ಪ್ರವಾಸ ಹೋಗಿದ್ದ ಮಕ್ಕಳು ಕುಡಿಯಲು ನೀರು ಕೊಡಿ ಸಾರ್ ಅಂತ ಕೇಳಿದ್ರೆ ಈ ಶಾಲೆಯ ಮೇಷ್ಟ್ರು ಮದ್ಯ ಕುಡಿಸಿದ್ದಾರಂತೆ…!
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೊಮ್ಮಲದೇವಿಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಮದ್ಯ ನೀಡಿದ ಮಹಾನುಭಾವರು…!
ಮುಖ್ಯಶಿಕ್ಷಕ ಸಚ್ಚಿದಾನಂದ್, ಸಹಶಿಕ್ಷಕರಾದ ಶೇಕ್ ಮುಜಾಮಿಲ್ ಹಾಗೂ ರಾಥೋಡ್ ಆರೋಪಿ ಶಿಕ್ಷಕರು…! ಧರ್ಮಸ್ಥಳ, ಹೊರನಾಡು ಮೊದಲಾದ ಕಡೆಗಳಿಗೆ ಮಕ್ಕಳನ್ನು ಪ್ರವಾಸ ಕರೆದುಕೊಂಡು ಹೋಗಿದ್ದಾರೆ. ವಾಪಸ್ಸಾಗುವಾಗ ಮಕ್ಕಳು ಬಸ್ ನಲ್ಲಿ ಡ್ಯಾನ್ಸ್ ಮಾಡಿ, ಕುಣಿದು ಕುಪ್ಪಳಿಸಿ ಸುಸ್ತಾಗಿ, ಸಾರ್ ಕುಡಿಯೋಕೆ ನೀರು ಬೇಕು ಅಂತ ಕೇಳಿಕೊಂಡಿದ್ದಾರೆ.
ಈ ಶಿಕ್ಷಕರು ಅದಕ್ಕು ಮುನ್ನ ತಾವು ನೀರಿನ ಬಾಟಲ್‍ನಲ್ಲಿ ಮದ್ಯಹಾಕಿಕೊಂಡು ಕುಡಿದಿದ್ದರಂತೆ. ಆ ಬಾಟಲಿಗೆ ತುಂಬಿದ್ದ ನೀರನ್ನು , ಅಂದ್ರೆ ಮದ್ಯ ಮಿಶ್ರಿತ ನೀರನ್ನು ಮಕ್ಕಳಿಗೆ ನೀಡಿದ್ದಾರೆ. 9 ಮತ್ತು 10ನೇ ತರಗತಿಯ ಸುಮಾರು 30 ವಿದ್ಯಾರ್ಥಿಗಳಿಗೆ ಈ ನೀರು ಕುಡಿಸಿದ್ದಾರಂತೆ. ಇದರಿಂದ ಕೆಲವು ವಿದ್ಯಾರ್ಥಿಗಳು ನಿದ್ರೆಗೆ ಜಾರಿದ್ರು, ಮತ್ತೆ ಕೆಲವರು ವಾಂತಿ ಮಾಡಿಕೊಂಡ್ರು, ಮತ್ತೊಂದಿಷ್ಟು ಮಂದಿಯ ಪ್ರಜ್ಞೆ ತಪ್ಪಿತ್ತು ಎಂದು ಸ್ವತಃ ವಿದ್ಯಾರ್ಥಿಗಳೇ ಆರೋಪಿಸಿದ್ದಾರೆ. ಆದ್ರೆ ಶಿಕ್ಷಕರು ನಾವು ಯಾವುದೇ ತಪ್ಪು ಮಾಡಿಲ್ಲ. ಬೇಕಾದ್ರೆ ದೇವರ ಮೇಲೆ ಪ್ರಮಾಣ ಮಾಡ್ತೀವಿ ಎಂದು ಹೇಳುತ್ತಿದ್ದಾರೆ. ಶಿಕ್ಷಕರ ಅಮಾನಿತಿಗೆ ಪೋಷಕರು ಆಗ್ರಹಿಸಿದ್ದಾರೆ.