡಗಿದ್ರು..! ಇವರ ಮೀಡಿಯಾ ಇವತ್ತು 66282450.00 ಬೆಲೆ ಬಾಳುವ ದೊಡ್ಡ ಸಂಸ್ಥೆ..! ಕೆಲಸ ಬಿಟ್ಟು ತನ್ನದೇ ಕಂಪನಿಯನ್ನು ಆರಂಭಿಸಿ, ವಿಶ್ವ ಸುತ್ತಿ ದುಡ್ಡು ಮಾಡ್ತಾ ಇರೋ ವಾರ್ಡ್ ಯುವಕರಿಗೆ ಸ್ಪೂರ್ತಿ. ಹೊಸದನ್ನೇನಾದರೂ ಮಾಡ್ಬೇಕು ಅಂತ ಅನ್ಕೊಂಡವರಿಗೆ ಮಾದರಿ. ಯೋಚನೆ ಮಾಡಿದ್ರೆ ಐಡಿಯಾ ಬರುತ್ತೆ..! ಬಂದ ಐಡಿಯಾಗಳನ್ನು ಕಾರ್ಯರೂಪಕ್ಕೆ ತಂದ್ರೆ ತಡವಾದರೂ ಗೆಲುವು ನಿಶ್ಚಿತ..
- ಶಶಿಧರ ಡಿ ಎಸ್ ದೋಣಿಹಕ್ಲು
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಸಾಮಾಜಿಕ ಜಾಲತಾಣಗಳಲ್ಲಿ ಇವರ ಒಂದು ಪೋಸ್ಟ್ ಮೌಲ್ಯ 8289993.75 -19898985.00 ರೂಪಾಯಿಗಳು..!
78 ವರ್ಷದ ಅಜ್ಜಿಯನ್ನು ರಕ್ಷಿಸಿದ 8ರ ಹುಡುಗಿ..! ಕಾಡಿನ ಮಧ್ಯೆ 4.5 ಕಿಮೀ ನಡೆದಿದ್ದಳಂತೆ ಆ ಪುಟ್ಟ ಬಾಲೆ..!
ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!
ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!
ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!
ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !
ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!