ರಿಯಲ್ ಸ್ಟಾರ್ ಉಪೇಂದ್ರ ಅವರ ಪಕ್ಷ ಘೋಷಣೆ, ಸುದ್ದಿಗೋಷ್ಠಿಯದ್ದೇ ಪದೇ ಪದೇ ಇಷ್ಟೊಂದು ಸುದ್ದಿ ಯಾಕ್ ಹಾಕ್ತಿದ್ದೀರಾ? ಅಂತ ನೀವು ಪ್ರಶ್ನೆ ಮಾಡಬಹುದು..!? ಇದಕ್ಕೆ ಉತ್ತರವೂ ಇದೆ. ಉಪ್ಪಿಯ ಮಾತುಗಳು ಖಂಡಿತಾ ನಿಮಗೂ ಇಷ್ಟವಾಗುತ್ತವೆ..! ಉಪ್ಪಿ ಸುದ್ದಿಗೋಷ್ಠಿಯ ಪ್ರತಿಯೊಂದು ಮುಖ್ಯಾಂಶಗಳನ್ನು ನಿಮಗೆ ತಿಳಿಸೋ ಇಚ್ಛೆ ನಮ್ದು.
ಜನ ದುಡ್ಡು ಇಸ್ಕೊಂಡು ವೋಟ್ ಮಾಡ್ತಾರೆ..! ಇದನ್ನು ಸಂಸ್ಕøತಿಯನ್ನು ಬದಲಾಯಿಸೋಕೆ ಸಾಧ್ಯನಾ..? ಅಂತ ಜನ್ರಿಗೆ ನೀವು ಏನ್ ಹೇಳ್ತೀರಿ ಅಂತ ಪತ್ರಕರ್ತರೊಬ್ಬರು ಉಪ್ಪಿಗೆ ಪ್ರಶ್ನಿಸಿದ್ರು. ಅದಕ್ಕೆ ಉತ್ತರಿಸಿದ ಉಪೇಂದ್ರ ‘ದುಡ್ಡು ಇಸ್ಕೊಳ್ಬೇಡಿ ಅಂತ ಯಾರಿಗೂ ಹೇಳಲ್ಲ..! ಅದು ಅವರ ದುಡ್ಡು ಇಸ್ಕೊಳಿ. ಆದ್ರೆ ವೋಟ್ ಮಾಡ್ಬೇಡಿ’ ಎಂದು ಸಲಹೆ ನೀಡಿದ್ದಾರೆ..!
ನೀವು ಏನ್ ಕೆಲಸ ಮಾಡಿದ್ದೀರಿ ಎಂಬ ಪ್ರಶ್ನೆ ಉಪೇಂದ್ರಗೆ ಎದುರಾದಾಗ, ನನಗಿನ್ನೂ ಅವಕಾಶ ಸಿಕ್ಕಿಲ್ವಲ್ಲ ಅಂತ ಉಪ್ಪಿ ಹೇಳಿದ್ರು. ನೀವು ನಿಮ್ಮ ಕಾರ್ಯಕರ್ತರೆಲ್ಲರೂ ಸೇರಿ ಸಣ್ಣಪುಟ್ಟ ಕೆಲಸ ಮಾಡಬಹುದತ್ತು ಎಂಬ ಸಲಹೆ ಪತ್ರಕರ್ತರೊಬ್ಬರಿಂದ ಬಂತು. ಆಗ, ಉಪ್ಪಿ ನಾವೇಕೆ ಮಾಡ್ಬೇಕು? ಹೀಗೆ ಎನ್‍ಜಿಒ ಕಟ್ಕೊಂಡು, ದುಡ್ಡು ಕಲೆಕ್ಟ್ ಮಾಡ್ಕೊಂಡು ಸೇವೆ ಮಾಡೋದಂತೆ..! ಇವೆಲ್ಲಾ ಯಾಕ್ ಬೇಕು..ಜನರ ದುಡ್ಡೇ ಕೊಳೀತಾ ಇದೆ..! ಅದರಲ್ಲಿ ಕೆಲಸ ಆಗ್ಬೇಕು ಅಂದ್ರು ಉಪ್ಪಿ..!
ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಕಂಡ್ರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಉಪ್ಪಿ, ನಾನು ಸೋಲಲ್ಲ..! ಪ್ರಯತ್ನ ಮಾಡ್ತಿದ್ದೀನಿ. ಪ್ರಯತ್ನ ಕೈ ಬಿಡಲ್ಲ. ಎಲ್ಲರೂ ಪ್ರಯತ್ನಿಸಿ ಅಂತ ಹೇಳ್ತಿದ್ದೇನೆ..! ಪ್ರಯತ್ನ ಪಡದೇ ಹಾಗ್ ಮಾಡ್ಬೇಕಿತ್ತು. ಹಾಗ್ ಅನ್ಕೊಂಡಿದ್ದೆ ಅಂತ ಹೇಳೋದಲ್ಲ..! ಪ್ರಯತ್ನ ಬೇಕು ಎಂದು ಕಿವಿಮಾತು ಹೇಳಿದ್ದಾರೆ.
ದುಡ್ಡು ಇಸ್ಕೊಳಿ ಆದ್ರೆ ವೋಟ್ ಹಾಕ್ಬೇಡಿ ಎಂದ ಉಪ್ಪಿ..!
Date: