ಮಾಧ್ಯಮ ಕ್ಷೇತ್ರದಲ್ಲಿ 24 ವರ್ಷದ ಸುದೀರ್ಘ ಪಯಣ ಇವರದ್ದು. ತಂದೆಯ ಆಸೆಯಂತೆ ಮಾಧ್ಯಮಕ್ಕೆ ಕಾಲಿಟ್ಟರು. ದೂರದರ್ಶನ ಮತ್ತು ಉದಯ ಟಿವಿಯಲ್ಲಿ ಸೇವೆ ಸಲ್ಲಿಸಿರೋ ಈ ನಿರೂಪಕಿ ನಾಟ್ಯ ಮಯೂರಿ…!
ವಾಣಿಕೌಶಿಕ್, ಇವರು ಮಾಧ್ಯಮದಲ್ಲಿ ಕೆಲಸ ಆರಂಭಿಸಿದಾಗ ಈಗಿನಂತೆ ಲೆಕ್ಕವಿಲ್ಲದಷ್ಟು ಚಾನಲ್ ಗಳು ಇರಲಿಲ್ಲ. ಅದು ಆ್ಯಂಟೆನಾ ಯುಗ… ದೂರದರ್ಶನದಲ್ಲಿ ಬರ್ತಿದ್ದ ಕಾರ್ಯಕ್ರಮಗಳಿಗೆ ಜನ ಕಾಯ್ತಿದ್ದ ದಿನಗಳವು. ಆ ದಿನಗಳಲ್ಲಿ ಮಾಧ್ಯಮ ರಂಗ ಪ್ರವೇಶಿಸಿ, ಬದಲಾದ ಸುದ್ದಿವಾಹಿನಿಗಳ ಈ ಯುಗದ ಅನುಭವವನ್ನೂ ಪಡೆದ ಹಿರಿಯರು.
ವಾಣಿ ಕೌಶಿಕ್ ಅವರು ಹುಟ್ಟಿದ್ದು ಹಾಸನದಲ್ಲಿ. ತಂದೆ ದಿ. ಸತ್ಯನಾರಾಯಣ್, ದಿ. ಶಾಂತಲಕ್ಷ್ಮಿ, ತಮ್ಮ ರಾಮ್‍ಕುಮಾರ್ ಕೌಶಿಕ್, ಪತಿ ರಾಮಕೃಷ್ಣ. ಅಮಿತ್ ಹಿರಿ ಮಗ, ಅಖಿಲ ಸೊಸೆ, ಅಚ್ಚುತ್ ಕಿರಿಮಗ. ಅತ್ತೆ ದಿ. ಸೀತಾಲಕ್ಷ್ಮಿ, ಮಾವ ಸುಬ್ಬರಾವ್.
ತಂದೆ ಸರ್ಕಾರಿ ಉದ್ಯೋಗಿ ಆಗಿದ್ದರಿಂದ ವಾಣಿ ಅವರ ಪ್ರಾಥಮಿಕ ಶಿಕ್ಷಣ ಭದ್ರಾವತಿ ಸರ್ಕಾರಿ ಪ್ರಾಥಮಿಕ ಶಾಲೆ, ಮಂಗಳೂರಿನ ಶಾರದ ವಿಲಾಸ, ಬೆಂಗಳೂರಿನ ಸರಸ್ವತಿ ವಿದ್ಯಾಮಂದಿರದಲ್ಲಾಯಿತು. ಬೆಂಗಳೂರಿನ ರಾಜಾಜಿನಗರದ ಅರಬಿಂದೋ ಶಾಲೆಯಲ್ಲಿ ಪ್ರೌಢಶಿಕ್ಷಣ, ವಿದ್ಯಾವರ್ಧಕ ಕಾಲೇಜಿನಲ್ಲಿ ಪಿಯುಸಿ, ಹಾಸನದ ಎವಿಕೆ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ ಪಡೆದರು.
ಉಷಾದಾತರ್ ಅವರಿಂದ ಭರತನಾಟ್ಯ ಕಲಿತು 1984ರಲ್ಲಿ ರಂಗಪ್ರವೇಶ ಮಾಡಿದ ವಾಣಿ ಕೌಶಿಕ್ ಅವರು, ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿಯಲ್ಲಿ ಯಲ್ಲಿ ಮಯೂರ ಅವರಿಂದ ಕಥಕ್ ಮತ್ತು ಕೊರಿಯೋಗ್ರಫಿ ಹಾಗೂ ಸುನಂದಾದೇವಿ ಅವರಿಂದ ಕುಚುಪಡಿ ಕಲಿತಿದ್ದಾರೆ.
ವಿದ್ವಾನ್ ರಮಾ ಶಾಸ್ತ್ರಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ (ಸೀನಿಯರ್ ಲೆವೆಲ್) ಅಭ್ಯಾಸ ಮಾಡಿದ್ದಾರೆ. ರಾಜಾಜಿನಗರದಲ್ಲಿ ‘ಝೇಂಕಾರ ನೃತ್ಯಾನಿಕೇತನ’ ಎಂಬ ನೃತ್ಯ ತರಬೇತಿ ಶಾಲೆಯನ್ನು ನಡೆಸುತ್ತಿದ್ದಾರೆ.
1993ರಲ್ಲಿ ತಂದೆಯ ಆಸೆಯಂತೆ ದೂರದರ್ಶನಕ್ಕೆ ಸೇರಿದ್ರು. ಇಲ್ಲಿ 2000 ಇಸವಿಯವರೆಗೆ ‘ಸುತ್ತಮುತ್ತ’, ‘ಮುನ್ನೋಟ’ ಪ್ರೋಗಂ ಅನೌನ್ಸರ್ ಆಗಿ ಸೇವೆ ಸಲ್ಲಿಸಿದ್ರು.
ಬಳಿಕ 2000 ನೇ ಇಸವಿಯಲ್ಲಿ ಉದಯ ಬಳಗದ ಸದಸ್ಯರಾದ್ರು. ಅಂದು ನ್ಯೂಸ್ ಚೀಫ್ ಆಗಿದ್ದ ಮುಂಜಾನೆ ಸತ್ಯ, ಸಮೀವುಲ್ಲಾ, ಆರಾಧ್ಯ ಅವರೊಡನೆ ಕೆಲಸ ಮಾಡಿದ ಅನುಭವ ದೊಡ್ಡದು. ಸುಧಾಮಣಿ, ರವೀಂದ್ರನಾಥ್, ಅರವಿಂದ್ ಮತ್ತಿತರರ ಜೊತೆ ಕೆಲಸ ಮಾಡಿದ ಸವಿ ನೆನಪು ಕೂಡ ಇವರ ಜೊತೆಗಿದೆ.
ಉದಯ ಟಿವಿಯಲ್ಲಿ ಉದಯ ವಾರ್ತೆಗಳನ್ನು ಓದುತ್ತಿದ್ದ ವಾಣಿಕೌಶಿಕ್ ಅವರನ್ನು ನೋಡಿರೋ ನೆನಪು ನಿಮಗಿರುತ್ತೆ. ಉದಯ ನ್ಯೂಸ್ ನಲ್ಲಿ ಡಾಕ್ಟರ್ಸ್ ಲೈನ್, ಜ್ಯೋತಿಷ್ಯ, ಎಜುಕೇಷನ್ ಲೈವ್ ಮೊದಲಾದವುಗಳನ್ನು ನಡೆಸಿಕೊಟ್ಟಿದ್ದಾರೆ. ಸಂಸ್ಕೃತಿ ಆಧಾರಿತ ‘ಸಿರಿಸಂಪದ’ ಕಾರ್ಯಕ್ರಮದ ನಿರ್ಮಾಣ, ನಿರ್ವಹಣೆ, ನಿರೂಪಣೆ ಎಲ್ಲಾ ಜವಬ್ದಾರಿಯೂ ಇವರದ್ದೇ ಆಗಿತ್ತು.
ಡಾ. ರಾಜ್‍ಕುಮಾರ್ ಅವರು ವಾಣಿ ಅವರ ಆರಾಧ್ಯದೈವ. ಇವರು ವಿಧಿವಶರಾದಾಗ ಅಂತಿಮ ದರ್ಶನ ಪಡೆಯಲು ಹೋಗಿದ್ದರು. ನೂಕು ನುಗ್ಗಲು ಉಂಟಾದಾಗ ಉದಯ ವರದಿಗಾರರು ಅಲ್ಲಿಗೆ ಹೋಗುವುದು ಕಷ್ಟವಾಗಿತ್ತು. ಆಗ ವಾಣಿ ಅವರತ್ರ ಬೈಟ್ ತೆಗೆದುಕೊಳ್ಳುವಂತೆ ಹೇಳಿದ್ರು. ಅವತ್ತು ಭಾವುಕರಾಗಿಯೇ ವಾಣಿ ಬೈಟ್ ತೆಗೆದುಕೊಂಡಿದ್ರು…! ಹಾಗೆಯೇ ಅದು ಪ್ರಸಾರವಾಗಿತ್ತು.
ದೂರದರ್ಶನದಲ್ಲಿರುವಾಗ ಕಾಣೆಯಾದವರ ಪ್ರಕಟಣೆ ಓದುವಾಗ ತಾಂತ್ರಿಕ ದೋಷದಿಂದ ಮಾಜಿ ರಾಷ್ಟ್ರಪತಿ ಕೆ.ಆರ್ ನಾರಾಯಣನ್ ಅವರ ಫೋಟೋ ಬಂದಿತ್ತು. ಮರುದಿನ ಇದು ಬಹುತೇಕ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು…! ಇದು ವಾಣಿ ಕೌಶಿಕ್ ಅವರಿಗೆ ಮತ್ತೆ ಮತ್ತೆ ನೆನಪಾಗ್ತಿರುತ್ತೆ.
ಉದಯದಲ್ಲಿ ಅವಕಾಶಕೊಟ್ಟ ಪ್ರೆಸಿಡೆಂಟ್ ಸೆಲ್ವನ್ ಸರ್ ಮತ್ತು ಎಂ.ಡಿ ವಿಜಯ ಸರ್ ಅವರಿಗೆ ತಾನು ಅಭಾರಿ ಎನ್ನುತ್ತಾರೆ ವಾಣಿ. ಇವರಿಗೆ ಮಾಧ್ಯಮ ಪ್ರಶಸ್ತಿ, ನಾಟ್ಯ ರಾಣಿ ಶಾಂತಲ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಲಭಿಸಿದೆ.
ತಂದೆ ಹೃದಯಘಾತದಿಂದ ದಿಢೀರನೆ ಸಾವನ್ನಪ್ಪಿದ್ದು, ಹಾಸನದಿಂದ ಬೆಂಗಳೂರಿಗೆ ಬರ್ತಿದ್ದಾಗ ಅಪಘಾತದಲ್ಲಿ ತಾಯಿ ಅಕಾಲಿಕ ಮರಣವನ್ನಪ್ಪಿದ್ದು, ಉದಯ ನ್ಯೂಸ್ ಸ್ಥಗಿತಗೊಂಡಿದ್ದು ವಾಣಿ ಅವರಿಗೆ ಸದಾ ಕಾಡುವ ನೋವು.
ಉದಯ ನ್ಯೂಸ್ ಸ್ಥಗಿತಗೊಂಡಮೇಲೆ ತನ್ನ ‘ಝೇಂಕಾರ ನೃತ್ಯಾನಿಕೇತನ’ ಶಾಲೆಯಲ್ಲಿ ನಾಟ್ಯ ತರಬೇತಿ ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ನಾನಾ ಚಾನಲ್ ಗಳಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಹೊಸ ವರ್ಷದ ಶುಭಗಳಿಗೆಯಲಿ ಮತ್ತೆ ಸುದ್ದಿವಾಹಿನಿಯೊಂದರ ಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ…
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್