UPSC ಪರೀಕ್ಷೆ ಪಾಸ್ ಮಾಡಿದ ಮೊದಲ ಮಹಿಳೆ!

Date:

ಡಾ. ರೆಹಾನ್ ಬಶೀರ್. ಯುಪಿಎಸ್ ಸಿ ಪರೀಕ್ಷೆಯಲ್ಲಿ 187ನೇ ರ್ಯಾಂಕ್ ಪಡೆದು ಈಗ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಜಮ್ಮು- ಕಾಶ್ವೀರ ಅದರಲ್ಲೂ ಪೂಂಛ್ ಜಿಲ್ಲೆಯಲ್ಲಿ ಆಡಳಿತಾತ್ಮಕ ಪರೀಕ್ಷೆ- ಐಎಎಸ್ ಪಾಸು ಮಾಡಿದ ಮೊದಲ ಮಹಿಳಾ ಅಭ್ಯರ್ಥಿ ಯಾಗಿದ್ದಾರೆ.


ಜಮ್ಮು-ಕಾಶ್ವೀರದ ಮೆನ್ಹಾರ್ ಜಿಲ್ಲೆಯ ಸಾಲ್ವಾ ಗ್ರಾಮದ ಡಾ. ರೆಹಾನ್ ಅವರು ನಾಗರಿಕ ಸೇವೆಗಳನ್ನು ವೃತ್ತಿಯಾಗಿ ಆಯ್ಕೆಯಾಗಿ ಮುಂದುವರಿಸಬಹುದು ಅಥವಾ ಅತ್ಯುನ್ನತ ಶ್ರೇಣಿಯಲ್ಲಿ ಪಡೆದುಕೊಳ್ಳುವ ಬಗ್ಗೆ ಯೋಚಿಸಿರಲಿಲ್ಲ. ರೆಹಾನ್ ಅವರು ಎಂಬಿಬಿಎಸ್ ನ ಪದವಿಯ ಇಂಟರ್ನ್ಶಿಪ್ ಮುಗಿಸಿದ ನಂತರ ಜೀವನದಲ್ಲಿ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡರು. ಜಗತ್ತಿನ ವಾಸ್ತವತೆಯನ್ನು ಕಣ್ಣಾರೆ ಕಂಡ ಅವರು ಜೀವನದಲ್ಲಿ ತನ್ನ ವೃತ್ತಿಯನ್ನು ಬದಲಾಯಿಸಲು ನಿರ್ಧಾರ ಕೈಗೊಂಡರು.
ಡಾ. ರೆಹಾನ್ ಅವರ ಬದುಕಿನ ಪ್ರಯಾಣ ಬಹಳ ಕಷ್ಟದಲ್ಲೇ ಸಾಗಿತು. ಒಂದು ಮಧ್ಯಮದ ಕುಟುಂಬದವರು. ತಂದೆ ರಾಜ್ಯ ಅರಣ್ಯ ನಿಗಮದಲ್ಲಿ ನೌಕರರಾಗಿದ್ದರು. ಅವರು ಅನಿರೀಕ್ಷಿತವಾಗಿ ಅನಾರೋಗ್ಯಕ್ಕೆ ತುತ್ತಾಗಿ, ಚೇತರಿಸಿಕೊಳ್ಳಲಾಗದೆ ನಿಧನರಾದರು. ಆಗ ಕುಟುಂಬದ ಹೊಣೆ ತಾಯಿಯದು.ಸಹೋದರ ಅಮೀರ್ 8ನೇ ತರಗತಿ ಓದುತ್ತಿದ್ದು, ಇಬ್ಬರ ಜವಾಬ್ದಾರಿಯನ್ನು ತಾಯಿಯೇ ನಿಬಾಯಿಸಿದ್ದಲ್ಲದೆ ಓದಲು ಬೆನ್ನಲುಬಾಗಿದ್ದರು.


ಡಾ. ರೆಹಾನ್ ಅವರನ್ನು ತಾಯಿ ಕಷ್ಟದ ಬದುಕಿನಲ್ಲೂ ಓದಲು ಯಾವುದೇ ರೀತಿಯಿಂದ ತೊಂದರೆ ಆಗದಂತೆ ನೋಡಿಕೊಂಡರು. ಇನ್ನು ರೆಹಾನ್ ಹೈಸ್ಕೂಲ್ ನಂತರ ತಾವು ಎಂಬಿಬಿಎಸ್ ಓದಬೇಕೆಂಬ ಬಗ್ಗೆ ಕನಸು ಕಂಡವರಲ್ಲ, ತಂದೆಯ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾದ ಹಿನ್ನೆಲೆಯಲ್ಲಿ ತಾವೇಕೆ? ವೈದ್ಯರಾಗಬಾರದು? ಎಂದು ಛಲತೊಟ್ಟ ಕಷ್ಟಪಟ್ಟು ಇಷ್ಟಪಟ್ಟು ಓದಿದರು. ಈ ಸಮಯದಲ್ಲಿ ಡಾ. ರೆಹಾನ್ ಅವರಿಗೆ ಮತ್ತೆ ಅತ್ಯುನ್ನತ ಪರೀಕ್ಷೆಗಳನ್ನು ಎದುರಿಸಬೇಕೆಂದು ನಿರ್ಧರಿಸಿ, ಯುಪಿಎಸ್ ಸಿ ಪರೀಕ್ಷೆಗೆ ಮುಂದಾದರು.
ರೆಹಾನ್ ಇಂಟರ್ನಿಶಿಪ್ ಸಮಯದಲ್ಲಿ ವೈದ್ಯರಷ್ಟೇ ಆದರೆ ಸಾಧನೆಯಲ್ಲ; ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಯುಪಿಎಸ್ ಸಿ ಪರೀಕ್ಷೆ ಬರೆದು ಸಾರ್ವಜನಿಕ ಆಡಳಿತಾತ್ಮಕ ಇಲಾಖೆಯಲ್ಲಿ ದೊಡ್ಡ ಅಧಿಕಾರಿ ಆಗಬೇಕೆಂದು ದೃಢ ನಿರ್ಧಾರ ಕೈಗೊಂಡರು. ಕೊನೆಗೂ ಅಂದುಕೊಂಡಂತೆ ಯುಪಿಎಸ್ ಸಿ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದರು. ಈಗ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಕಠಿಣ ಶ್ರಮ, ದೃಢ ನಿರ್ಧಾರ ಮತ್ತು ಗುರಿ ಇದ್ದರೆ ಕಷ್ಟದಲ್ಲೂ ಜಯಗಳಿಸಬಹುದು. ಯಾವುದೇ ಗುರಿಯನ್ನು ಮುಟ್ಟಬಹುದು ಎನ್ನುವುದಕ್ಕೆ ಡಾ. ರೆಹಾನ್ ಬಶೀರ್ ಅವರೇ ಕಾರಣ. ಇವರು ಜಮ್ಮು-ಕಾಶ್ಮೀರದ ಪ್ರತಿ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....