*TNIT ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ಗೆ ಸಾಥ್ ನೀಡ್ತಾಯಿರೋದು ಇವರೇ..*
ಬೆಂಗಳೂರು : ಟಿಎನ್‌ಐಟಿ ಸೌತ್ ಇಂಡಿಯನ್ ಮೀಡಿಯಾ ಪ್ರಶಸ್ತಿ ಸಮಾರಂಭ ಆಗಸ್ಟ್ 23 ರಂದು ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನ ಶೃಂಗಾರ ಪ್ಯಾಲೇಸ್ ಗಾರ್ಡನ್‌ನಲ್ಲಿ ಸಮಾರಂಭ ನಡೆಯಲಿದ್ದು, ಈ ಬಾರಿ ಹಲವರು ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ.
ಕಳೆದ 7 ವರ್ಷಗಳಿಂದ ಕನ್ನಡ ಭಾಷೆಯ ಮಾಧ್ಯಮದ ಸಾಧಕರಿಗೆ ಟಿಎನ್‌ಐಟಿ ಸಂಸ್ಥೆ ಪ್ರಶಸ್ತಿ ಪ್ರಧಾನ ಮಾಡಿದೆ. ಕಳೆದ ವರ್ಷದಿಂದ ಕರ್ನಾಟಕ ಮಾತ್ರವಲ್ಲದೇ ತಮಿಳು,ತೆಲುಗು ಹಾಗೂ ಮಲೆಯಾಳಂ ಭಾಷೆಯ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುವ ಸಾಧಕರಿಗೆ ಗೌರವಿಸಲಾಗಿದೆ.
ಟಿಎನ್‌ಐಟಿ ಸಂಸ್ಥೆಯ ಈ ಸಾಧನೆಗೆ ಈ ಬಾರಿ ಹಲವರು ಪ್ರಾಯೋಜಕತ್ವ ವಹಿಸುವ ಮೂಲಕ ಕೈ ಜೋಡಿಸಿದ್ದಾರೆ. ಮುಖ್ಯವಾಗಿ ಎವಿಆರ್ ಸಂಸ್ಥೆಯ ಮುಖ್ಯಸ್ಥರು ಹಾಗು ಉದ್ಯಮಿಯಾಗಿರುವ ಅರವಿಂದ ವೆಂಕಟೇಶ ರೆಡ್ಡಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಇನ್ನೂ ಕಾರ್ಯಕ್ರಮಕ್ಕೆ ಬ್ಯಾಕಿಂಗ್ ಪಾಟ್ನರ್ ಆಗಿ ಕೆನರಾ ಬ್ಯಾಂಕ್, ಎಂಎಸ್ಐಎಲ್, ಕರ್ನಾಟಕ ಹಾಲು ಒಕ್ಕೂಟ, ಮೈಸೂರು ಸ್ಯಾಂಡಲ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಮೀಡಿಯಾ ಪಾಟ್ನರ್ ಸಿರಿ ಕನ್ನಡ ಹಾಗು ಎಂಟರ್‌ಟೈನ್‌ಮೆಂಟ್ ಪಾಟ್ನರ್ ಆಗಿ ರೇಡಿಯೋ ಮಿರ್ಚಿ, ಗಾನಾ ಟಿಎನ್‌ಐಟಿ ಸೌತ್ ಇಂಡಿಯನ್ ಪ್ರಶಸ್ತಿಯಲ್ಲಿ ಭಾಗಿಯಾಗಲಿದ್ದಾರೆ.