ಕಾಮಿ ಮಾವನಿಂದ ಅತ್ಯಾಚಾರಕ್ಕೆ ಒಳಗಾದ ಸೊಸೆ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ನಡೆದಿದೆ.
20ವರ್ಷದ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ. ಮನೆಯಲ್ಲಿ ಯಾರೂ ಇರದ ವೇಳೆ ಪತಿಯ ತಂದೆ ಬ್ರಹ್ಮ ಹರಿಕಂತ್ರ (50) ಅತ್ಯಾಚಾರ ನಡೆಸಿದ್ದು, ಖಿನ್ನತೆಗೆ ಒಳಗಾದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇವಲ ಒಂದು ವರ್ಷದ ಹಿಂದಷ್ಟೇ ಸಂತ್ರಸ್ತೆ ಕುಮಟಾದ ಹಿರೇಗುತ್ತಿ ಬಳಿಯ ನವಗ್ರಹ ಗ್ರಾಮದ ಶಿವು(25) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮೀನುಗಾರಿಕೆ ನಡೆಸಲು ಪತಿ ಬೋಟಿಗೆ ಹೋಗುತ್ತಿದ್ದನು. ಅತ್ತೆ ಸಹ ಬೇರೆಡೆಗೆ ಕೆಲಸಕ್ಕೆ ಹೋಗುತ್ತಿದ್ದರು. ಆದ್ದರಿಂದ ಈಕೆ ಒಬ್ಬಳೇ ಮನೆಯಲ್ಲಿರುತ್ತಿದ್ದರು.
ಸೊಸೆ ಒಬ್ಬಳೇ ಮನೆಯಲ್ಲಿರುತ್ತಿದ್ದರಿಂದ ಮಾವ ಕೂಡ ಕೆಲಸಕ್ಕೆ ಹೋಗದೆ ಈಕೆ ಒಂಟಿಯಾಗಿರುವಾಗ ಅಸಭ್ಯ ವಾಗಿ ವರ್ತಿಸುತ್ತಿದ್ದ. ತನಗೆ ಸಹಕರಿಸುವಂತೆ ಹೇಳಿದ್ದಾನೆ. ಇದಕ್ಕೆ ಆಕೆ ಒಪ್ಪಿರಲ್ಲಿಲ್ಲ. ಹೆದರಿ ಪತಿ ಮತ್ತು ಅತ್ತೆಗೂ ತಿಳಿಸಿರಲಿಲ್ಲ. ಮೇ 1ರಂದು ಮಾವ ಬ್ರಹ್ಮಹರಿಕಾಂತ್ ಸೊಸೆ ಕೋಣೆಯಲ್ಲಿ ಒಬ್ಬಳೇ ಇರುವಾಗ ಅತ್ಯಾಚಾರ ಎಸಗಿದ್ದಾನೆ. ಘಟನೆ ಬಳಿಕ ಪತಿ ಶಿವುಗೆ ವಿಷಯ ತಿಳಿಸಿ ಸಂತ್ರಸ್ತೆ ತವರು ಸೇರಿದ್ದಳು.
ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ಈಕೆ ಗುರುವಾರ ಹಿಲ್ಲೂರಿನ ಅರಣ್ಯ ಪ್ರದೇಶಕ್ಕೆ ತೆರಳಿ ನೇಣು ಬಿಗಿದುಕೊಂಡಿದ್ದಾಳೆ.ಆತ್ಮಹತ್ಯೆಗೆ ಮುನ್ನ ಮಾವ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಡೆತ್ ನೋಟ್ ನಲ್ಲಿ ತಿಳಿಸಿದ್ದಾಳೆ. ಆರೋಪಿ ಮಾವನನ್ನು ಪೊಲೀಸರು ಬಂಧಿಸಿದ್ದಾರೆ.