ಯಸ್, ಸ್ಟಾರ್ ನಿರೂಪಕ, ಕನ್ನಡದ ಅರ್ನಾಬ್ ಟಿವಿ9 ನಿಲ್ದಾಣಕ್ಕೆ ಬಂದಿಳಿದಿದ್ದಾರೆ..! ಬಹುದಿನಗಳ ನಂತರ ಚಂದನ್ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ..! ಟಿ9 ಸೇರಿರೋ ಚಂದನ್ ಅವರ ಮೊದಲ ಕಾರ್ಯಕ್ರಮ ಇಂದು ಬೆಳಗ್ಗೆ 10.30ಕ್ಕೆ ಪ್ರಸಾರವಾಗಿದೆ..!
ಚಂದನ್ ಶರ್ಮಾ ಟಿವಿ9ನಲ್ಲಿ ಸೇವೆ ಆರಂಭಿಸಿದ್ದಾರೆ. ಪ್ರಕಾಶ್ ‘ರೈ’ಫಲ್ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಅವರನ್ನು ಚಂದನ್ ಸಂದರ್ಶಿಸಿದ್ದಾರೆ. ಬಿಟಿವಿಯಲ್ಲಿದ್ದ ಚಂದನ್ ಶರ್ಮಾ ಅವರಿಗೆ ಹೋಲಿಸಿದ್ರೆ ಟಿವಿ9 ಚಂದನ್ ಶರ್ಮಾ ಸ್ವಲ್ಪ ಶಾಂತರಾಗಿದ್ದಾರೆ ಎಂದೆನಿಸುತ್ತೆ..! ಆದರೂ, ಅಲ್ಲಲ್ಲಿ ಚಂದನ್ ಅವರು ತನ್ನದೇ ಶೈಲಿಯಲ್ಲಿ ಪ್ರಕಾಶ್ ರೈ ಅವರನ್ನು ನೇರ ಪ್ರಶ್ನೆಗಳ ಮೂಲಕ ಕಟ್ಟಿಹಾಕಿದ್ರು..!
ಪ್ರಕಾಶ್ ರೈ ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ರು ಚಂದನ್ ಶರ್ಮಾ. ಕೆಲವೊಂದು ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಟೀಕೆ ಮಾಡೋದೇಕೆ ಎಂದು ರೈ ಅವರನ್ನು ಚಂದನ್ ಪ್ರಶ್ನಿಸಿದ್ರು..! ಕೆಲವು ವ್ಯಕ್ತಿಗಳ ಹೆಸರನ್ನು ಹೇಳ್ತೀನಿ ಅವರ ಬಗ್ಗೆ ನಿಮಗೆ ಅನಿಸಿದ್ದನ್ನು ಹೇಳಿ ಎಂದು ಚಂದನ್ ಹೇಳಿದಾಗ ಪ್ರಕಾಶ್ ರೈ ನಾನೇಕೆ ಹೇಳಬೇಕು ಎಂಬ ದಾಟಿಯಲ್ಲಿ ಮಾತಾಡಿದ್ರು..! ಆದ್ರೂ ಚಂದನ್ ಸುಮ್ಮನಿರಬೇಕಲ್ಲ? ಮಾತಿಗೆ ಮಾತಿನ ಏಟು ಕೊಟ್ರು..!
ಚಂದನ್ ಮೋದಿ ಹೆಸರು ಹೇಳಿದಾಗ ಪ್ರಕಾಶ್ ರೈ, ನಮ್ಮ ದೇಶದ ಪ್ರಧಾನಿ’ ಎಂಬ ಉತ್ತರ ಕೊಟ್ರು..! ಸಿದ್ದಾರಮಯ್ಯ ಎಂಬ ಹೆಸರನ್ನು ಶರ್ಮಾ ರೈ ಅವರ ಮುಂದಿಟ್ಟಾಗ ನಮ್ಮ ಮುಖ್ಯಮಂತ್ರಿ ಅಂದ್ರು ರೈ..! ಹೀಗೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡದೆ ಜಾರಿಕೊಳ್ಳಲು ಪ್ರಕಾಶ್ ಯತ್ನಿಸಿದ್ರು ಅನಿಸುತ್ತೆ..!
ಇದೇವೇಳೆ ಪ್ರಕಾಶ್ ರೈ ತಮ್ಮೊಳಗಿನ ಕೆಲವು ನೋವುಗಳು, ತಮ್ಮ ಒಳನೋಟವನ್ನು ಕೂಡ ತೆರೆದಿಟ್ಟರು. ಸಂಸದ ಪ್ರತಾಪ್ ಸಿಂಹ ಅವರ ಬಗೆಗೆ ಇರುವ ಬೇಸರವನ್ನು ಹಂಚಿಕೊಂಡ್ರು. ಅವರು ಜನಪ್ರತಿನಿಧಿಯಾಗಿದ್ದೇ ತಪ್ಪು ಎಂಬ ಅರ್ಥದಲ್ಲಿ ರೈ ಮಾತಾಡಿದ್ರು..!
ಹೀಗೆ ಹತ್ತಾರು ವಿಷಯಗಳು ಪ್ರಕಾಶ್ ‘ರೈ’ಫಲ್ ಕಾರ್ಯಕ್ರಮದಲ್ಲಿ ಚಂದನ್ ಶರ್ಮಾ ಹಾಗೂ ಪ್ರಕಾಶ್ ರೈ ನಡುವೆ ಒಂದಿಷ್ಟು ಚರ್ಚೆ ನಡೆಯಿತು. ಇದೇ ವೇಳೆ ಪ್ರಕಾಶ್ ರೈ ತಾವು ರಾಜಕೀಯಕ್ಕೆ ಖಂಡಿತಾ ಬರಲ್ಲ ಎಂದು ಸಹ ತಿಳಿಸಿದ್ದಾರೆ.
ಸಂದರ್ಶನದ ವಿಷಯ ಹಾಗಿರಲಿ.. ಚಂದನ್ ಶರ್ಮಾ ಬಿಟಿವಿಯಿಂದ ಟಿವಿ9ಗೆ ಬಂದಿದ್ದಾರೆ. ಅವರಿಗೆ ಶುಭವಾಗಲಿ.
ಕಳೆದ ವರ್ಷ ದಿ ನ್ಯೂ ಇಂಡಿಯನ್ ಟೈಮ್ಸ್ ಏರ್ಪಡಿಸಿದ್ದ ನೆಚ್ಚಿನ ಆ್ಯಂಕರ್ ಸ್ಪರ್ಧೆಯಲ್ಲಿ ಚಂದನ್ ಶರ್ಮಾ ವಿಜೇತರಾಗಿದ್ರು. ಕನ್ನಡಿಗರು ಚಂದನ್ ಅವರಿಗೆ ಹೆಚ್ಚಿನ ಮತನೀಡಿ ಗೆಲ್ಲಿಸಿಕೊಟ್ಟಿದ್ರು ಎನ್ನೋದನ್ನು ಇಲ್ಲಿ ಸ್ಮರಿಸಬಹುದು.