ಮದುವೆಯಾದ ಹತ್ತೇ ಹತ್ತು ದಿನಕ್ಕೆ ಪತಿಯೊಬ್ಬ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ರವಿಕಾಂತ್ ಗಿರಿ ಆರೋಪಿ. ಪಿಂಕಿ ಮೃತೆ.
ಆರೋಪಿ ಉತ್ತರ ಪ್ರದೇಶದ ದಕ್ಷಿಣ ಭಾಗದ ಬುಲಂದಷಹಾರ್ ನಗರದಲ್ಲಿ ವ್ಯಾಪಾರಿಯಾಗಿದ್ದಾನೆ. ಹತ್ತು ದಿನದ ಹಿಂದಷ್ಟೇ ಮದುವೆಯಾಗಿದ್ದ ಮದುವೆ ಬಳಿಕ ಪತ್ನಿಗೆ 15 ಲಕ್ಷ ರೂ ವರದಕ್ಷಿಣೆ ತರುವಂತೆ ಕಿರುಕುಳ ನೀಡ್ತಿದ್ದ. ಹಣ ತರದೇ ಇದ್ದಿದ್ದಕ್ಕೆ ಕೊಂದೇ ಬಿಟ್ಟ ಎಂದು ಪಿಂಕಿ ಪೋಷಕರು ಆರೋಪಿಸುತ್ತಿದ್ದಾರೆ.
ರವಿಕಾಂತ್ ಪತ್ನಿಯನ್ನು ಕೊಂದು 100ಗೆ ಕರೆ ಮಾಡಿದ್ದ…! ತಡರಾತ್ರಿ ದೇವಸ್ಥಾನದಿಂದ ವಾಪಸ್ಸಾಗುವಾಗ ದರೋಡೆಕೋರರು ತಮ್ಮ ಕಾರು ಅಡ್ಡಗಟ್ಟಿದ್ದರು. ಪತ್ನಿ ದರೋಡೆಕೋರರ ವಿರುದ್ಧ ವಾಗ್ವಾದಕ್ಕೆ ಇಳಿದಿದ್ದಳು. ಇದ್ರಿಂದ ಕೋಪಗೊಂಡ ದರೋಡೆಕೋರರು ಪತ್ನಿಗೆ ಗುಂಡಿಟ್ಟರು. ನಾನು ಪೊಲೀಸರಿಗೆ ಕರೆ ಮಾಡಿದೆ ಎಂದು ರವಿಕಾಂತ್ ತನ್ನ ಕುಟುಂಬದವರ ಬಳಿ ಹೇಳಿಕೊಂಡಿದ್ದಾನೆ.
ಪೊಲೀಸರ ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿ ಕೊಂಡಿದ್ದಾನೆ.