ಬೆಂಗಳೂರು: ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ (TNIT) ಸಂಸ್ಥೆಯ ಪ್ರಸ್ತುತಿಯಲ್ಲಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಕುರಿತಾದ “ರಾಘವೇಂದ್ರ ದರ್ಶನ” ಆಲ್ಬಮ್ ಸಾಂಗ್ ಅನ್ನು ಪ್ರೇಕ್ಷಕರಿಗೆ ಸಮರ್ಪಿಸುವ ಪ್ರಯತ್ನ ನಡೆಯುತ್ತಿದೆ.
ಈ ಆಧ್ಯಾತ್ಮಿಕ ಸಂಗೀತ ಆಲ್ಬಮ್‌ಗಾಗಿ ಸಿದ್ಧತೆಗಳು ನಡೆಯುತ್ತಿದ್ದು, ಇದರ ಕುರಿತು ವಿಶೇಷ ಪ್ರೆಸ್ ಮೀಟ್ ಅನ್ನು ಡಿಸೆಂಬರ್ 12, 2025 ರಂದು ಬೆಳಿಗ್ಗೆ ಹೈಡ್ ಪಾರ್ಕ್‌ನಲ್ಲಿ ಆಯೋಜಿಸಲಾಗಿತ್ತು.
ಈ ಮಹತ್ತರ ಆಧ್ಯಾತ್ಮಿಕ ಸಂಗೀತ ಯೋಜನೆಯನ್ನು ಟಿಎನ್ ಐಟಿ ಸಂಸ್ಥೆಯ ಎಂ.ಡಿ. ಸುಗುಣಾ ರಘು ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ಲೋಕದಲ್ಲಿ ಜನಪ್ರಿಯರಾಗಿರುವ ABBS ಸ್ಟೂಡಿಯೋ ಸಿ.ಆರ್. ಬೋಬಿ ಹಾಗೂ ಅಜನೀಶ್ ಲೋಕನಾಥ್ ಅವರು ಈ ಆಲ್ಬಮ್‌ನ ಸಂಪೂರ್ಣ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಗುರು ಭಕ್ತಿಯಿಂದ ಕೂಡಿದ ಸಾಹಿತ್ಯವನ್ನು ನಾಗಾರ್ಜುನ ಶರ್ಮಾ ಅವರು ರಚಿಸುತ್ತಿದ್ದಾರೆ. ಈ ಯೋಜನೆಯಲ್ಲಿ ಟೆಕ್ನಿಕಲ್ ತಂಡವಾಗಿ ಡಾ. ಮಧುಕಾಂತಿ, ದೊರೆ ಅರಸ್, ಖುಷಿ ಹಾಗೂ ದಾದಾಪಿರ್ ಭಾಗಿಯಾಗಿದ್ದಾರೆ.

ಗುರು ರಾಘವೇಂದ್ರ ಸ್ವಾಮಿಗಳ ದಿವ್ಯ ಚರಿತ್ರೆ ಮತ್ತು ಅವರ ಕೃಪೆಯನ್ನು ವಿಶ್ವದಾದ್ಯಂತ ಹರಡುವ ಧ್ಯೇಯದೊಂದಿಗೆ “ರಾಯರ ದರ್ಶನ” ಆಲ್ಬಮ್ ಸಿದ್ಧಗೊಳ್ಳುತ್ತಿದೆ. ಟಿಎನ್ ಐಟಿ ಸಂಸ್ಥೆ ಕನ್ನಡದ ಮೊದಲ ವೆಬ್ ಪೋರ್ಟಲ್ ಅನ್ನು ಹೊಂದಿದ್ದು, ಕಳೆದ 8 ವರ್ಷಗಳಿಂದ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.
ನಟ, ನಿರ್ಮಾಪಕ , ಟಿಎನ್ ಐಟಿ ಸಿಇಓ ಆಗಿರುವ ರಘು ಭಟ್ ಅವರು ಯಾವಾಗಲು ಹೊಸ ಹೊಸ ಪ್ರಯತ್ನಗಳನ್ನ ಮಾಡುತ್ತಾ ಇರುತ್ತಾರೆ. ಈ ಬಾರಿ ಧರ್ಮದ ರಕ್ಷಣೆ ಅನ್ನೊ ಧ್ಯೇಯ ವಾಕ್ಯದೊಂದಿಗೆ ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇನ್ನೂ ಈ ಸುದ್ದಿಗೋಷ್ಠಿಯಲ್ಲಿ ನವರಸ ನಾಯಕ ರಾಯರ ಪರಮ ಭಕ್ತರಾಗಿರುವ ಜಗ್ಗೇಶ್ ಭಾಗಿಯಾಗಿ ರಾಯರ ಕುರಿತಾಗಿ ತಮ್ಮ ಜೀವನದಲ್ಲಿ ಆದಂತಹ ಪವಾಡಗಳನ್ನ ಮೆಲಕು ಹಾಕಿದರು. ಹಾಗೇ ಖ್ಯಾತ ಚಿತ್ರ ಸಾಹಿತಿ ನಾಗೇಂದ್ರ ಶರ್ಮಾ, ಮಂತ್ರಾಲಯದ ಪಿಆರ್ ಶ್ರಿನಿಧಿ , ಡಿಎನ್ ಐಡಿ ಎಂಡಿ ಸುಗುಣಾ ರಘು, ಸಿಇಒ ರಘು ಭಟ್ , ಕಾರ್ಯಕ್ರಮದ ವೇಳೆ ಟಿಎನ್ ಟಿ ಚೀಫ್ ಎಡಿಟರ್ ಮೀರಾ , ಟೆಕ್ನಿಕಲ್ ಟೀಂ ಡಾ. ಮಧುಕಾಂತಿ , ಖುಷಿ ಉಪಸ್ಥಿತಿರಿದ್ದರು.






