ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

Date:

ಅಮೇರಿಕಾದ ನೂತನ ಅಧ್ಯಕ್ಷನಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಇದೇ ಮೊಟ್ಟ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿದ್ದಾರೆ. ಅಮೇರಿಕಾದ 45ನೇ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕು ದಿನಗಳ ಬಳಿಕ ಟ್ರಂಪ್ ಮೋದಿಗೆ ಕರೆ ಮಾಡಿ ಅಮೇರಿಕಾಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಉಭಯ ದೇಶಗಳ ನಾಯಕರು ಸದ್ಯದಲ್ಲೆ ಭೇಟಿಯಾಗುವ ನಿರೀಕ್ಷೆ ಇದೆ. ಇದೇ ವೇಳೆ ಟ್ರಂಪ್ ಅಮೇರಿಕಾದ ನಿಜವಾದ ಸ್ನೇಹಿತ ಅಂದ್ರೆ ಅದು ಭಾರತ ಎಂದೇಳುವ ಮೂಲಕ ಉಭಯ ದೇಶಗಳ ಸ್ನೇಹ ಸಂಬಂಧವನ್ನು ಇನ್ನಷ್ಟು ಬಲಗೊಳಿಸಿದ್ದಾರೆ. ಮೋದಿ ಅವರಿಗೆ ನಮ್ಮ ದೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದು, ಅವರನ್ನು ಬರ ಮಾಡಿಕೊಳ್ಳಲು ನಾವು ಹಾತೊರೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನು ದೂರವಾಣಿ ಕರೆಯ ಮೂಲಕ ಮಾತನಾಡಿದ ಉಭಯ ದೇಶಗಳ ನಾಯಕರು ವ್ಯಾಪಾರ, ರಕ್ಷಣೆ ಮತ್ತು ಭಯೋತ್ಪಾದನೆಯ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಉಭಯ ದೇಶಗಳ ಸೌಹಾರ್ಧ ಸಂಬಂಧ ಇನ್ನಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ರಕ್ಷಣೆ ಮತ್ತು ವಾಣಿಜ್ಯ ವಲಯಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚೆ ನಡೆಸಿದ್ದಾರೆ. ಚೀನಾದ ಪ್ರಾಬಲ್ಯವಿರುವ ದಕ್ಷಿಣ ಮತ್ತು ಮಧ್ಯ ಏಷ್ಯಾ ರಕ್ಷಣೆಯ ಕುರಿತು ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವ ಟ್ರಂಪ್ ವಿಶ್ವ ಸಮುದಾಯವನ್ನೆ ತಲ್ಲಣಗೊಳಿಸಿರುವ ಭಯೋತ್ಪಾದನೆ ನಿರ್ಮೂಲನೆಗೆ ಭುಜಕೊಟ್ಟು ಹೋರಾಡುತ್ತೇವೆ ಎಂದಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!

ರಾತ್ರೋ ರಾತ್ರಿ ಎಲಿಮಿನೇಟ್ ಆದ್ರು ಶಾಲಿನಿ..!!

ಹಂಪಿ ಸನ್‍ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ

ಈ ಬಾರಿಯ ಬಿಗ್‍ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?

ಮಾಜಿ ಕ್ರಿಕೆಟಿಗ ವೀರು ಈಗ ಜಬರ್ದಸ್ತ್ ಸಿಂಗರ್

ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!

LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...