ಲಂಡನ್ : ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.
ಬ್ಯಾಂಕ್ ಗಳಿಗೆ 9 ಸಾವಿರ ಕೋಟಿರು ಹಣವನ್ನು ಮರುಪಾವತಿಸದೆ ತಲೆ ಮರೆಸಿಕೊಂಡಿದ್ದ ಮಲ್ಯ ಲಂಡನ್ ನಲ್ಲಿದ್ದರು.ಜಾರಿನಿರ್ದೇಶನಾಲಯ ಪ್ರಕರಣ ದಾಖಲಿಸಿ ಕೊಂಡಿತ್ತು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಪೊಲೀಸರು ಮಲ್ಯ ಅವರನ್ನು ಬಂಧಿಸಿದ್ದಾರೆ. ಕ್ರೌನ್ ಪ್ರಾಸಿಕ್ಯೂಷನ್ ಬಂಧನವನ್ನು ಖಚಿತಪಡಿಸಿದೆ, ಕಳೆದ ಬಾರಿ ಬಂಧನಕ್ಕೊಳಗಾಗಿದ್ದ ಮಲ್ಯ ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಿದ್ದರು. ತೆರಿಗೆ ವಂಚಿಸಿ ಬೇರೆ ಕಡೆಹಣ ಹೂಡಿಕೆ ಮಾಡಿರುವ ಆರೋಪ ಸಹ ಇವರ ಮೇಲಿದೆ.