ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ತಲೆ ತಗ್ಗಿಸಿ ನಿಂತಿರುವ ರಾಜ್ಯಕ್ಕೆ ಮತ್ತೊಂದು ಅಮಾನವೀಯ ಘಟನೆಯಿಂದ ಮತ್ತಷ್ಟು ಮುಜುಗರಕ್ಕೀಡು ಮಾಡಿದೆ..! ಈಗ ಆರೋಪಿ ಸ್ಥಾನದಲ್ಲಿ ನಿಂತಿರೋದು ಸಾಮಾನ್ಯ ವ್ಯಕ್ತಿಯಂತೂ ಅಲ್ವೇ ಅಲ್ಲ ಬದಲಾಗಿ ಜನತೆಗೆ ನ್ಯಾಯ ಒದಗಿಸಿಕೊಡಲೆಂದು ಖಾಕಿ ಬಟ್ಟೆ ತೊಟ್ಟು ಹೆಸರಿಗೆ ಮಾತ್ರ ಪೊಲೀಸ್ ಎಂದನಿಸಿಕೊಂಡಿರೋ ಕಾಮಾಂಧರಿ..! ಹೌದು.. ಮನೆಗೆ ಡ್ರಾಪ್ ಕೊಡ್ತೀನಿ ಅಂತೇಳಿ ಪೊಲೀಸ್ ಅಧಿಕಾರಿಯೊಬ್ಬ ಓರ್ವ ವಿವಾಹಿತ ಮಾನಸಿಕ ಅಸ್ವಸ್ಥೆಯನ್ನು ಅತ್ಯಾಚಾರ ಮಾಡಿದ ಘಟನೆಯೊಂದು ತುಮಕೂರಿನಲ್ಲಿ ನಡದಿದೆ..! ಜಿಲ್ಲೆಯ ನೃಪತುಂಗ ಬಡಾವಣೆಯ 30 ವರ್ಷದ ಮಾನಸಿಕ ಅಸ್ವಸ್ಥೆಯನ್ನು ಡ್ರಾಪ್ ಕೊಡೋ ನೆಪದಲ್ಲಿ ಪೊಲೀಸ್ ಜೀಪಿನಲ್ಲೆ ತನ್ನ ಕಾಮ ಚಪಲವನ್ನು ತೀರಿಸಿಕೊಂಡಿದ್ದಾನೆ ಎಎಸ್‍ಐ ಉಮೇಶ್..! ಶನಿವಾರ ರಾತ್ರಿ 7ರ ಸುಮಾರಿಗೆ ಮನೆ ಬಿಟ್ಟು ಬಂದಿದ್ದ ಮಹಿಳೆ ಅಂತರಸನಹಳ್ಳಿ ಬ್ರಿಡ್ಜ್ ಬಳಿ ಸಾಗ್ತಾ ಇದ್ದ ವೇಳೆ ಅಲ್ಲಿ ಗಸ್ತು ತಿರುಗುತ್ತಿದ್ದ ಎಎಸ್‍ಐ ಉಮೇಶ್ ಮಹಿಳೆಯನ್ನು ಕಂಡಿದ್ದಾನೆ. ಈ ವೇಳೆ ಆಕೆಯನ್ನು ಸಂಪೂರ್ಣವಾಗಿ ವಿಚಾರಣೆ ನಡೆಸಿ ತಾನು ಮನೆಗೆ ಬಿಟ್ಟು ಬರುತ್ತೇನೆ ಜೀಪ್ ಹತ್ತು ಎಂದೇಳಿ ವಾಹನ ಹತ್ತಿಸಿಕೊಂಡ ಆತ ಬೆಳಿಗ್ಗೆ 4ರವರೆಗೂ ನಿರಂತರ ಅತ್ಯಾಚಾರ ಎಸಗಿದ್ದಾನೆ..! ಇದನ್ನೆಲ್ಲಾ ಕಂಡು ಕಾಣದಂತೆ ಇದ್ದನಂತೆ ಇನ್ನೋರ್ವ ಪೊಲೀಸ್ ಜೀಪ್ ಚಾಲಕ..! ಅತ್ಯಚಾರ ಎಸಗಿದ ಉಮೇಶ್ ಆನಂತರ ಮಹಿಳೆಯ ಅಣ್ಣನಿಗೆ ಕರೆ ಮಾಡಿದ್ದಾನೆ.
ಅಂತರಸನಹಳ್ಳಿಯಲ್ಲಿ ನಿನ್ನ ತಂಗಿ ಸಿಕ್ಕಿದ್ದಾಳೆ ಆಕೆಯನ್ನು ನಾನೆ ಕರೆದುಕೊಂಡು ಬರುತ್ತೇನೆಂದು ಹೇಳಿ ಜೀಪ್‍ನಲ್ಲಿ ಮಹಿಳೆಯನ್ನು ಮನೆಗೆ ಬಿಡಲು ಹೊರಟಿದ್ದಾನೆ. ಈ ವೇಳೆ ಅತ್ಯಾಚಾರಕ್ಕೊಳಗಾದ ಮಹಿಳೆ ಜೀಪ್‍ನಿಂದ ಇಳಿಯುತ್ತಿದ್ದಂತೆ ತೀವ್ರವಾಗಿ ಅಸ್ವಸ್ಥಳಾಗಿ ಕೆಳಗೆ ಕುಸಿದಿದ್ದಾಳೆ. ಇದನ್ನು ಕಂಡ ಮಹಿಳೆಯ ತಾಯಿಗೆ ನಡೆದ ವಿಚಾರವನ್ನೆಲ್ಲಾ ಬಾಯ್ಬಿಟ್ಟಿದ್ದಾಳೆ..! ಇದನ್ನು ಕೇಳುತ್ತಿದ್ದಂತೆ ಗಾಬರಿಗೊಂಡ ಉಮೇಶ್ ತಾನೇನು ಮಾಡೇ ಇಲ್ಲ..! ನಾನು ನಿನ್ನ ಅಪ್ಪನಂತೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ..! ನಂತರ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ ಬಳಿಕ ಅತ್ಯಾಚಾರ ನಡೆದಿರೋದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಕುಟುಂಬಸ್ಥರು ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ಅವರನ್ನು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದ್ದು ಆತನನ್ನು ಅಮಾನತು ಮಾಡಲಾಗಿದೆ. ಆರೋಪಿಯ ವಿಚಾರಣೆ ನಡೆಯುತ್ತಿದ್ದು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‍ಪಿ ಅಶಾ ಪಂತ್ ತಿಳಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಾಯ್ ಫ್ರೆಂಡ್ ಇದಾರಾ..? ಹಾಗಿದ್ರೆ ಮಾತ್ರ ಕಾಲೇಜ್‍ಗೆ ಬನ್ನಿ..!
ಇರ್‍ರೆಸ್ಪಾನ್ಸಿಬಲ್ ಆಟಕ್ಕೆ ನನ್ ******* ಅಂದ ಪ್ರಥಮ್.!!
ಈ ವರ್ಷದಿಂದ ರಿಮೇಕ್ ಮಾಡಲ್ವಂತೆ ಕಿಚ್ಚ ಸುದೀಪ..?
ಸದ್ಯದಲ್ಲೆ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಠಾಣೆ: ಪ್ರವೀಣ್ ಸೂದ್
ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!