ಸೌರಾಷ್ಟ್ರ ವಿರುದ್ಧ 41ರನ್ ಗಳ ಜಯಗಳಿಸುವ ಮೂಲಕ ಕರ್ನಾಟಕ ಮೂರನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ 45.5 ಓವರ್ ಗಳಲ್ಲಿ 253ರನ್ ಗಳಿಗೆ ಆಲೌಟ್ ಆಯಿತು. 254ರನ್ ಗಳ ಗುರಿ ಬೆನ್ನತ್ತಿದ ಸೌರಾಷ್ಟ್ರ 46.3 ಓವರ್ ಗಳಲ್ಲಿ 212 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಮತ್ತೊಮ್ಮೆ ಮಿಂಚಿದ ಮಯಾಂಕ್ ಅಗರ್ವಾಲ್ 90 ರನ್ ಗಳ ಮಹತ್ವದ ಕೊಡುಗೆ ನೀಡಿದ್ರು. ಕರ್ನಾಟಕ 2013-14 ಹಾಗೂ 2015-16ರಲ್ಲಿ ಚಾಂಪಿಯನ್ ಆಗಿತ್ತು. ಇದೀಗ ಕರುಣ್ ನಾಯರ್ ನೇತೃತ್ವದಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಸಿಕ್ಕಿದೆ.