ವಿಜಯ ಕರ್ನಾಟಕಕ್ಕೆ ನಾಲ್ಕು ದತ್ತಿ ಪ್ರಶಸ್ತಿ

Date:

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತುಮಕೂರು ಜಿಲ್ಲಾ ಘಟಕದಿಂದ ನೀಡಲಾಗುವ ವಾರ್ಷಿಕ ದತ್ತಿ ಪ್ರಶಸ್ತಿಯು ವಿಜಯ ಕರ್ನಾಟಕ ಪತ್ರಿಕೆಯ ನಾಲ್ವರು ವರದಿಗಾರರಿಗೆ ಒಲಿದಿದೆ.


2016-17 ಮತ್ತು 2017-18ನೇ ಸಾಲಿಗೆ ಪರಿಸರ, ಅಭಿವೃದ್ಧಿ, ಮಾನವೀಯ, ಗಡಿನಾಡು ವಿಷಯಗಳ ಕುರಿತ ಲೇಖನಗಳಿಗೆ ಒಟ್ಟು 8 ಮಂದಿ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ಈ ಪೈಕಿ 2016-17ನೇ ಸಾಲಿನ ಶ್ರೇಯಸ್ ದತ್ತಿ ಪ್ರಶಸ್ತಿ (ಗಡಿನಾಡು ವರದಿ) ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ವರದಿಗಾರ ಕೆ.ಎ.ಸಿರಾಜ್ ಅಹಮದ್, 2017-18ನೇ ಸಾಲಿನ ದಿವಂಗತ ಎಚ್.ಆರ್. ಗುಂಡೂರಾಯರ ದತ್ತಿ ಪ್ರಶಸ್ತಿ(ಮಾನವೀಯ ವರದಿ)

ಸಿರಾ ತಾಲೂಕು ವರದಿಗಾರ ಎನ್.ದೇವರಾಜು, ವೈ.ಕೆ. ರಾಮಯ್ಯ ಗಂಗಾವಾಹಿನಿ ದತ್ತಿ ಪ್ರಶಸ್ತಿ(ಅಭಿವೃದ್ಧಿ)

ತುಮಕೂರು ಜಿಲ್ಲಾ ವರದಿಗಾರ ಆರ್.ಪಿ.ಅಶೋಕ್ ಹಾಗೂ ಶ್ರೇಯಸ್ ದತ್ತಿ ಪ್ರಶಸ್ತಿಯು(ಗಡಿನಾಡು)

ಪಾವಗಡ ವರದಿಗಾರ ಇಮ್ರಾನ್ ಉಲ್ಲಾ ಅವರಿಗೆ ಲಭಿಸಿದೆ.


ಜುಲೈ 1ರಂದು ವಿತರಣೆ: ತುಮಕೂರು ನಗರದ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ಜುಲೈ 1ರಂದು ಬೆಳಗ್ಗೆ 10.30ಕ್ಕೆ ಪತ್ರಿಕಾ ದಿನ ಆಚರಣೆಯಾಗಲಿದೆ. ಈ ಸಂದರ್ಭದಲ್ಲಿ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರು, ಪತ್ರಿಕಾ ವಿತರಕರು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.75 ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಡಿ. ಈರಣ್ಣ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...