ಪಾಕ್‍ನ ಭಯೋತ್ಪಾದರು ಭಾರತದ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಉಭಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೇ ಭಾರತೀಯ ಸೈನಿಕರು ಪಾಕ್ ಭಯೋತ್ಪಾದಕರ ವಿರುದ್ದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ನಡೆಸಿ ಪಾಕ್‍ಗೆ ಎಚ್ಚರಿಕೆಯನ್ನು ಸಹ ನೀಡಿತ್ತು. ಇದೀಗ ಅಮೇರಿಕಾದ ಸರದಿಯಾಗಿದೆ..! ಉಗ್ರರ ದಮನ ಕಾರ್ಯಾಚರಣೆಯಲ್ಲಿ ಪಾಕ್ ಸರ್ಕಾರ ವ್ಯಕ್ತ ಪಡಿಸುತ್ತಿರುವ ದ್ವಂದ್ವ ನಿಲುವಿನಿಂದ ಇದೀಗ ಅಮೇರಿಕಾ ಖಡಕ್ ಎಚ್ಚರಿಕೆ ನೀಡಿದೆ. ಭಯೋತ್ಪಾದಕರ ವಿರುದ್ದ ನೀವು ಸಮರ ಸಾರ್ತಿರೋ ಇಲ್ಲ ನಾವು ಏಕಾಂಗಿ ಹೋರಾಟ ನಡೆಸಬೇಕೊ..? ಎಂದು ಪಾಕ್‍ಗೆ ಅಮೇರಿಕ ಎಚ್ಚರಿಸಿದೆ.. ಪಿಒಕೆನಲ್ಲಿ ಭಾರತದ ಸೈನಿಕರು ನಡೆಸಿದ ಸರ್ಜಿಕಲ್ ದಾಳಿಯ ಬಳಿಕ ಇದೀಗ ಅಮೇರಿಕಾ ಕೂಡ ಪಾಕ್ ಮೇಲೆ ಏಕಾಂಗಿ ದಾಳಿ ನಡೆಸಲು ಹಾತೊರೆಯುತ್ತಿದ್ದೇವೆ.. ಯಾವುದೇ ಸಮಯದಲ್ಲಾದರೂ ನಮ್ಮ ಸೈನಿಕರು ಭಯೋತ್ಪಾದಕರ ವಿರುದ್ದ ದಾಳಿಗೆ ಸಿದ್ದ ಎಂದಿದ್ದಾರೆ.
ಇಡೀ ವಿಶ್ವವೇ ಪಾಕ್ ದೇಶವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಸಬೇಕು ಎಂದು ಹೇಳುತ್ತಿರುವುದು ಪಾಕ್‍ಗೆ ಇನ್ನಿಲ್ಲದ ಮುಜುಗರವನ್ನುಂಟು ಮಾಡಿದೆ. ಅಲ್ಲದೇ ಭಾರತವೂ ಕೂಡ ಪಾಕಿಸ್ತಾನವನ್ನು ಏಕಾಂಗಿ ದೇಶವನ್ನಾಗಿ ಮಾಡಲು ಎಲ್ಲಾ ರೀತಿಯ ಯೋಜನೆಗಳನ್ನು ಹಾಕಿ ಸಫಲತೆ ಕಾಣ್ತಾ ಇದೆ. ಈಗ ಅಮೇರಿಕಾ ಕೂಡ ಎಚ್ಚರಿಕೆಯನ್ನು ನೀಡಿದ್ದು ಪಾಕ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಪಾಕ್‍ನಲ್ಲಿನ ಉಗ್ರರ ದಮನಕ್ಕೆ ಇಡಿ ವಿಶ್ವದಾದ್ಯಂತ ಒತ್ತಾಯಗಳು ಕೇಳಿ ಬರುತ್ತಿದ್ದರೂ ಪಾಕ್‍ನ ಗುಪ್ತಚರ ಸಂಸ್ಥೆಗಳು, ಐಎಸ್‍ಐ ಉಗ್ರರ ವಿರುದ್ದ ದಾಳಿಗೆ ಯಾಕೋ ಮನಸ್ಸೆ ಮಾಡ್ತಾ ಇಲ್ಲ. ಸರ್ಕಾರ ಉಗ್ರ ಸಂಘಟನೆಗಳ ವಿರುದ್ದ ಸಮರ ಸಾರುತ್ತೇವೆ ಎಂದು ಬಾಯ್ಮಾತಲ್ಲಿ ಹೇಳಿದ್ರೂ ಕೂಡ ಅಲ್ಲಿನ ಗುಪ್ತಚರ ಇಲಾಖೆ ಮಾತ್ರ ಹಿಂದೆ ಸರಿಯುತ್ತಿದೆ. ಇದು ಪಾಕ್‍ನ ಉಗ್ರರಿಗೆ ಇನ್ನಷ್ಟು ಬಲ ಬಂದಂತಾಗಿದೆ. ಇಷ್ಟೆಲ್ಲಾ ವಿದ್ಯಾಮಾನಗಳ ನಡುವೆಯೂ ಪಾಕ್ ಮತ್ತೆ ಮತ್ತೆ ಉಗ್ರರ ವಿರುದ್ದ ಕಾರ್ಯಾಚರಣೆ ನಡೆಸದೇ ಹೋದಲ್ಲಿ ಅಮೇರಿಕಾ ಸೈನಿಕ ಪಡೆ ನಿಮ್ಮ ದೇಶಕ್ಕೆ ನುಸುಳಿ ಭಯೋತ್ಪಾದರ ಸದೆಬಡೆಯುತ್ತೇವೆ ಎಂದು ಉಗ್ರ ನಿಗ್ರಹಧಳ ಅಧಿಕಾರಿ ಆಡಂ ಜುಬಿನ್ ಎಚ್ಚರಿಸಿದ್ದಾರೆ. ವಾಷಿಕ್ಟನ್‍ನ ಪೌಲ್ ಎಚ್ ನಿಟ್ಜೆ ಸ್ಕೂಲ್ ಆಫ್ ಇಂಟರ್‍ನ್ಯಾಷನಲ್ ಸ್ಟಡೀಸ್‍ನ ಕಾರ್ಯಕ್ರಮಯೊಂದರಲ್ಲಿ ಮಾತನಾಡಿದ ಆಡಮ್ ಹಕ್ಕಾನಿ ಜಾಲ, ತಹ್ರಿಕ್ ಇ ತಾಲಿಬಾನ್, ಲಷ್ಕರೆ ತೊಯ್ಬಾ ಸೇರಿದಂತೆ ಇನ್ನು ಅನೇಕ ಉಗ್ರ ಸಂಘಟನೆಗಳಿಗೆ ಪಾಕ್ ಜಾಗ ನೀಡಿದೆ. ಉಗ್ರರ ನಿಗ್ರಹ ವಿಚಾರದಲ್ಲಿ ಅಮೇರಿಕಾ ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳು ಪಾಕ್‍ಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ಸಹಾಯವನ್ನೂ ನೀಡಲು ಮುಂದಾಗಲಿದೆ. ಆದರೆ ಪಾಕ್ ಯಾವುದೇ ಕಾರಣಕ್ಕೂ ಶತ್ರಗಳ ಹತ್ತಿಕ್ಕಲು ಯಾವುದೇ ಮೀನಾಮೇಷ ಮಾಡಕೂಡದು ಎಂದಿದ್ದಾರೆ. ಅಲ್ಲದೇ ಅನಿವಾರ್ಯ ಬಿದ್ದರೆ ಅಥವಾ ಕೈಮೀರಿದ ಸನ್ನಿವೇಶ ಏನಾದರೂ ಒದಗಿ ಬಂದಲ್ಲಿ ಅಮೇರಿಕಾ ಉಗ್ರರ ನೆಲೆಗಳ ಧ್ವಂಸ ಮಾಡಲು ಮುನ್ನುಗ್ಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಉಗ್ರರನ್ನು ಪಳಗಿಸಿ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಿದ ಪಾಕ್ ಇದೀಗ ಅವರೇ ಪ್ರತಿಫಲ ಅನುಭವಿಸುತ್ತಿದ್ದಾರೆ. ಉಗ್ರಗಾಮಿಗಳು ಪಾಕ್‍ನ ಶಾಲೆ, ಮಸೀದಿ, ಮಾರುಕಟ್ಟೆಗಳ ಮೇಲೆ ದಾಳಿ ನಡಿಸಿದರೂ ಅಲ್ಲಿನ ಸರ್ಕಾರ ಇನ್ನು ಬುದ್ದಿ ಕಲಿತಿಲ್ಲ. ಶತ್ರುಪಾಳಯ ವಿರುದ್ದ ಪರೋಕ್ಷ ಸಮರ ಸಾರಲು ಭಯೋತ್ಪಾದಕರನ್ನು ಎತ್ತಿಕಟ್ಟಿ ಅದರ ಪರಿಣಾಮ ಅನುಭವಿಸುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತ ಪಡಿಸಿದ್ದಾರೆ.
Like us on Facebook The New India Times
POPULAR STORIES :
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!