ಅನುಭವಿ ಪತ್ರಕರ್ತ, ಅಂಕಣಕಾರ ವಿನಾಯಕ ಭಟ್ ಹೊಸದಿಂಗತ ದಿನಪತ್ರಿಕೆಯ ನೂತನ ಸಂಪಾದಕರಾಗಿ ಅಧಿಕಾರವಹಿಸಿಕೊಂಡಿದ್ದಾರೆ.
ವಿಶ್ವೇಶ್ವರ ಭಟ್ಟರ ಗರಡಿಯಲ್ಲಿ ಪಳಗಿದ ಅನುಭವ ವಿನಾಯಕ ಭಟ್ ಅವರದ್ದು. ಸುಮಾರು 15 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಇವರು, ‘ವಿಜಯ ಕರ್ನಾಟಕ’, ‘ಕನ್ನಡ ಪ್ರಭ’, ‘ಸುವರ್ಣ ನ್ಯೂಸ್’ ನಲ್ಲಿ ವಿಶ್ವೇಶ್ವರ ಭಟ್ಟರ ಮುಂದಾಳತ್ವದಲ್ಲಿ ಕೆಲಸ ಮಾಡಿದ್ದರು.
ವಿಶ್ವೇಶ್ವರ ಭಟ್ಟರು ‘ವಿಶ್ವವಾಣಿ’ ಪತ್ರಿಕೆಯನ್ನು ಸ್ಥಾಪಿಸಿದಾಗ ಅವರ ಜೊತೆಯಲ್ಲಿ ಹೊಸಪಯಣ ಆರಂಭಿಸಿದ್ದರು. ವೃತ್ತಿ ಜೀವನದ ಅನಿವಾರ್ಯ ಬದಲಾವಣೆ ಬಯಸಿ ಸೆಪ್ಟೆಂಬರ್ 30ರಂದು ವಿಶ್ವವಾಣಿಗೆ ರಾಜೀನಾಮೆ ನೀಡಿದ್ದರು. ಬಳಿಕ ಕೆಲವು ವೆಬ್ ಪೋರ್ಟಲ್ ಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಇದೀಗ ನಿನ್ನೆಯಿಂದ ಹೊಸದಿಗಂತದ ಚುಕ್ಕಾಣಿ ಹಿಡಿದ್ದಾರೆ.
ಹೊಸದಿಗಂತದ ಎಡಿಟರ್ ಆಗಿದ್ದ ಶಿವಸುಬ್ರಹ್ಮಣ್ಯ ಅವರು ಉದಯವಾಣಿ ಸಾರಥ್ಯವಹಿಸಿಕೊಂಡಿದ್ದಾರೆ. ಶಿವ ಸುಬ್ರಹ್ಮಣ್ಯ ಅವರ ರಾಜೀನಾಮೆಯಿಂದ ಹೊಸದಿಗಂತದಲ್ಲಿ ತೆರವಾಗಿದ್ದ ಮುಂದಾಳತ್ವದ ಜವಬ್ದಾರಿಯನ್ನು ವಿನಾಯಕ ಭಟ್ ಅವರು ಹೊತ್ತಿದ್ದಾರೆ. ಪತ್ರಿಕೆಗೆ ಹೊಸ ಆಯಾಮ ಕೊಡುವ, ಓದುಗ ದೊರೆಯನ್ನು ಸೆಳೆಯುವ ಗುರುತರ ಹೊಣೆ ವಿನಾಯಕ ಭಟ್ ಅವರದ್ದಾಗಿದೆ.