ಲಂಡನ್ : ಮದ್ಯದ ದೊರೆ ವಿಜಯ್ ಮಲ್ಯ ಬಂಧನಕ್ಕೊಳಗಾಗಿ ಕೆಲವೇ ಕ್ಷಣಗಳಲ್ಲಿ ಬಿಡುಗಡೆ ಸಹ ಆಗಿದ್ದಾರೆ.
ಸಾಲಗಾರ ಮಲ್ಯ ಬಂಧನ ಆಟ ನಡೆದಿದ್ದು, ಇತ್ತ ಬಂಧನ ಸುದ್ದಿ ಕೇಳಿ ಬರುತ್ತಿದ್ದಂತೆ ಅತ್ತಿಂದ ಬಿಡುಗಡೆ ಸುದ್ದಿ ಬಂದಿದೆ.
ಬ್ಯಾಂಕ್ ಗಳಿಗೆ 9ಸಾವಿರ ಕೋಟಿ ರೂ ವಂಚಿಸಿರುವ ಆರೋಪ ಎದುರಿಸುತ್ತಿರುವ ಮಲ್ಯ 2016 ರ ಮಾರ್ಚ್ ನಲ್ಲಿ ಭಾರತದಿಂದ ಪರಾರಿಯಾಗಿದ್ದರು.
ಇದೇ ಏಪ್ರಿಲ್ ನಲ್ಲಿಯೂ ಬಂಧನವಾಗಿ ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಿದ್ದ ಮಲ್ಯ ಈ ಬಾರಿಯೂ ಕೆಲವೇ ಕ್ಷಣಗಳಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಕ್ಕೆ ಸಂಬಂಧಿಸಿದಂತೆ ಮಲ್ಯ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದರು.ಕ್ರೌನ್ ಪ್ರಾಸಿಕ್ಯೂಷನ್ ಖಚಿತ ಪಡಿಸಿತ್ತು. ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.
ಕಳೆದ ಏಪ್ರಿಲ್ 19ರಂದೂ ಕೂಡ ಹೀಗೆ ಬಂಧನಕ್ಕೆ ಒಳಗಾಗಿ ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಿದ್ದ ಮಲ್ಯ ಮತ್ತೆ ಬಂಧನ ಆಟದಲ್ಲಿ ಬಿಡುಗಡೆಯಾಗಿದ್ದಾರೆ.