TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !
TNIT ಮೀಡಿಯಾದಿಂದ ನಡೆದ ಸಂವಾದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಾಧ್ಯಮ ಅಂದರೇ ಏನ್ರೀ ಮೀಡಿಯಾ ಅನ್ನೊರಿಗೆ ಹಾಗೂ ಮಾಧ್ಯಮದ ಮೇಲಿಗೆ ಒಂದಷ್ಟು ಪ್ರಶ್ನೆಗೆ ಸಂವಾದ ಕಾರ್ಯಕ್ರಮದಲ್ಲಿ ಉತ್ತರ ಸಿಕ್ಕಿದೆ. ದಿ ನ್ಯೂ ಇಂಡಿಯನ್ ಟೈಮ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಈ ಬಗ್ಗೆ ಸಂಪೂರ್ಣ ವೀಡಿಯೋ ಹಾಕಲಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಈಗ ಅಂದ್ರೆ ಪ್ರಚಲಿತದಲ್ಲಿ ನಡೆಯುತ್ತಿರುವ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ.

ಹಿರಿಯ ಪತ್ರಕರ್ತರಾಗಿರು ರವಿ ಹೆಗಡೆ ಅವರು ಚರ್ಚಾ ಕಾರ್ಯಮದಲ್ಲಿ ಭಾಗಿಯಾಗಿ ಮಾಧ್ಯಮ ಮೇಲಿನ ಅಪವಾದಗಳಾಗಿರಬಹುದು, ಪ್ರಶ್ನೆಗಳು ಹಾಗೂ ಇಂದಿನ ಸ್ಥಿತಿ ಗತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪತ್ರಿಕಾರಂಗಕ್ಕೆ ಬರಬೇಕು ಅಂತಾ ಸಾಕಷ್ಟು ವಿದ್ಯಾರ್ಥಿಗಳು ಕನಸು ಕಟ್ಟಿರುತ್ತಾರೆ ಆದರೇ ಈಗಿನ ಮಾಧ್ಯಮದ ಬದಲಾವಣೆಗಳು ಅವರನ್ನ ಗೊಂದಲದಲ್ಲಿ ಸಿಲುಕುವಂತೆ ಮಾಡಿರುತ್ತವೆ. ಆದರೇ ಮಾಧ್ಯಮದ ಸಂಪೂರ್ಣ ಚಿತ್ರಣ ಏನು ಅನ್ನೊದನ್ನ ರವಿ ಹೆಗಡೆ ಅವರು ಸ್ಪಷ್ಟವಾಗಿ ತೆರೆದಿಟ್ಟಿದ್ದಾರೆ.