ಪತಿ ಫೇಸ್ ಬುಕ್ ಮೂಲಕ ಪತ್ನಿಗೆ ತಲಾಖ್ ನೀಡಿದ ಘಟನೆ ಗುಜರಾತ್ ರಾಜ್ ಕೋಟ್ ನ ಧೋರಾಜಿಯಲ್ಲಿ ನಡೆದಿದೆ.
ರಫೀಕ್ ಹನ್ ಎಂಬಾತ ತನ್ನ ಪತ್ನಿ ಸರಬಾನೊಗೆ ಫೇಸ್ ಬುಕ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾನೆ.
2015ರಲ್ಲಿ ಇಬ್ಬರು ವಿವಾಹವಾಗಿದ್ದರು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸಂಸಾರದಲ್ಲಿ ಬಿರುಕು ಉಂಟಾಗಿತ್ತು. ದಾಂಪತ್ಯ ಸುಧಾರಿಸಲು ಸರಬಾನೊ ಪೋಷಕರು ರಫೀಕ್ ಜೊತೆ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿರ್ಲಿಲ್ಲ. ನಂತರ ಸರಬಾನೊ ಪತಿಯಿಂದ ಜೀವನಾಂಶ ಕೋರಿ ಕೌಂಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಕೋರ್ಟ್ ಸರಬಾನೊಗೆ ಮಾಸಿಕ 3ಸಾವಿರ ರೂ ನೀಡುವಂತೆ ರಫೀಕ್ ಆದೇಶವಿತ್ತು. ಆದರೆ,ರಫೀಕ್ ಕಳೆದ ಐದು ತಿಂಗಳಿಂದ ಜೀವನಾಂಶ ನೀಡಿರ್ಲಿಲ್ಲ. ಕೋರ್ಟ್ ಗೆ ಹಾಜರಾಗುವಂತೆ ವಾರೆಂಟ್ ನೀಡಲಾಗಿತ್ತು. ಸರಿಯಾಗಿ ಜೀವನಾಂಶ ಪಾವತಿಸುವುದಾಗಿ ನ್ಯಾಯಾಲಯದಲ್ಲಿ ಭರವಸೆ ನೀಡಿದ್ದ.
ಫೆಬ್ರವರಿ 25ರಂದು ರಫೀಕ್ ಪತ್ನಿಯ ಫೋಟೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ನಾನಿಂದು ನನ್ನ ಪತ್ನಿಗೆ ವಿಚ್ಛೇದನ ನೀಡಿದ್ದೇನೆ. ತಲಾಖ್ ತಲಾಖ್ ತಲಾಖ್ ಎಂದು ಬರೆದುಕೊಂಡಿದ್ದ. ಇದನ್ನು ನೋಡಿದ ಸರಬಾನೊ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ದೂರು ಸ್ವೀಕರಸಿಲ್ಲ. ಸರಬಾನೊ ಕೋರ್ಟ್ ಮೆಟ್ಟಿಲೇರಿದ್ದಾರೆ.