ಕಾಮಿ ಮೈದುನನೊಬ್ಬ ಅತ್ತಿಗೆಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ಉತ್ತರಪ್ರದೇಶದ ರಾಮ್ಪುರದಲ್ಲಿ ಬೆಳಕಿಗೆ ಬಂದಿದೆ.
ಮೈದುನನಿಂದ ಕಿರುಕುಳ ಅನುಭವಿಸಿದ ಸಂತ್ರಸ್ತೆಯೇ ವೀಡಿಯೋ ಮಾಡಿ ಅದನ್ನು ಪೊಲೀಸರಿಗೆ ನೀಡಿದ್ದಾರೆ…!
ಸಂತ್ರಸ್ತೆಯ ಪತಿ ಅನಾರೋಗ್ಯದಿಂದ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಈ ವೇಳೆ ಮೈದುನ ತಾನು ಮದುವೆಯಾಗುವುದಾಗಿ ಹೇಳಿ, ಮದುವೆ ಹೆಸರೇಳಿಕೊಂಡು ಲೈಂಗಿಕ ಕಿರುಕುಳ ನೀಡಲು ಶುರುಮಾಡಿದ್ದ ಎನ್ನಲಾಗಿದೆ.

ಮದುವೆ ಆಗುವಂತೆ ಎಷ್ಟು ಹೇಳುದರೂ ಆತ ಮದುವೆ ಮುಂದೂಡುತ್ತಿದ್ದ. ಇದನ್ನು ಸಹಿಸದೆ ಆತ ಲೈಂಗಿಕ ಕಿರುಕುಳ ನೀಡುವುದನ್ನು ಸ್ವತಃ ಸಂತ್ರಸ್ತೆಯೇ ವೀಡಿಯೋ ಮಾಡಿ ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.







