55 ವರುಷದ ಡಯಾನಗೆ ಸ್ಟೀವೀ ಹಾಗೂ ಈಡಿ ಅಹೆರ್ನ್ ಎಂಬ ಅವಳಿ ಮಕ್ಕಳು ಹುಟ್ತಾನೇ ಪ್ರಾಡರ್ ವಿಲ್ಲಿ ಸಿಂಡ್ರೋಮ್ ಮತ್ತು ಆಟಿಸಂ ಎಂಬ ಕಾಯಿಲೆಗೆ ತುತ್ತಾಗಿದ್ರು. ಪ್ರತೀ 25,000 ದಲ್ಲಿ ಒಬ್ಬರನ್ನು ಕಾಡೋ ಈ ಕಾಯಿಲೆಯು, ಪೀಡಿತ ಮಕ್ಕಳಲ್ಲಿ ನಿರಂತರ ಹಸಿವು, ಅತಿಯಾದ ಬೊಜ್ಜು, ಮಾತಿನಲ್ಲಿ ತೊದಲು ಹಾಗೂ ಸ್ನಾಯು ದೌರ್ಬಲ್ಯಗಳಂತಹ ತೊಂದರೆಗಳನ್ನುಂಟುಮಾಡುತ್ತದಂತೆ. ಈ ಕಾಯಿಲೆಯು ಮಕ್ಕಳ ಬೆಳವಣಿಗೆಯ ಮೇಲೆ ತೀವ್ರ ಪ್ರಭಾವ ಬೀರುವುದು. ಇವರಿಗಿರುವ ತೀವ್ರ ತಿನ್ನುವ ಗೀಳಿನಿಂದ ಡಯಾನ ಕಂಗೆಡುತ್ತಿದ್ದಾಳೆ. ಇವರ ಈ ಹವ್ಯಾಸಗಳನ್ನು ನಿಯಂತ್ರಿಸಲಾರದೆ ಆಕೆ ತನ್ನ ರೆಫ಼್ರಿಜರೇಟರ್, ಕಪ್ ಬೋರ್ಡ್ನ್ ಲಾಕ್ ಮಾಡಿಟ್ಟು, ಕ್ಲೀನಿಂಗ್ ಸಾಮಾಗ್ರಿಗಳು ಹಾಗೂ ನಾಯಿ ಹಾಗೂ ಬೆಕ್ಕಿನ ಆಹಾರಗಳನ್ನು ಅಡಗಿಸಿಡುತ್ತಾಳೆ, ಇಲ್ಲದಿದ್ದಲ್ಲಿ ಅವರು ಅದನ್ನು ಕುಡಿಯಲೆತ್ನಿಸುತ್ತಾರಂತೆ. ಮಧ್ಯರಾತ್ರಿಯಲ್ಲೆದ್ದು ಅವರುಗಳು ಅವುಗಳನ್ನೆಲ್ಲಾ ತಿನ್ನುತ್ತಾರಂತೆ.ಅವರ ಹೊಟ್ಟೆ ಯಾವತ್ತೂ ತುಂಬುವುದೇ ಇಲ್ಲವಂತೆ. ತನ್ನ ರೂಂನಲ್ಲಿರೋ ಮೆಡಿಸನ್ ಗಳನ್ನು ಆಕೆ ಭದ್ರವಾದ ಲಾಕರ್ ನಲ್ಲಿರಿಸುತ್ತಾಳಂತೆ ಇಲ್ಲವಾದಲ್ಲಿ ಇವರುಗಳು ಅದನ್ನೂ ತಿನ್ನುತ್ತಾರಂತೆ. ಆದ್ರೆ ಏನು ಮಾಡುವುದು ಇದು ಅವರ ಖಾಯಿಲೆಯಲ್ಲವೇ ಎನ್ನುತ್ತಾಳೆ ಡಯಾನ.
ಆಕೆ! ತನ್ನ ಮಕ್ಕಳನ್ನು ನಿರಂತರ ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವಂತೆ ನೋಡಿಕೊಳ್ಳುತ್ತಾಳೆ. ಇದು ಅಸಾಧ್ಯದ ಕೆಲಸವಾದರೂ ನಾನು ತುಂಬಾ ಸ್ಟ್ರಿಕ್ಟ್ ಆಗಿದ್ದು ಮಕ್ಕಳು ಪ್ರತೀದಿನ 1200 ಕ್ಯಾಲರಿಗಿಂತಲೂ ಅಧಿಕ ಆಹಾರವನ್ನು ಸೇವಿಸದಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಾರೆ.ಆದರೆ ಅವರ ಮಕ್ಕಳಿಗಿದು ತೀರಾ ಕೋಪ ತರುತ್ತದಂತೆ ಯಾಕಂದರೆ ಅವರು ಏನು ಮಾಡುತ್ತಿದ್ದಾರೆಂಬುದರ ಕಿಂಚಿತ್ ಅರಿವೂ ಅವರಿಗಿಲ್ಲ ಎನ್ನುತ್ತಾರೆ ಡಯಾನ. ಸ್ಟೀವ್ ಅಂತೂ ತುಂಬಾ ಕೋಪಿಷ್ಠ,ಹಿಂಸೆ ಮಾಡುತ್ತಾನೆ ಹಾಗೂ ಕೋಪದಲ್ಲಿ ಆತ ಎಲ್ಲಾ ವಸ್ತುಗಳನ್ನು ಎತ್ತೆತ್ತಿ ಬಿಸಾಕುತ್ತಾನಂತೆ.
ಈಕೆಗೆ ಶೋಪಿಂಗ್ ಹೋಗುವುದೊಂದು ಸವಾಲೇ ಸರಿ.ಇತ್ತೀಚೆಗೆ ಶಾಪಿಂಗ್ ಹೋದ ಘಟನೆಯ ಬಗ್ಗೆ ನೆನೆಯುತ್ತಾ ಡಯಾನ ಹೇಳುತ್ತಾರೆ.ಶಾಪಿಂಗ್ ಮಾಡುತ್ತಿರಬೇಕಾದರೆ ಸ್ಟೀವ್ ಗೆ ತಳ್ಳಲು ಕ್ಯಾರೇಜ್ ಟ್ರೋಲಿ ಕೊಡದ್ದರಿಂದ ಕೋಪಗೊಂಡ ಆತ ಅಲ್ಲಿದ್ದವರ ಮೇಲೆಲ್ಲಾ ಆಕ್ರಮಣ ಮಾಡಿದನಂತೆ,ಅವನನ್ನು ಈಚೆಗೆ ತರಲು ನಾನು ಅದೆಂತಹಾ ಪಾಡು ಪಡಬೇಕಾಯಿತು ಅನ್ನುತ್ತಾರೆ ಆಕೆ.
ನಿಮ್ಮನ್ನು ನನ್ನಿಂದ ದೂರ ಕರೆದುಕೊಂಡು ಹಾಸ್ಪಿಟಲ್ ಗೆ ಹೋಗುತ್ತಾರಂದರೂ ಆ ಮಕ್ಕಳಿಗೆ ಅರಿವಾಗಲಾರದು ಅನ್ನುತ್ತಾರೆ ಡಯಾನ.ಒಂದು ಬಾರಿ ಸ್ಟೀವ್ ಗೆ ನೀನು ಹೇಗಿದ್ದಿಯಾ ಎಂದು ಪರಿಚಯದವರು ಯಾರೋ ಕೇಳಿದ್ದೇ ತಡ ಅವನು ಕೂಡಲೆ ಅವರನ್ನು ತಳ್ಳಿಬಿಟ್ಟನಂತೆ ಪಾಪ! ಆತನಿಗೆ ಬೆನ್ನಿಗೆ ಏಟು ಬಿದ್ದಿತ್ತಂತೆ ಅನ್ನುತ್ತಾರೆ.
ಅವರು ಕೆಲವೊಮ್ಮೆ ಎಷ್ಟು ಹಸಿದಿರುತ್ತಾರಂದರೆ ಕಸದ ಬುಟ್ಟಿಯಲ್ಲಿರೋ ಗಾರ್ಬೇಜ್ ನ್ನೇ ತಿಂದುಬಿಡುತ್ತಾರಂತೆ.ಅಷ್ಟೇ ಅಲ್ಲ ಸಿಕ್ಕ ಸಿಕ್ಕಲ್ಲಿ ಏನೇ ನೋಡಿದ್ರೂ ನೆಲದ ಮೇಲೆ ಏನೇ ಬಿದ್ದಿದ್ದರೂ ಹೆಕ್ಕಿ ತಿನ್ನುವುದಲ್ಲದೆ,ಬೇರೆಯವರ ಮನೆಯ ಕಸದ ಬುಟ್ಟಿಯಿಂದಲೂ ಕಸವನ್ನು ತಿನ್ನುತ್ತಾರಂತೆ ಎಂದು ಡಯಾನ ನೊಂದು ನುಡಿಯುತ್ತಾರೆ.ಈಡಿ ಮತ್ತು ಸ್ಟೀವ್ ಇಬ್ಬರೂ ಉತ್ತಮ ಜೊತೆಗಾರರಂತೆ.ಒಬ್ಬರನ್ನೊಬ್ಬರು ಯಾವಾಗಲೂ ಬಿಟ್ಟಿರಲಾರರಂತೆ.
“ನನ್ನ ಪ್ರತಿ ದಿನವು ತೀರಾ ಅಹಿತಕರ ಘಟನೆಗಳಿಂದಲೇ ನಡೆಯುತ್ತದೆ,ನನ್ನ ಜೀವನದಲ್ಲಿ ಕೆಟ್ಟ ಘಟನೆ ನಡೆಯದ ಯಾವ ದಿನವೂ ಇರಲಾರದು ಎನ್ನುವ ಡಯಾನ ನನ್ನ ಮಕ್ಕಳು ತುಂಬಾ ಪ್ರೀತಿ ಪಾತ್ರರು,ಅವರ ಜೊತೆ ನಾನು ಸಾಧ್ಯವಾದಷ್ಟು ಸಂತೋಷವಾಗಿರಲು ಪ್ರಯತ್ನಿಸುತ್ತೇನೆ.ನನ್ನನ್ನು ಅವರಿಬ್ಬರೂ ತುಂಬಾ ಇಷ್ಟ ಪಡುತ್ತಾರೆ ಹಾಗೂ ನನ್ನನ್ನು ಅವರು ರಾಣಿ ಅಂದು ಕರೆಯುತ್ತಾರೆ,ನನಿಗೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ನನ್ನ ಮಕ್ಕಳಿಗಿಗಾಗಿ ನಾನು ಹೋರಾಟ ಮಾಡುತ್ತೇನೆ ಎಂದು ಮನದುಂಬಿ ಅನ್ನುತ್ತಾರೆ ಡಯಾನ”
ಡಯಾನ ಯು ಆರ್ ರಿಯಲಿ ಗ್ರೇಟ್…..
- ಸ್ವರ್ಣಲತ ಭಟ್
POPULAR STORIES :
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!