ವೈದ್ಯರು ಜೀವ ಉಳಿಸೋ ದೇವರು. ಆದರೆ, ಕೆಲವೊಮ್ಮೆ ಇವರು ಮಾಡೋ ಯಡವಟ್ಟಿನಿಂದ ರೋಗಿಗಳು ಸಾಯಬೇಕಾಗುತ್ತೆ. ಕೆಲವೊಂದ್ಸಲ ಜೀವನ ಪರ್ಯಂತಾ ನರಕ ಅನುಭವಿಸಬೇಕಾಗುತ್ತೆ.
ವಿಜಯಪುರದಲ್ಲಿ ಆನಂದ ಕಣಬೂರ ಎಂಬ ವೈದ್ಯ ವೃದ್ಧರೊಬ್ಬರ ಕಣ್ಣು ತೆಗೆದಿದ್ದಾರೆ…! ವಜ್ರ ಹನುಮನ ಬಡಾವಣೆಯ ನಿವಾಸಿ ರಂಗಪ್ಪ ಅವರು ಕಣ್ಣು ಸ್ಪಷ್ಟವಾಗಿ ಕಾಣ್ತಿಲ್ಲ ಅಂತ ನೇತ್ರ ತಜ್ಞರಾದ ಡಾ ಆನಂದ ಕಣಬೂರ್ ಅವರ ಬಳಿ ಹೋಗಿದ್ದಾರೆ. ಕಣ್ಣಿಗೆ ಪೊರೆ ಬಂದಿದೆ , ಆಪರೇಷನ್ ಮಾಡ್ಬೇಕು ಎಂದು ಹೇಳಿ ಆಪರೇಷನ್ ಮಾಡಿದ ಆನಂದ್ ಸಂಪೂರ್ಣ ಕಣ್ಣು ಕಾಣದಂತೆ ಮಾಡಿದ್ದಾರೆ…!
ಈ ಬಗ್ಗೆ ಗಾಂಧಿಚೌಕ ಠಾಣೆ ಹಾಗೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ರಂಗಪ್ಪ ಅವರ ಕುಟುಂಬ ಮುಂದಾಗಿದೆ.
ಯಡವಟ್ಟು ಮಾಡಿರೋ ವೈದ್ಯ ದಯವಿಟ್ಟು ಮೀಡಿಯಾ ಮುಂದೆ ಹೋಗ್ಬೇಡಿ ಅಂತ ಕುಟುಂಬದವರನ್ನು ಬೇಡಿದ್ದಾನೆ. ಕುಟುಂಬದವ್ರು ಎಷ್ಟು ದುಡ್ಡು ಖರ್ಚಾದ್ರು ಪರವಾಗಿಲ್ಲ ಕಣ್ಣು ಕಾಣುವಂತೆ ಮಾಡಿ ಅಂತ ಕೇಳಿಕೊಳ್ಳುತ್ತಿದ್ದಾರೆ.