ಪೊಲೀಸ್ ಅಧಿಕಾರಿಯೊಬ್ಬರು ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಮಹಿಳೆಯೊಬ್ಬರು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಕರೆದೊಯ್ದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಭಾವನಾ ಪ್ರಸವ್ ಎಂಬುವವರಿಗೆ ಮಥುರಾದ ರೈಲ್ವೆ ನಿಲ್ದಾಣದ ಬಳಿ ಬಂದಾಗ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪಗೆ ಕರೆದುಕೊಂಡು ಹೋಗಲು ಗಂಡ ಅವರಿವರ ಸಹಾಯವನ್ನು ಯಾಚಿಸುತ್ತಿದ್ದರು. ಇದನ್ನು ಗಮನಿಸಿದ ಸ್ಟೇಷನ್ ಆಫೀಸರ್ ಸೋನು ರಾಜೌರಾ ಕೂಡಲೇ ಆ್ಯಂಬುಲೆನ್ಸ್ ಗೆ ಫೋನ್ ಮಾಡಿದ್ದಾರೆ. ಆ್ಯಂಬುಲೆನ್ಸ್ ಲಭ್ಯವಿಲ್ಲ ಅನ್ನೋದು ತಿಳಿದಾಗ , ತಳ್ಳುಗಾಡಿ ಹುಡುಕಿದ್ದಾರೆ. ಅದೂ ಸಹ ಇರದೇ ಇರುವಾಗ ತಾವೇ ಹೊತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಭಾವನ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.