ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿದ್ದಾರೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ದ್ವಿಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆಹಾಕಿದೆ. ನಿನ್ನೆ ಕೇವಲ 2 ವಿಕೆಟ್ ನಷ್ಟಕ್ಕೆ 312 ರನ್‍ಗಳಿಗೆ ಸುಭದ್ರ ಸ್ಥಿತಿಯಲ್ಲಿದ್ದ ಭಾರತ ಮೂರನೇ ದಿನವಾದ ಇಂದು ಕೂಡ ಶ್ರೀಲಂಕಾ ಬೌಲರ್‍ಗಳನ್ನು ಕಾಡಿತು.
ನಿನ್ನೆ ಮುರುಳಿ ವಿಜಯ್ 128ರನ್ ಕೊಡುಗೆ ನೀಡಿ ಫೆವಿಲಿಯನ್ ಸೇರಿದ್ದರು. ಕನ್ನಡಿಗ ರಾಹುಲ್ (7) ವಿಫಲವಾಗಿದ್ದರು. 121 ರನ್‍ಗಳಿಸಿದ್ದ ಚೇತೇಶ್ವರ ಪೂಜಾರಾ ಮತ್ತು ಕೊಹ್ಲಿ 54ರನ್ ಗಳಿಸಿ ಈ ದಿನಕ್ಕೆ ಆಟ ಕಾಯ್ದಿರಿಸಿದ್ದರು. ಪೂಜಾರ 143 ರನ್‍ಗಳಿಸಿ ವಿಕೆಟ್ ಒಪ್ಪಿಸಿದ್ರು. ನಾಯಕ ಕೊಹ್ಲಿ 5ನೇ ಅಂತರಾಷ್ಟ್ರೀಯ ಟೆಸ್ಟ್ ದ್ವಿಶತಕ (213)ಗಳಿಸಿದ್ರು. ಭಾರತ 5 ವಿಕೆಟ್‍ಗೆ 593 ರನ್‍ಗಳಿಸಿದ್ದು, 388 ರನ್‍ಗಳ ಮುನ್ನಡೆಪಡೆದಿದೆ. ರೋಹಿತ್ ಶರ್ಮಾ (೮೭), ಅಶ್ವಿನ್ (೪) ಬ್ಯಾಟಿಂಗ್ ನಡೆಸ್ತಿದ್ದಾರೆ.
ಭಾರತದ ಪರ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೇಹ್ವಾಗ್ ತಲಾ 6 ದ್ವಿಶತಕಗಳನ್ನುಗಳಿಸಿದ್ದಾರೆ. ರಾಹುಲ್ ದ್ರಾವಿಡ್ 5 ದ್ವಿಶತಕಗಳಿಸಿದ್ದಾರೆ. ಕೊಹ್ಲಿ ಈಗ 5 ದ್ವಿಶತಕಗಳಿಸಿದ್ದು, ಸಚಿನ್ ಹಾಗೂ ವೀರೂ ದಾಖಲೆಯನ್ನು ಅಳಿಸಲು ಹತ್ತಿರದಲ್ಲಿದ್ದಾರೆ.