ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ಗಾಡ್ ಫಾದರ್ ಉಪೇಂದ್ರ ಗುಡ್ ಬೈ ಹೇಳಿದ್ದಾರೆ.
ಉಪ್ಪಿಯೇ ಹುಟ್ಟುಹಾಕಿದ್ದ ಕೆಪಿಜೆಪಿಯಲ್ಲಿ ಬಿರುಕು ಉಂಟಾದ ಹಿನ್ನೆಲೆಯಲ್ಲಿ ಉಪ್ಪಿ ಕೆಲವೇ ತಿಂಗಳ ಹಿಂದೆ ಕಟ್ಟಿದ ಕೆಪಿಜೆಪಿ ಕುಟುಂಬವನ್ನು ಬಿಟ್ಟು ಹೊರಬಂದಿದ್ದಾರೆ.
ಸಹ ಸಂಸ್ಥಾಪಕ ಮಹೇಶ್ ಗೌಡ ಅವರ ಜೊತೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮನಸ್ತಾಪ ಉಂಟಾಗಿತ್ತು. ಕೆಪಿಜೆಪಿಗೂ ಉಪ್ಪಿಗೂ ಇನ್ಮುಂದೆ ಸಂಬಂಧವಿಲ್ಲ. ಉಪ್ಪಿ ತಮ್ಮ ಕಲ್ಪನೆಯ ಪ್ರಜಾಕೀಯದ ಹೆಸರಲ್ಲೇ ಹೊಸ ಪಕ್ಷ ಕಟ್ಟಲು ತೀರ್ಮಾನಿಸಿದ್ದಾರೆ. ಉಪ್ಪಿಯ ಜೊತೆ ನಾಲ್ಕು ಮಂದಿ ಕೆಪಿಜೆಪಿಗೆ ರಾಜೀನಾಮೆ ನೀಡುತ್ತಿದ್ದಾರೆ.
ಆದಷ್ಟು ಬೇಗ ಪಕ್ಷವನ್ನು ಕಟ್ಟುವ ಯೋಚನೆಯಲ್ಲಿ ಉಪ್ಪಿ ಇದ್ದಾರೆ. ಪ್ರಜಾಕೀಯ ಬಿಟ್ಟು ರಾಜಕೀಯ ಮಾಡಲ್ಲ ಅಂತ ಉಪ್ಪಿ ಸ್ಪಷ್ಟಪಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದೇ ಇದ್ದರೆ ಬಿಬಿಎಂಪಿ, ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.