ಪರೋಟಾ ಅಂದ್ರೆ ಯಾರು ಇಷ್ಟ ಪಡೊಲ್ಲ ಹೇಳಿ. ಅದೇನಾದ್ರೂ ತಟ್ಟೇಲಿ ಹಾಕಿ ಎದ್ರಿಗೆ ತಂದ್ರಿಟ್ರೆ ಮುಗೀತು ಬಾಯಿ ಚಪ್ಪರಿಸಿ ತಿಂತೀವಿ.. ಆದರೆ ಪರೋಟ ಪ್ರೀಯರಿಗೆ ಗುರ್‍ಗಾಂವ್‍ನ ಡಾಬಾವೊಂದು ಸಖತ್ ಆಫರ್ ಕೊಟ್ಟಿದೆ ನೋಡಿ. ನೀವೇನಾದ್ರೂ ಜಸ್ಟ್ ಮೂರೇ ಮೂರು ಪರೋಟ ತಿಂದ್ರೆ ಆ ಡಾಬಾದಲ್ಲಿ ಜೀವನ ಪರ್ಯಂತ ನಿಮ್ಗೆ ಪರೋಟ ಫ್ರೀ…!
ಅರೇ ಇದೇನ್ ಮಹಾ ಕೆಲ್ಸಾನಾ ಆ ಡಾಬಾದೊರ್ಗೇನೋ ಹುಚ್ಚು ಇಡ್ದಿರ್ಬೇಕು ಅನ್ಕೊಂಡ್ರೆ ಅದು ನಿಮ್ಮ ತಪ್ಪು. ಅದು ಸಾಮಾನ್ಯ ಪರೋಟಾ ಅಲ್ಲಾ ಸ್ವಾಮಿ ಒಂದು ಪರೋಟಾದ ತೂಕ ಬರೋಬ್ಬರಿ ಒಂದು ಕೆಜಿ…! ಇಡೀ ಪೂರ್ಣ ಪ್ರಮಾಣದ ಪರೋಟಾದ ಗಾತ್ರ ಒಂದು ಅಡಿ ಆರು ಇಂಚು. ಇದನ್ನು ದೇಶದ ಅತೀ ದೊಡ್ಡ ಪರೋಟಾ ಎಂದೇ ಕರೆಯಲಾಗುತ್ತಿದೆ. ಒಂದು ಪರೋಟಾಗೇ ಸುಸ್ತಾಗೋ ನಾವು ಇನ್ನು ಮೂರು ಪರೋಟಾನಾ..? ಸಾಧ್ಯನೇ ಇಲ್ಲ ಬಿಡಿ. ಇದೀಗ ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಪರೋಟಾದ ಬಗ್ಗೆಯೇ ಸಖತ್ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲಾ ರೀ ಸವಾಲು ಸ್ವೀಕರಿಸಿ ಮೂರು ಪರೋಟಾ ತಿನ್ನಲು ಕ್ಯೂನಲ್ಲಿ ಬಂದು ನಿಂತಿದ್ದಾರಂತೆ ನೋಡಿ…!
POPULAR STORIES :
ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!
ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!
ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!