ಕ್ಯಾಬ್ ಚಾಲಕರೊಬ್ಬರ ವಿರುದ್ಧ ಅಪಹರಣ ಯತ್ನದ ಆರೋಪ ಕೇಳಿಬಂದಿದೆ. ಬ್ಯಾಂಕ್ ಉದ್ಯೋಗಿ ಜೈ ಸಿಂಘ್ವಾಲ್ ಎಂಬುವವರು ಉಬರ್ ಚಾಲಕರೊಬ್ಬರ ವಿರುದ್ಧ ಈ ಆರೋಪ ಮಾಡಿದ್ದಾರೆ.
ಪೂರ್ವನಿಗಧಿತ ಮಾರ್ಗ ಬದಲಾವಣೆ ಮಾಡಿದ ವಿಚಾರಕ್ಕೆ ಸಿಂಘ್ವಾಲ್ ಮತ್ತು ಚಾಲಕನ ನಡುವೆ ಜಗಳ ನಡೆದಿದೆ. ಇದು ಸೋಶಿಯಲ್ ಮೀಡಿಯಾದಲ್ಲೂ ಚರ್ಚೆಯಾಗ್ತಿದೆ.
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೋರಮಂಗಲಕ್ಕೆ ಉಬರ್ ಕ್ಯಾಬ್ ನಲ್ಲಿ ಸಿಂಘ್ವಾಲ್ ಮಂಗಳವಾರ ರಾತ್ರಿ ತೆರಳುವ ವೇಳೆ ಈ ಜಗಳ ನಡೆದಿದೆ. ಕೆಐಎಎಲ್ ಪೊಲೀಸರು ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದ್ದಾರೆ.
ಮಾರ್ಗ ಬದಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಅಪಹರಿಸಲು ಯತ್ನಿಸಿದ ಎಂದು ಆರೋಪಿಸಿ ಜೈ ಸಿಂಘಾಲ್ ದೂರಿದ್ದಾರೆ. ಆದರೆ 120 ರು. ಟೋಲ್ ಶುಲ್ಕ ಉಳಿಸಲೆಂದು ಹೊಸ ರಸ್ತೆಯಲ್ಲಿ ಕರೆದು ಕೊಂಡು ಹೋಗುತ್ತಿದ್ದೆ. ಅಷ್ಟರಲ್ಲಿ ಗಲಾಟೆ ಪ್ರಾರಂಭಿಸಿ ಕ್ಯಾಬ್ ಇಳಿದು ಹೊರಟು ಹೋದರು ಎಂದು ಪೊಲೀಸರಿಗೆ ಕ್ಯಾಬ್ ಚಾಲಕ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಉಬರ್ ಆರೋಪವನ್ನು ತಳ್ಳಿಹಾಕಿದೆ.