ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಪ್ರಮುಖರೆನಿಸುತ್ತಾರೆ.
ದ್ರಾವಿಡ್ ಅಂದು ಟೀಂ ಇಂಡಿಯಾ ಪರ ಆಡುತ್ತಾ ಆಪತ್ಭಾಂಧವರಾಗಿ ತಂಡ ಬೇಕೆಂದಿದ್ದನ್ನೆಲ್ಲಾ ಧಾರೆ ಎರೆದವರು. ಇದೀಗ ಯುವ ಕ್ರಿಕೆಟಿಗರಿಗೆ ಗುರುವಾಗಿ ಟೀಂ ಇಂಡಿಯಾದ ಭವಿಷ್ಯವನ್ನು ಬಲಪಡಿಸುತ್ತಿದ್ದಾರೆ.
ದ್ರಾವಿಡ್ ಗರಡಿಯಲ್ಲಿ ಪಳಗಿದ ಯುವ ಆಟಗಾರ ಹನುಮ ವಿಹಾರಿ ಈಗ ಟೀಂ ಇಂಡಿಯಾದ ಪರ ಆಡುತ್ತಿದ್ದಾರೆ. ಓವೆಲ್ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿರುವ ವಿಹಾರಿ 1ಸಿಕ್ಸರ್ 7 ಬೌಂಡರಿ ಮೂಲಕ 56 ರನ್ ಗಳಿಸಿ ಪಾದಾರ್ಪಣೆ ಪಂದ್ಯದಲ್ಲೇ ತನ್ನ ತಾಕತ್ತು ಸಾಬೀತುಪಡಿಸಿದ್ದಾರೆ.
ವಿಹಾರಿಯ ಈ ಯಶಸ್ವಿ ಪ್ರದರ್ಶನದ ಹಿಂದೆಯೂ ದ್ರಾವಿಡ್ ಇದ್ದಾರೆ. ಟೀಂ ಇಂಡಿಯಾಗೆ ಆಯ್ಕೆಯಾದ ವಿಹಾರಿ ದ್ರಾವಿಡ್ ಅವರಿಗೆ ಕರೆಮಾಡಿ ಮಾತಾಡಿದ್ದರು. ವಿಹಾರಿಯ ಬ್ಯಾಟಿಂಗ್ ತಂತ್ರಗಾರಿಕೆ ಮೆಚ್ಚಿರುವ ದ್ರಾವಿಡ್ ಮೈದಾನದಲ್ಲಿ ನಿನ್ನ ಆಟವನ್ನು ಆನಂದಿಸು ಎಂದು ಸಲಹೆ ನೀಡಿದ್ದರು. ಅದೇ ವಿಹಾರಿಗೆ ಶಕ್ತಿಯಾಯಿತು. ದ್ರಾವಿಡ್ ಅವರ ಗರಡಿಯಲ್ಲಿ ಭಾರತ ಎ ತಂಡದಲ್ಲಿ ಆಡಿರುವ ಅವಧಿ ಪ್ರಮುಖವಾದುದು ಎನ್ನುತ್ತಾರೆ ವಿಹಾರಿ.
"When it's coming from a legend, you know that you belong at this level."
A chat with Rahul Dravid helped Hanuma Vihari ease the nerves ahead of his maiden Test. #ENGvIND ⬇️https://t.co/DzraCsy9kt pic.twitter.com/RGJyDFcHcK
— ICC (@ICC) September 10, 2018