TNIT South Indian Media Award ಗೆ ದಿನಗಣನೆ !
ದೃಶ್ಯ ಮಾಧ್ಯಮದ ಮಂದಿ ಕಾಯುತ್ತಿದ್ದ ಬಹು ನಿರೀಕ್ಷಿತ TNIT ಸೌಥ್ ಇಂಡಿಯನ್ ಮೀಡಿಯಾ ಅವಾರ್ಡ್ ಗೆ ಕೇವಲ 2 ದಿನ ಬಾಕಿ ಇದೆ. ಇಡೀ ಭಾರತದಲ್ಲೆ ವಿಶಿಷ್ಟವಾಗಿ ಪ್ರಶಸ್ತಿ ಪ್ರಧಾನ ಮಾಡುವ ಏಕೈಕ ಸಂಸ್ಥೆ ಅಂದ್ರೆ ಅದು ದಿ ನ್ಯೂ ಇಂಡಿಯನ್ ಟೈಮ್ಸ್. ನಿರೂಪಕರು, ಮುಖ್ಯಸ್ಥರ ಆದಿಯಾಗಿ ಕ್ಯಾಮರಾ ಜರ್ನಲಿಸ್ಟ್, ವೀಡಿಯೋ ಎಡಿಟರ್ ಹೀಗೆ ತಾಂತ್ರಿಕ ವರ್ಗಕ್ಕೂ ಒತ್ತು ನೀಡಿದ್ದು ಟಿ ಎನ್ ಐ ಟಿ ಅನ್ನೊದು ಹೆಮ್ಮೆಯ ವಿಷಯ.
ಆರು ವರ್ಷಗಳ ಕಾಲ ಕನ್ನಡ ಸುದ್ದಿವಾಹಿನಿಗಳಿಗೆ ಪ್ರಶಸ್ತಿ ನೀಡುತ್ತಾ ಬಂದು, ಕಳೆದ ವರ್ಷ ಇಡೀ ದಕ್ಷಿಣ ಭಾರತದ ಸುದ್ದಿ ಮಾಧ್ಯಮಗಳಿಗೆ ಪ್ರಶಸ್ತಿ ನೀಡಿ, ನೋಡುಗರ ಹುಬ್ಬೆರುವಂತೆ ಮಾಡಿತ್ತು. ಯಾವ ಸಿನಿಮಾ ಅವಾರ್ಡ್ ಗಳಿಗೂ ಕಮ್ಮಿ ಇಲ್ಲದ ವಿಜೃಂಭಣೆ ಇಲ್ಲಿ ತುಂಬಿಕೊಂಡಿತ್ತು. ಕಲಾ ತಂಡಗಳ ನೃತ್ಯ ಸೊಬಗು, ತಾರೆಯರು ತಂದ ಕಲರ್ ಫುಲ್ ಮೆರಗು ಮೀಡಿಯಾ ಅವಾರ್ಡನ್ನ ಕಂಗೊಳಿಸುವಂತೆ ಮಾಡಿತ್ತು. ಇಷ್ಟೆಲ್ಲಾ ಆದಮೇಲೆ ಈಗ ಎಂಟನೇ ವರ್ಷದ ಹಾದಿಗೆ ಬಂದು ನಿಂತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಈ ಬಾರಿ ಕಂಡು ಕೆಳರಿಯದ ಅದ್ದೂರಿತನದೊಂದಿಗೆ ದಾಪುಗಾಲಿಡುತ್ತಿದೆ.
ಈ ಬಾರಿಯೂ ತಾರಾ ಮೆರಗಿನೊಂದಿಗೆ ಮಾಧ್ಯಮದ ಸಾಧಕರಿಗೆ ಗೌರವಿಸಲು ಟಿಎನ್ ಐಟಿ ಸಂಸ್ಥೆ ಕಾಯುತ್ತಿದೆ. ಚಿಕ್ಕ – ಚೊಕ್ಕ ತಂಡದೊಂದಿಗೆ ದೊಡ್ಡ ಸಂಭ್ರಮವನ್ನ ಮೀಡಿಯಾದಲ್ಲಿ ಇಮ್ಮುಡಿಗೊಳಿಸಲು ತಯಾರಾಗಿದೆ.