TNIT ಗ್ರಾಂಡ್ ಸಕ್ಸಸ್ ಹೇಗಿತ್ತು ಗೊತ್ತಾ.. !
TNIT south indian media Award ಕಳೆದ ತಿಂಗಳು ಅದ್ದೂರಿಯಾಗಿ ನಡೆದಿತ್ತು. ಈ ನಿಮಿತ್ತ ಸಕ್ಸಸ್ ಮೀಟ್ ನ ಹಮ್ಮಿಕೊಳ್ಳಲಾಗಿತ್ತು. ಸಂಜೆ 7 ಗಂಟೆಗೆ ಆರ್ ಟಿ ನಗರದ ಜಲ್ಸಾದಲ್ಲಿ ಸಕ್ಸಸ್ ಮೀಟ್ ನಡೆಯಿತು.

ನಿಮಗೆಲ್ಲ ಗೊತ್ತಿರುವ ಹಾಗೇ ಈ ಕಾರ್ಯಕ್ರಮ ದೃಶ್ಯ ಮಾಧ್ಯಮದ ಸಾಧಕರಿಗೆ ಗೌರವಿಸುವ ಉದ್ದೇಶ ಹೊಂದಿರುವುದು. ಹೀಗಾಗಿ ಜರ್ನಲಿಸ್ಟ್ ಗಳಿಂದ ಜರ್ನಲಿಸ್ಟ್ ಗಳಿಗಾಗಿ ನಡೆದ TNIT ಪ್ರಶಸ್ತಿ ಸಮಾರಂಭ ಯಶಸ್ವಿಯಾಗಿದ್ದು ಈ ಮಾಧ್ಯಮದ ಸ್ನೇಹಿತರಿಂದ ಹೀಗಾಗಿ “ಇದರ ಗೆಲುವು ನಿಮಗಾಗಿ-ನಲಿವು ನಮ್ಮೆಲ್ಲರಿಗಾಗಿ” ಎಂಬ ಉದ್ದೇಶದಿಂದ ಸಕ್ಸಸ್ ಮೀಟ್ ನಡೆಸಲಾಯ್ತು.

ಜಲ್ಸಾದಲ್ಲಿ ನಡೆದ ಈ ಮೀಟ್ ಗೆ ಚಿತ್ರರಂಗದ ತಾರೆಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿದರು. ನಟ ಲವ್ಲಿ ಸ್ಟಾರ್ ಪ್ರೇಮ್ ದಂಪತಿಗಳು, ಅರವಿಂದ ವೆಂಕಟೇಶ ರೆಡ್ಡಿ, ಶ್ರೀನಗರ ಕಿಟ್ಟಿ , ನಿರ್ದೇಶಕ ಶ್ರೀನಂದನ್, ತಿಲಕ್, ವಾಣಿಶ್ರೀ, ಅರವಿಂದ ಕೆಪಿ ಸೇರಿದಂತೆ ಹಲವು ಸ್ಟಾರ್ ಗಳು ಆಗಮಿಸಿದ್ದರು.

ಮಾಧ್ಯಮದ ಸಾಧಕರು-ಸ್ನೇಹಿತರುಗಳ ಸಮಾಗಮ ಕೂಡ ಇಲ್ಲಿ ಆಗಿತ್ತು. ಬಿ ಟಿವಿ ಮುಖ್ಯಸ್ಥರಾದ ಕುಮಾರ, ಗಣೇಶ ಕಾಸರಗೋಡು, ನಿರ್ಮಲಾ ಎಲಿಗಾರ, ರಾ ಚಿಂತನ್, ಪ್ರಶಾಂತ್ ಬಿಸ್ಲರಿ, ರಾಘವ ಸೂರ್ಯ, ದಿವ್ಯಶ್ರೀ, ವಿಟ್ಟಲ್ ಶೆಟ್ಟಿ ಸೇರಿದಂತೆ ಹಲಾವು ಮಾಧ್ಯಮದ ಸ್ನೇಹಿತರು ಬಂದು ಸಕ್ಸಸ್ ಮೀಟನ ಯಶಸ್ವಿಗೊಳಿಸಿದರು.

ಇನ್ನೂ ಈ ಮೀಟ್ ನಲ್ಲಿ ಟಿಎನ್ ಐಟಿಯ ಎಂಡಿ ಸುಗುಣ ರಘು, ಸಿಇಓ ರಘು ಭಟ್ , ಪ್ರಧಾನ ಸಂಪಾದಕಿ ಮೀರಾ , ಪ್ರಾಜೆಕ್ಟ್ ಹೆಡ್ ಡಾ.ಮಧುಕಾಂತಿ. ಮಾರ್ಕೆಟಿಂಗ್ ಹೆಡ್ ಖುಷಿ ಸೇರಿದಂತೆ ಟಿಎನ್ ಐಟಿಯ ಸಮಸ್ತ ಕುಟುಂಬದ ಸದಸ್ಯರು ಇದ್ದರು. ಈ ವೇಳೆ ಮಾತನಾಡಿದ ಗಣ್ಯರು ಟಿಎನ್ ಐಟಿ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಸೌಥ್ ಇಂಡಿಯನ್ ಮೀಡಿಯಾ ಅವಾರ್ಡ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕೇಕ್ ಕಟ್ ಮಾಡುವ ಮೂಲಕ ಸಂಭ್ರಮವನ್ನು ಇಮ್ಮುಡಿಗೊಳಿಸಿದರು. ಒಟ್ಟಾರೆಯಾಗಿ ಮಾಧ್ಯಮದವರಿಂದ ಮಾಧ್ಯಮದವರಿಗಾಗಿ ನಡೆದ ಈ ಅದ್ದೂರಿ ಸಕ್ಸಸ್ ಮೀಟ್ ನೋಡುಗರ ಕಣ್ಮನ ಸೆಳೆಯಿತು.









