ಒಂದು ಕಾಲದ ವಿಜ್ಞಾನಿ ಇಂದು ಭಿಕ್ಷುಕ..! ಭಾರತದ ಐನ್ ಸ್ಟೀನ್ ನ ದುರಂತ ಕಥೆ ಇದು..!

Date:

ಕಾಲ ಕೆಟ್ಟಾಗ, ಅದೃಷ್ಟ ಕೈ ಕೊಟ್ಟಾಗ ಎಂಥವ ವ್ಯಕ್ತಿಯಾದರೂ ಸರಿ ಬೀದಿಗೆ ಬರಲೇ ಬೇಕು. ಈ ಮಾತು ಹೇಳಲು ಕಾರಣ ಭಾರತದ ಐನ್ ಸ್ಟೀನ್ ಎಂದು ಖ್ಯಾತಿ ಪಡೆದಿದ್ದ ವ್ಯಕ್ತಿ..! ಇಷ್ಟಕ್ಕೂ ಒಂದು ಕಾಲದಲ್ಲಿ ತಮ್ಮ ವಿಶೇಷ ಸಂಶೋಧನೆಗಳನ್ನು ನಡೆಸಿ ದೇಶದ ಗಮನ ಸೆಳೆದಿದ್ದವರು ಮಹಾನ್ ವಿಜ್ಞಾನಿ. ಇಂದು ಎರಡು ಹೊತ್ತಿನ ಊಟಕ್ಕಾಗಿ ರಸ್ತೆ ರಸ್ತೆ ಅಲೆಯುತ್ತಿದ್ದಾರೆ. ಕಂಡ ಕಂಡವರ ಮುಂದೆ ಕೈ ಚಾಚುತ್ತಿದ್ದಾರೆ..!
ಯೆಸ್.. ನಾರಾಯಣ್ ಸಿಂಗ್ ಎಂಬುವವರು ಬಿಹಾರದ ಐನ್ ಸ್ಟೀನ್ ಎಂದು ಪ್ರಸಿದ್ಧಿ ಪಡೆದ ಮಹಾನ್ ವಿಜ್ಞಾನಿಯಾಗಿದ್ದರು. ಅಮೆರಿಕದಲ್ಲಿ `ವರ್ತುಲ ಸಿದ್ಧಾಂತ’ದ ಬಗ್ಗೆ ವಿಶೇಷ ಸಂಶೋಧನೆ ನಡೆಸಿ ಆ ದೇಶದ ಗಮನ ಸೆಳೆದ ಮಹಾನ್ ವಿಜ್ಞಾನಿ ಇಂದು ಚಿಕಿತ್ಸೆ ಮತ್ತು ಊಟಕ್ಕಾಗಿ ಹುಚ್ಚನಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಅತ್ಯಂತ ಬಡ ಕುಟುಂಬ ಭೋಜ್ಪುರಿ ಜನಾಂಗದಲ್ಲಿ ಜನಿಸಿದ ನಾರಾಯಣ್ ಸಿಂಗ್ ಬಿಹಾರದ ಸೈನ್ಸ್ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಹೆಸರು ಗಳಿಸಿದ್ದರು. ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ 1965 ರಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿದ್ದ ಅವರು, ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಲ್ಲಿ ನಾಸಾ ಸಂಶೋಧಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಮೂರು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ ನಂತರ 1974ರಲ್ಲಿ ಭಾರತಕ್ಕೆ ಹಿಂದಿರುಗಿದ್ದರು.
ಭಾರತಕ್ಕೆ ವಾಪಸಾಗಿ 1972ರಿಂದ 1977ರವರೆಗೆ ಕಾನ್ಪುರ ಐಐಟಿಯಲ್ಲಿ ಪ್ರೋಪೆಸರ್ ಆಗಿಯೂ ಸೇವೆ ಸಲ್ಲಿಸಿದ್ದರು. ಆದರೆ ನಂತರ ಅವರು ಫ್ಲೇಗ್ ರೋಗಕ್ಕೆ ಒಳಗಾದಾಗ ಅವರನ್ನು ಮೆಚ್ಚುತ್ತಿದ್ದ ಹಾಗೂ ಜೊತೆಗೂಡಿ ಸಂಶೋಧನೆ ನಡೆಸುತ್ತಿದ್ದ ಜನರು ದೂರವಾದರು. ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಕೂಡಾ ಕಣ್ಣಿದ್ದೂ ಕುರುಡನಂತೆ ವರ್ತಿಸಿತು. ಅಲ್ಲದೇ ದೊಡ್ಡ ವಿಜ್ಞಾನಿಗೆ ಭಾರತದ ಯಾವುದೇ ಅಧಿಕಾರಿಯಾಗಲಿ, ಸಚಿವರಾಗಲಿ ಚಿಕಿತ್ಸೆಗೆ ಹಣ ನೀಡದೇ ಇರುವುದು ದುರಂತವೇ ಸರಿ. ಹೀಗಾಗಿ ನಾರಾಯಣ್ ಸಿಂಗ್ ಇಂದು ತುತ್ತು ಅನ್ನಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ.
ವಿದೇಶಗಳಲ್ಲಿ ವಿಜ್ಞಾನಿಗಳಿಗೆ ದೊಡ್ಡ ಮಟ್ಟದ ಗೌರವ ದೊರೆಯುತ್ತದೆ. ಆದರೆ ಭಾರತದಲ್ಲಿ ಅದಕ್ಕೆ ತದ್ವಿರುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ನಾರಾಯಣ ಸಿಂಗ್ ರವರೇ ಅದಕ್ಕೆ ಸ್ಪಷ್ಟ ಉದಾಹರಣೆ. ಇನ್ನಾದರೂ ನಮ್ಮ ಸರ್ಕಾರಗಳು ಭಾರತದ ಐನ್ ಸ್ಟೀನ್ ರತ್ತ ಗಮನ ಹರಿಸುತ್ತವೆಯೇನೋ ಕಾದು ನೋಡೋಣ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ನಾನು ಒಬ್ಬ ನಟನ ಅಭಿಮಾನಿ ಅಂತ ಹೇಳ್ಕೊಂಡು ಇನ್ನೊಬ್ಬ ನಟನ ಪೋಸ್ಟರ್ ಗೆ ಚಪ್ಪಲಿಯಲ್ಲಿ ಹೊಡೆಯೋದು ಯಾವ ಅಭಿಮಾನ..?

ಬೋರ್ ವೆಲ್ ನಲ್ಲಿ ನೀರಿನ ಬದಲು ಗ್ಯಾಸ್..! ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲ್ಲೂಕಿನ ಸೋರಂಗಾಂವಿ ಗ್ರಾಮದಲ್ಲೊಂದು ವಿಸ್ಮಯ..!

18 ವರ್ಷದಿಂದ ಒಂದೇ ಕಾಲಲ್ಲಿ ದುಡಿಯುತ್ತಿರುವ ರೈತ..! ಈತನ ಛಲದ ಮುಂದೆ ವಿಧಿಯೂ ಶರಣಾಗಿದೆ..!

50 ಕೋಟಿ ಬೆಲೆಬಾಳುವ ಕಂಪನಿ ಕಟ್ಟಿದ ಹುಟ್ಟು ಕುರುಡರಾದ ಶ್ರೀಕಾಂತ್…! ಇದು ಅಂಧನ ಯಶೋಗಾಥೆ..!

ರಷ್ಯಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಮೋದಿ..! #Video

ಮಾಸ್ಟರ್ ಪೀಸು… ಹಿಂಗೈತಿ ಬಾಸು..! – ಕಿರಿಕ್ ಕೀರ್ತಿ ..!

ಬರಲಿದೆ ವಾಟ್ಸ್ ಆ್ಯಪ್ ನಲ್ಲಿ ವೀಡಿಯೋ ಕಾಲಿಂಗ್..! ಅಚ್ಚರಿಗಳನ್ನು ಹೊತ್ತು ತರಲಿದೆ ಹೊಸ ಮಾದರಿ..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...