TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ನ ಮೊದಲ ಹೆಜ್ಜೆ !

Date:

TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ನ ಮೊದಲ ಹೆಜ್ಜೆ !

 

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿಯನ್ನ ಏರ್ಪಡಿಸಿತ್ತು. ನಿನ್ನೆ ಅಂದರೆ ಮಂಗಳವಾರ ಸಂಜೆ 7:30 ಕ್ಕೆ ಹೈಡ್ ಪಾರ್ಕ್ ಹೊಟೇಲ್ ಸದಾಶಿವ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ನಮ್ಮ TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಗೆ ಸಂಬಂಧಿಸಿದಂತೆ ಮಾಹಿತಿಯನ್ನ ತಿಳಿಸಲಾಯ್ತು.

ಈ ವೇಳೆ ಮಾತನಾಡಿದ ಗಣೇಶ ಕಾಸರಗೋಡು ಅವರು TNIT ಮೀಡಿಯಾ ಅವಾರ್ಡ್ ನೋಡಿ ಆಶ್ಚರ್ಯವಾಗಿತ್ತು. ಸಿನಿಮಾ ರಂಗದಲ್ಲಿ ಕಾಣಸಿಗುವ ವೈಭವವನ್ನ ನಾವು ಇಲ್ಲಿ ನೋಡಿದೆವು. ರಘು ಭಟ್ ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡುತ್ತಿರುತ್ತಾರೆ, ಮಾಧ್ಯಮದ ಮೇಲಿನ ಈ ಪ್ರೀತಿಗೆ ಶುರುವಾದ ಈ ಕಾರ್ಯಕ್ರಮ ಹೀಗೆ ಇರಲಿ. ನಮ್ಮನ್ನ ಜೂರಿಯಾಗಿ ಕರೆದಿದ್ದಕ್ಕೆ ಧನ್ಯವಾದ ಎಂದರು.

ಇನ್ನೂ ಕಾರ್ಯಕ್ರಮದ ಅಥಿತಿಯಾಗಿ ಬಂದಿದ್ದ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಮಾತನಾಡಿ, ಮಾಧ್ಯಮ ನಮ್ಮ ಏಳಿಗೆಗೆ ಸಾಕಷ್ಟು ಸಹಕರಿಸಿದೆ. ಅಲ್ಲಿ ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡುವವರು ಇರುತ್ತಾರೆ. ಅಂತವರನ್ನ ಗುರುತಿಸಿ ಸನ್ಮಾನಿಸುವುದು ಒಳ್ಳೆಯ ಸಂಗತಿ. ಇನ್ನೂ ಮುಂದಿನ‌ ದಿನಗಳಲ್ಲಿ ಪತ್ರಿಕಾರಂಗದಲ್ಲಿ ಇರುವ ಸಾಧಕರಿಗೆ ಪ್ರಶಸ್ತಿ ಕೊಡಿ ಎಂದು ಸಲಹೆ ನೀಡಿದರು.

ತುಪ್ಪದ ಬೆಡಗಿ ರಾಗಿಣಿ ಮಾತನಾಡಿ , ನಾವು ಯಾವುದೆ ಚಿಕ್ಕ ಕೆಲಸ ಮಾಡಿದರು ಅದನ್ನ ಗುರುತಿಸಿ ಬೆನ್ನು ತಟ್ಟುವುದು ಒಳ್ಳೆಯ ವಿಚಾರ. ನಾವು ಅದನ್ನ ರೂಢಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ TNIT ಮಾಧ್ಯಮ‌ ಮಿತ್ರರ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿತ್ತಿರುವುದು ಖುಷಿಯ ವಿಚಾರ ಎಂದರು.

ಇನ್ನೊಬ್ಬ ಜೂರಿಯಾದ ದೂರದರ್ಶನ ಹಾಗೂ ಆಕಾಶವಾಣಿಯ ನಿವೃತ್ತ ನಿರ್ದೇಶಕಿ ನಿರ್ಮಲಾ ಯಲಿಗಾರ ಮಾತನಾಡಿ ಮಾಧ್ಯಮದಲ್ಲಿ ಕೆಲಸ ಮಾಡುವವರನ್ನ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವುದು ಅಷ್ಟು ಸುಲಭದ ಮಾತಲ್ಲ. ನಾನು ಕೂಡ ಈ ಹಿಂದೆ ಈ ಪ್ರಶಸ್ತಿಗೆ ಭಾಜನಳಾಗಿದ್ದೆ. ಈಗ ಇಲ್ಲಿ ಜೂರಿಯಾಗಿರುವುದು ಖುಷಿಯ ವಿಚಾರ. ನಾವು ಕೂಡ ಮಾಧ್ಯಮದ ಮೇಲೆ ಹುಚ್ಚು ಪ್ರೀತಿ ಹೊಂದಿರುವವರು ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ಇದೇ ವೇಳೆ ಮಾತನಾಡಿದ TNIT ಸಂಸ್ಥೆಯ ಸಿಇಓ ರಘು ಭಟ್, ಗಣೇಶ್ ಕಾಸರಗೋಡು ಅವರು ನಮ್ಮ‌ ಎಲ್ಲಾ ಕೆಲಸಗಳಿಗೆ ಆಶಿರ್ವಾದ ಮಾಡಿ ಇಷ್ಟು ವರ್ಷಗಳಿಂದ ಸಹಕರಿಸುತ್ತಾ ಬಂದಿದ್ದಾರೆ. ಹಾಗೇ ಪ್ರೇಮ್ ಅವರು ಸಾಕಷ್ಟು ಸಾಥ್ ನೀಡಿದ್ದಾರೆ. ನಮ್ಮ ಕಾರ್ಯಕ್ರಮದ ಪ್ರತಿ ಹಂತದಲ್ಲೂ ಸಹಕರಿಸಿದ್ದಾರೆ ಅವರಿಗೆ ವಿಶೇಷವಾಗಿ ಧನ್ಯವಾದಗಳು ಎಂದರು.‌ ಹಾಗೂ TNIT ಅವಾರ್ಡ್ ಬಗ್ಗೆ ಮಾಹಿತಿ ತಿಳಿಸಿದ ಅವರು ಕಳೆದ ವರ್ಷದಂತೆ ಈ ವರ್ಷವೂ ಸಹ ಕಾರ್ಯಕ್ರಮ ಜರುಗಲಿದೆ ಎಂದರು. ಇನ್ನೂ ಮಾಧ್ಯವರ ಆಯ್ಕೆಯ ಬಗ್ಗೆ ಕೇಳಿದಾಗ ಉತ್ತರಿಸಿದ ರಘು ಭಟ್ ನಾವು ಅವರು ಎಷ್ಟು ವರ್ಷಗಳಿಂದ ಮಾಧ್ಯಮದಲ್ಲಿ ಕೆಲಸ ಮಾಡಿದ್ದಾರೆ ಹಾಗೂ ಅವರ ಸಾಧನೆಗಳ ಮೇಲೆ ಆಯ್ಕೆ ಮಾಡುತ್ತೇವೆ ಎಂದರು.

 

ಎವಿಆರ್ ಅವರ ಲೀಗಲ್ ಅಡ್ವೈಸರ್ ಶೈಲೇಶ್ ಮಾತನಾಡಿ, ಎವಿಆರ್ ರವರು ಈ ಕಾರ್ಯಕ್ರಮಕ್ಕೆ ಕೈ ಜೋಡಿದಿರುವುದು ಖುಷಿಯ ವಿಚಾರ. ಸಮಾಜದಲ್ಲಿ ಮಾಧ್ಯಮದ ಕೆಲಸ ಶ್ಲಾಘನೀಯ ಹೀಗಾಗಿ ಅವರನ್ನ ಗುರುತಿಸಿ ಪ್ರಶಸ್ತಿ ನೀಡುವುದು ಉತ್ತಮ ಕೆಲಸ ಎಂದು ಶುಭ ಹಾರೈಸಿದರು.

 

ಸುದ್ದಿಗೋಷ್ಟಿಯಲ್ಲಿ ಅತಿಥಿಯಾಗಿ ನೆನಪಿರಲಿ ಪ್ರೇಮ್, ತುಪ್ಪದ ಬೆಡಗಿ ರಾಗಿಣಿ, ಜೂರಿಯಾಗಿರುವ ಹಿರಿಯ ಸಿನಿಮಾ‌ ಪತ್ರಕರ್ತ ಗಣೇಶ ಕಾಸರಗೋಡು, ದೂರದರ್ಶನ ಹಾಗೂ ಆಕಾಶವಾಣಿಯ ನಿವೃತ್ತ ನಿರ್ದೇಶಕಿ ನಿರ್ಮಲಾ ಯಲಿಗಾರ ಇದ್ದರು. ಇನ್ನೂ TNIT ಕಾರ್ಯಕ್ರಮದ ಟೈಟಲ್ ಸ್ಪಾನ್ಸರ್ ಅರವಿಂದ ವೆಂಕಟೇಶ ರೆಡ್ಡಿ ಅವರ ಲೀಗಲ್ ಅಡ್ವೈಸರ್ ಶೈಲೇಶ್, TNIT ಎಂಡಿ ಸುಗುಣಾ, ಸಿಇಓ ರಘು ಭಟ್, ಸಂಪಾದಕರು ಮೀರಾ, ಮೇಲ್ವಿಚಾರಕಿ ಡಾ.ಮಧುಕಾಂತಿ, ಮಾರ್ಕೆಟಿಂಗ್ ಹಾಗೂ ಡಿಜಿಟಲ್ ಹೆಡ್ ಖುಷಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...