ಐಪಿಎಲ್ ಹಬ್ಬ ಜೋರಾಗಿದೆ. ಅಷ್ಟೂ ಎಂಟೂ ತಂಡಗಳು ಸಮಬಲದ ಹೋರಾಟ ನಡೆಸುತ್ತಿವೆ. ಸೋತರೂ ಅದು ಹೋರಾಟದ ಸೋಲಾಗಿದೆ. ಗೆಲುವು ಸಹ ಅಷ್ಟೇ ಕಠಿಣವಾಗಿ ಪಡೆದ್ದುದ್ದಾಗಿದೆ.
ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ. ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಪಡೆ ಸೋತರೂ ವಿರಾಟ್ ದಾಖಲೆ ಬರೆದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಪೇರಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ 92 ರನ್ ಗಳಿಸಿದ ಕೊಹ್ಲಿ ಸುರೇಶ್ ರೈನಾ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದರು. ಕೊಹ್ಲಿ 153 ಪಂದ್ಯಗಳಲ್ಲಿ 4619 ರನ್ ದಾಖಲಿಸಿದ್ದಾರೆ. ರೈನಾ 163 ಪಂದ್ಯಗಳಲ್ಲಿ 4558 ರನ್ ಪೇರಿಸಿದ್ದಾರೆ