ಸದಾ ಒಂದಲ್ಲೊಂದು ಗೊಂದಲ ಸೃಷ್ಟಿಸೋ ಹೇಳಿಕೆ ನೀಡುವ ಕೋಲಾರದ ಪಕ್ಷೇತರ ಶಾಸಕ ಆರ್. ವರ್ತೂರು ಪ್ರಕಾಶ್ ಮತ್ತೊಂದು ಹೇಳಿಕೆ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಕೋಲಾರದ ಬೈರೇಗೌಡ ನಗರದ ತಮ್ಮ ನಿವಾಸದ ಬಳಿ ನಡೆಸಿದ ಹೋಬಳಿಮಟ್ಟದ ಕಾರ್ಯರ್ತರ ಸಭೆಯಲ್ಲಿ ಮಾತಾಡಿದ ಅವರು, ನನ್ನ ಅಶ್ಲೀಲ ಸಿಡಿ ಇದೆಯಂತೆ, ಅದನ್ನು ನನ್ನ ವಿರೋಧಿಗಳು ಬಿಡ್ತಾರಂತೆ. ಎಲ್ಲೆಡೆ ಇಂಥಾ ಸುದ್ದಿಯನ್ನು ಹರಿಬಿಟ್ಟಿದ್ದಾರೆ. ರಿಲೀಸ್ ಮಾಡಲಿ ಬಿಡಿ. ನಾನು ಗಂಡಸೇ ಅಲ್ವಾ..? ಅಂತ ಹೇಳಿದ್ದಾರೆ.
ಅಶ್ಲೀಲ ಸಿಡಿ ಬಿಡುಗಡೆಯಾದ ಶಾಸಕರು ಮತ್ತೊಮ್ಮೆ ಶಾಸಕರಾಗಿದ್ದಾರೆ. ಮಾಜಿ ಸಚಿವ ಎಚ್ .ವೈ . ಮೇಟಿ ಸಿಡಿ ನೋಡಿದ್ದೀರಲ್ಲ..? ಸಿಡಿ ಬಿಡುಗಡೆಯಾದ ಮೇಲೆ ಅವರು ಎಪಿಎಂಸಿ ಗೆದ್ದುಕೊಂಡ್ರು. ಮತ್ತೆ ಬಾಗಲಕೋಟೆಯಲ್ಲಿ ಎಂಎಲ್ ಎ ಆಗ್ತಾರೆ ಎಂದರು…!
ವಿರೋಧಿಗಳು ರಾಜಕೀಯವಾಗಿ ನನ್ನ ಮುಗಿಸಲು ನೋಡುತ್ತಿದ್ದಾರೆ. ಕ್ಷೇತ್ರದ ಜನ ತಲೆ ತಗ್ಗಿಸೋ ಕೆಲಸ ನಾನು ಮಾಡಲ್ಲ ಅಂತ ಹೇಳಿದ್ರು.