ಬೆಂಗಳೂರು: ಬಹು ನಿರೀಕ್ಷಿತ TNIT ಸೌತ್ ಮೀಡಿಯಾ ಅವಾರ್ಡ್ಸ್ ಸಮಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇದೇ ಆಗಸ್ಟ್ 23 ರಂದು ಶೃಂಗಾರ ಪ್ಯಾಲೇಸ್‌ನಲ್ಲಿ ಕಾರ್ಯಕ್ರಮ ಜರುಗಲಿದೆ. ಕರ್ನಾಟಕ ಮಾತ್ರವಲ್ಲದೆ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡಿನ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.
ಈ ಬಾರಿಯೂ ದಕ್ಷಿಣ ಭಾರತಾದ್ಯಂತ ಪ್ರಶಸ್ತಿ ನೀಡುತ್ತಿರುವ ಹಿನ್ನೆಲೆಯಲ್ಲಿ, TNIT ಮೀಡಿಯಾ ಸಂಸ್ಥೆಯು ತಮಿಳುನಾಡಿನ ಚೆನ್ನೈ, ಹೈದರಾಬಾದ್ ಹಾಗೂ ಕೇರಳಕ್ಕೆ ಭೇಟಿ ನೀಡಿ, ಪ್ರತಿ ಮಾಧ್ಯಮ ಕಚೇರಿಗೆ ತೆರಳಿ ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನ ನೀಡಿತು. ಅಷ್ಟೇ ಅಲ್ಲದೆ, ಪತ್ರಿಕಾಗೋಷ್ಠಿಯನ್ನೂ ಕೂಡಾ ಹಮ್ಮಿಕೊಳ್ಳಲಾಗಿತ್ತು.
TNIT ಸೌತ್ ಇಂಡಿಯಾ ಮೀಡಿಯಾ ಅವಾರ್ಡ್‌ನ ಮೊದಲ ಹೆಜ್ಜೆ ಎನ್ನುವಂತೆ, TNIT ಮೀಡಿಯಾ ಬೆಂಗಳೂರಿನ ಸದಾಶಿವನಗರದಲ್ಲಿರುವ ಹೈಡ್ ಪಾರ್ಕ್ ಹೋಟೆಲ್‌ನಲ್ಲಿ ಮೊದಲು ಸುದ್ದಿಗೋಷ್ಠಿಯನ್ನು ನಡೆಸಿತು. ಆ ಸುದ್ದಿಗೋಷ್ಠಿಯಲ್ಲಿ ಅತಿಥಿಗಳಾಗಿ ನೆನಪಿರಲಿ ಪ್ರೇಮ್, ತುಪ್ಪದ ಬೆಡಗಿ ರಾಗಿಣಿ, ಜ್ಯೂರಿಯಾಗಿರುವ ಹಿರಿಯ ಸಿನಿಮಾ ಪತ್ರಕರ್ತ ಗಣೇಶ ಕಾಸರಗೋಡು, ದೂರದರ್ಶನ ಹಾಗೂ ಆಕಾಶವಾಣಿಯ ನಿವೃತ್ತ ನಿರ್ದೇಶಕಿ ನಿರ್ಮಲಾ ಯಲಿಗಾರ ಉಪಸ್ಥಿತರಿದ್ದರು. ಇನ್ನೂ TNIT ಕಾರ್ಯಕ್ರಮದ ಟೈಟಲ್ ಸ್ಪಾನ್ಸರ್ ಅರವಿಂದ ವೆಂಕಟೇಶ ರೆಡ್ಡಿ ಅವರ ಲೀಗಲ್ ಅಡ್ವೈಸರ್ ಶೈಲೇಶ್, TNIT ಎಂಡಿ ಸುಗುಣಾ, ಸಿಇಓ ರಘು ಭಟ್, ಸಂಪಾದಕಿ ಮೀರಾ, ಮೇಲ್ವಿಚಾರಕಿ ಡಾ. ಮಧುಕಾಂತಿ, ಮಾರ್ಕೆಟಿಂಗ್ ಹಾಗೂ ಡಿಜಿಟಲ್ ಹೆಡ್ ಖುಷಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಹೈದರಾಬಾದ್‌ನ ಪ್ರಸಾದ್ ಫಿಲಂ ಲ್ಯಾಬೋರೇಟರೀಸ್‌ನಲ್ಲಿ ಟಿಎನ್‌ಐಟಿ ತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ, ಚಲನಚಿತ್ರ ವಿಮರ್ಶಕರ ಸಂಘದ ಹಿರಿಯ ಪುರಸ್ಕೃತ ಪ್ರಭು, 30 ವರ್ಷಗಳ ಇಂಡಸ್ಟ್ರಿಯ ಅನುಭವವಿರುವ ಹಾಗೂ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹಿರಿಯ ನಟ ಶುಭಲೇಖ ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಶುಭ ಹಾರೈಸಿದರು. ಇನ್ನೂ ಹಿರಿಯ ನಟ, ಬರಹಗಾರ, ಕವಿ, ನಟನಾ ತರಬೇತುದಾರ, ಮಯೂಕಾ ಫಿಲ್ಮ್ ಇನ್‌ಸ್ಟಿಟ್ಯೂಟ್ ಸಂಸ್ಥಾಪಕ ಉತ್ತೇಜ್, TNIT ಎಂಡಿ ಸುಗುಣಾ, ಸಿಇಓ ರಘು ಭಟ್, ಮೇಲ್ವಿಚಾರಕಿ ಡಾ. ಮಧುಕಾಂತಿ, ಮಾರ್ಕೆಟಿಂಗ್ ಹಾಗೂ ಡಿಜಿಟಲ್ ಹೆಡ್ ಖುಷಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ತಮಿಳುನಾಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟಿಎನ್‌ಐಟಿ ತಂಡಕ್ಕೆ ಹಿರಿಯ ನಟ ಹಾಗೂ ನಿರ್ದೇಶಕ ಶರವಣನ್, ನಟ ಹಾಗೂ ನೃತ್ಯ ಸಂಯೋಜಕ ನಾಗೇಂದ್ರ ಪ್ರಸಾದ್ ಭಾಗಿಯಾಗಿ ಶುಭ ಹಾರೈಸಿದರು. TNIT ಎಂಡಿ ಸುಗುಣಾ, ಸಿಇಓ ರಘು ಭಟ್, ಮೇಲ್ವಿಚಾರಕಿ ಡಾ. ಮಧುಕಾಂತಿ, ಮಾರ್ಕೆಟಿಂಗ್ ಹಾಗೂ ಡಿಜಿಟಲ್ ಹೆಡ್ ಖುಷಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಕೇರಳದ ಎರ್ನಾಕುಲಂ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟಿ, ನೆಟ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ಆಟಗಾರ್ತಿ ಹಾಗೂ ಪ್ರಾಚಿ ತೆಹ್ಲಾನ್ ಫೌಂಡೇಶನ್ ಸಂಸ್ಥಾಪಕಿ ಪ್ರಾಚಿ ತೆಹ್ಲಾನ್ ಭಾಗಿಯಾಗಿದ್ದರು. ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಂತೋಷ್ ಮಾದಾ, ಹಿರಿಯ ಪತ್ರಕರ್ತ ಪ್ರಕಾಶ್ ಮೆಮ್ನನ್ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿ ಟಿಎನ್‌ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್‌ಗೆ ಸಾಥ್ ನೀಡುವುದಾಗಿ ತಿಳಿಸಿದರು ಮತ್ತು TNIT ಎಂಡಿ ಸುಗುಣಾ, ಸಿಇಓ ರಘು ಭಟ್, ಮೇಲ್ವಿಚಾರಕಿ ಡಾ. ಮಧುಕಾಂತಿ, ಮಾರ್ಕೆಟಿಂಗ್ ಹಾಗೂ ಡಿಜಿಟಲ್ ಹೆಡ್ ಖುಷಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಮಾಧ್ಯಮ ಸಾಧಕರನ್ನು ಸನ್ಮಾನಿಸಿ ಸಂಭ್ರಮಿಸುವ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲೂ ಸಿದ್ಧತೆ ನಡೆದಿದ್ದು, ಆಗಸ್ಟ್ 23 ರಂದು ಟಿಎನ್‌ಐಟಿ ಸೌತ್ ಇಂಡಿಯಾ ಮೀಡಿಯಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.