ಮದುವೆಗೆ ಬಂದ ಅತಿಥಿಯನ್ನು ವರ ಮತ್ತು ಆತನ ನಾಲ್ವರು ಸ್ನೇಹಿತರು ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.
ಸೂರಜ್ ಪುರ್ ಗ್ರಾಮದಲ್ಲಿ ಸುರೇಂದ್ರ ಎಂಬಾತನ ಮದುವೆ ಇತ್ತು. ವಿವಾಹ ಪೂರ್ವ ಶಾಸ್ತ್ರಗಳ ಬಳಿಕ ವರ ಸುರೇಂದ್ರನ ಶೂಗಳು ಕಾಣಿಸಲಿಲ್ಲ. ಆಗ ಸುರೇಂದ್ರ ಮತ್ತವನ ಸ್ನೇಹಿತರು ಮದುವೆಗೆ ಬಂದಿದ್ದ ರಾಮ್ ಶರಣ್ ಎಂಬ 42ವರ್ಷದ ವ್ಯಕ್ತಿಯ ಮೇಲೆ ಅನುಮಾನಗೊಂಡು ಥಳಿಸಿದ್ದಾರೆ. ಗಂಭೀರ ಗಾಯಗೊಂಡ ರಾಮ್ ಶರಣ್ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ರಾಮ್ ಶರಣ್ ವರನ ಅನುಮಾನದಿಂದ ಮಸಣ ಸೇರಿದ್ದಾರೆ.