4ವರ್ಷದ ಬಳಿಕ ಕೊನೆಯ ನಿಲ್ದಾಣ ತಲುಪಿದ ರೈಲು ಬೋಗಿ…!

Date:

10ಲಕ್ಷ ರೂ ಮೌಲ್ಯದ ಗೊಬ್ಬರ ಸಾಗಿಸುತ್ತಿದ್ದ ರೈಲು ಬೋಗಿ (ವ್ಯಾಗನ್) 4ವರ್ಷದ ಬಳಿಕ ತನ್ನ ಕೊನೆಯ ನಿಲ್ದಾಣ ತಲುಪಿದೆ.
2014ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಸರಕು ಸಾಗಿಸುವ ರೈಲು ಸುಮಾರು 1400 ಕಿಮೀ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶದ ಬಸ್ತಿಯನ್ನು ತಲುಪಿದೆ.
ಇಂಡಿಯನ್ ಪೊಟಾಶ್ ಕಂಪನಿಯು #107462 ನಂಬರಿನ ಬೋಗಿಯನ್ನು ಬುಕ್ ಮಾಡಿಕೊಂಡಿತ್ತು. ಬೋಗಿಯಲ್ಲಿ 10ಲಕ್ಷ ರೂ ಮೌಲ್ಯದ ರಸಗೊಬ್ಬರವನ್ನು ವಿಶಾಖಪಟ್ಟಣ ಬಂದರಿನಿಂದ ಉತ್ತರ ಪ್ರದೇಶದ ಬಸ್ತಿಯಲ್ಲಿರುವ ರಾಮಚಂದ್ರ ಗುಪ್ತ ಎಂಬುವವರಿಗೆ ಲೋಡ್ ಮಾಡಿ ಸಾಗಿಸಲಾಗಿತ್ತು. ಆದರೆ, ಎಷ್ಟೋ ತಿಂಗಳಾದರೂ ವ್ಯಾಗನ್ ತಲುಪಬೇಕಾದ ಸ್ಥಳ ತಲುಪದೇ ಇದ್ದಾಗ ಗುಪ್ತಾ ಅವರು ರೈಲ್ವೆ ಇಲಾಖೆಯಲ್ಲಿ ದೂರು ನೀಡಿದ್ದರು.


ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.‌ಆದರೆ, ಇದೀಗ, ನಾಲ್ಕು ವರ್ಷಗಳ ಹಿಂದೆ ಬುಕ್ ಮಾಡಿದ್ದ ವ್ಯಾಗನ್ ತನ್ನ ಕೊನೆಯ ನಿಲ್ದಾಣವನ್ನು ತಲುಪಿದೆ. ಆದರೆ ವ್ಯಾಗನ್ ನಲ್ಲಿದ್ದ ಸರಕನ್ನು ಗುಪ್ತಾ ಪಡೆಯಲು ಹಿಂದೇಟು ಹಾಕಿದ್ದಾರೆ. ಸರಕುಗಳೆಲ್ಲಾ ಹಾನಿಗೊಳಗಾಗಿದ್ದು, ನನಗೆ ಲಕ್ಷಾಂತರ ರೂ. ನಷ್ಟವಾಗಿದೆ. ಈ ಸಂಬಂಧ ಗುಪ್ತಾರಿಗೆ ಆದ ನಷ್ವವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

Share post:

Subscribe

spot_imgspot_img

Popular

More like this
Related

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್!

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್! ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ...

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ ತಂದೆ: ಸಿಎಂ ಸಿದ್ದರಾಮಯ್ಯ

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ...

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ ಬೆಂಗಳೂರು:...

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು...