ದೊಡ್ಡ ದೊಡ್ಡ ನಗರಗಳಲ್ಲಿ ನೀವು ಯಾರ ಬಳಿ ತಪ್ಪಿಸಿಕೊಂಡರೂ, ಈ ಟ್ರಾಫಿಕ್ ಪೊಲೀಸಪ್ಪನತ್ರ ಮಾತ್ರ ಯಾವ್ದೇ ಕಾರಣಕ್ಕೂ ತಪ್ಪುಸ್ಕೋಳೋಕಾಗೊಲ್ಲ ಬಿಡಿ.. ಅವ್ರಂತಾ ಡೇಂಜರ್ ವ್ಯಕ್ತಿಗಳು ಈ ಸಮಾಜದಲ್ಲಿ ಯಾರೂ ಇಲ್ವೇನೋ ಅಂದ್ರೂ ತಪ್ಪಾಗೊಲ್ಲ..! ಯಾಕೆ ಹೀಗೆ ಹೇಳ್ತಾ ಇದೀವಿ ಅಂದ್ರೆ ಒಮ್ಮೆ ನೀವೇನಾದ್ರೂ ಟ್ರಾಫಿಕ್ ಪೊಲೀಸರ ಬಳಿ ಸಿಕ್ಕಿ ಹಾಕೊಂಡ್ರೆ ನಿಮ್ ಕಥೆ ಮುಗೀತು ಬಿಡಿ. ನಿಮ್ಮತ್ರ ಎಲ್ಲಾ ಡಾಕ್ಯುಮೆಂಟ್ಸ್ ಕರೆಕ್ಟಾಗಿದ್ರೂನ ಸಹ ನಿಮ್ಮ ಮೇಲೆ ಇಲ್ಲದ ಸಲ್ಲದ ಕಾರಣ ಹೇಳಿ ಮಾಮೂಲು ಕಿತ್ತು ಕೊಳ್ದೆ ಕಳ್ಸೋದೇ ಇಲ್ಲ… ಇಂದಿನ ನಾಗರಿಕ ಸಮಾಜ ಟ್ರಾಫಿಕ್ ನಿಯಮಗಳನ್ನು ಪಾಲಿಸೋದು ಕಡ್ಡಾಯ. ಅದನ್ನು ನಮ್ಮ ಸಮಾಜ ಅಚ್ಚುಕಟ್ಟಾಗಿ ಪಾಲುಸ್ತಾನೂ ಇದೆ. ಆದ್ರೆ ಯಾವುದೇ ಕಾರಣವಿಲ್ಲದೇ ಟ್ರಾಫಿಕ್ ಪೊಲೀಸರು ನಿಮ್ಮ ಮೇಲೆ ಅಪವಾದ ಹೊರಿಸಿ ನಿಮ್ಮ ಮೇಲೆ ಇಲ್ಲದ ದೂರುಗಳನ್ನು ದಾಖಲಿಸಿದರೆ ಹೇಗಿರುತ್ತೆ..? ಒಮ್ಮೆ ಕಲ್ಪಿಸಿಕೊಳ್ಳಿ..!
ಪ್ರಸ್ತುತದಲ್ಲಿ ವಾಹನ ಚಾಲಕರ ಬಳಿ ಎಲ್ಲಾ ದಾಖಲೆಗಳು ಸರಿಯಾಗಿ ಇರೋದ್ರಿಂದ ಯಾರೂ ಸಹ ಫೈನ್ ಕಟ್ಟೋಕೆ ಇಷ್ಟ ಪಡೊಲ್ಲ. ಆದರೆ ಇಡೀ ವ್ಯವಸ್ಥೆಯೇ ಬ್ರಷ್ಟಾಚಾರದಿಂದ ಕೂಡಿರುವಾಗ ಕೆಲವು ಪೊಲೀಸರು ನೀವೇನೇ ತಿಪ್ರು ಲಾಗ ಹಾಕುದ್ರು ಅವರ ಮಾಮೂಲನ್ನು ಪಡುಕೊಳ್ದೆ ಬಿಡೊಲ್ಲ. ಅದರಲ್ಲೂ ಅಮಾಯಕ ವ್ಯಕ್ತಿಗಳೇನಾದ್ರೂ ಸಿಕ್ಕುದ್ರೋ..? ಮುಗೀತು ಅವ್ರ ಕಥೆ.
ಯಾಕೆ ಈ ರೀತಿಯ ಚರ್ಚೆ ಮಾಡ್ತಾ ಇದೀರಾ ಅಂತಕೇಳ್ತಾ ಇದೀರ..? ತಾನ್ಯಾವ ತಪ್ಪೂ ಮಾಡ್ದೇ ಸುಖಾ ಸುಮ್ನೆ ಪಜೀತಿಗೆ ತಗಲಾಕೊಂಡ ಒಬ್ಬ ಹುಡುಗನ ಸ್ಟೋರಿ ಇದೆ ಮರಿಯದೇ ಓದಿ.. ಕೊಲ್ಕತ್ತಾ ಮೂಲದ ಶಭಿ ಉಲ್ ಹುಸೇನ್ ಎಂಬ ಯುವಕನಿಗೆ ಈಎಂ ಬೈಪಾಸ್ ಬಳಿ ಯಾವುದೇ ಕಾರಣವಿಲ್ಲದೇ ತಡೆದಿದ್ದಾರೆ. ಪೊಲೀಸಪ್ಪ ನೀನು ರೂಲ್ಸ್ ಬ್ರೇಕ್ ಮಾಡಿದ್ದೀಯ, ಸಿಗ್ನಲ್ ದಾಟಿ ಮುಂದೆ ಬಂದಿದೀಯ ಫೈನ್ ಕಟ್ಟು ಎಂದು ಹೇಳೀದ್ದಾರೆ. ಆದ್ರೆ ಆ ಯುವಕ ತಾನ್ಯಾವ ನಿಯಮ ಉಲ್ಲಂಘನೆ ಮಾಡಿಲ್ಲ ನಾನ್ಯಾಕೆ ಫೈನ್ ಕಟ್ಟಬೇಕು ಸಿಸಿ ಕ್ಯಾಮರಾದಲ್ಲಿ ಗೊತ್ತಾಗುತ್ತಲ್ಲವೇ ನಾನು ತಪ್ಪು ಮಾಡಿದ್ದೇನೋ ಅಥವಾ ಇಲ್ಲವೋ ಎಂಬುದು, ಬನ್ನಿ ತೋರಿಸಿ ಎಂದು ಪ್ರಶ್ನೆ ಮಾಡಿದ್ದಾನೆ ಶಭಿ. ಆದ್ರೆ ಪೊಲೀಸರು ಅವನ ಮಾತಿಗೆ ಯಾವುದೇ ಪ್ರತಿಕ್ರೀಯೆ ನೀಡಿಲ್ಲ.
ಕೂಡಲೇ ಆ ಯುವಕನ ಮೇಲೆ ಕೇಸ್ ರಿಜಿಸ್ಟ್ರಾರ್ ಮಾಡಿಕೊಂಡೊದ್ದಾರೆ ನೋಡಿ ಅದೂ ಕೂಡ ತಾನು ಮಾಡದ ತಪ್ಪನ್ನು ಪ್ರಶ್ನಿಸಿದ್ದಕ್ಕೆ..? ಆ ಯುವಕನ ವಿರುದ್ದ ಬರೋಬ್ಬರಿ ನಾಲ್ಕು ಕೇಸ್ ದಾಖಲು ಮಾಡಿದ್ದಾರೆ ನೋಡಿ..! ಒಬ್ಬ ಪಬ್ಲಿಕ್ ಸರ್ವೆಂಟ್ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿಲ್ಲವೆಂದು ಸೆಕ್ಷನ್ 179, ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸೆಕ್ಷನ್ 177, ಪಬ್ಲಿಕ್ ಪ್ಲೇಸ್‍ನಲ್ಲಿ ಲೈಸೆನ್ಸ್ ತೋರಿಸಲು ವಿಫಲನಾಗಿದ್ದಾನೆಂದು ಸೆಕ್ಷನ್ 130, ಹಾಗೂ ಅತೀ ವೇಗವಾಗಿ ಗಾಡಿ ಚಲಾಯಿದ್ದಾನೆಂದು ಸೆಕ್ಷನ್ 184 ಕಾಲಂ ಅಡಿ ಕೇಸು ದಾಖಲಿಸಿದ್ದಾರೆ ನೋಡಿ..!
ಇದರ ವಿರುದ್ದ ಧನಿ ಎತ್ತಿದ್ದ ಶಭಿ ಇದು ಅನ್ಯಾಯ ನನ್ನ ಮೇಲೆ ಸುಳ್ಳು ಆರೋಪ ಹೊರೆಸುತ್ತಿದ್ದೀರ ಎಂದಿದ್ದಕ್ಕೆ ಆತನನ್ನು ಸಾರ್ವಜನಿಕರೆದುರೆ ಥಳಿಸಿದ್ದಾರೆ. ಇದೀಗ ಶಭಿ ತನಗಾದ ಅನ್ಯಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾನೆ ಅಷ್ಟೇ ಅಲ್ಲದೇ ಅದನ್ನು ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗಲ್ಲದೇ ಪ್ರಖ್ಯಾತ ಮಾಧ್ಯಮಗಳಾದ ಝೀ ನ್ಯೂಸ್ ಹಾಗೂ ಎನ್‍ಡಿಟಿವಿಗಳಿಗೆ ಪೋಸ್ಟ್ ಮಾಡಿದ್ದಾನೆ. ಇಂಟರ್‍ನೆಟ್‍ನಲ್ಲಿ ವೈರಲ್ ಆಗಿರುವ ಆ ವಿಡಿಯೋ ಇಲ್ಲಿದೆ ನೋಡಿ ಆ ಪೊಲೀಸಪ್ಪನ ದೌರ್ಜನ್ಯವನ್ನು ನೀವೂ ಸ್ವಲ್ಪ ನೋಡಿ..
POPULAR STORIES :
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..
ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!
ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???
ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ…!
ನಮ್ಮ ದೇಶದ ಗಾಡಿಗಳ ನಂಬರ್ ಪ್ಲೇಟ್ ಗಳ ಕಲರ್ ಗಳು ಬೇರೆ ಬೇರೆ ಯಾಕಿವೆ? ನಿಮಗಿದು ಗೊತ್ತೆ??
ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!