ಟೀಂ ಇಂಡಿಯಾದ ಕ್ಯಾಪ್ಟನ್ ರನ್ ಮಶಿನ್ ವಿರಾಟ್ ಕೊಹ್ಲಿಯನ್ನು ತಡೆಯುವುದು ಅಷ್ಟು ಸುಲಭವಲ್ಲ. ವಿರಾಟ್ ಇದ್ದಾರೆ ಎಂದರೆ ಎದುರಾಳಿ ತಂಡ ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ಇರುತ್ತೆ. ವಿರಾಟ್ ಎಂಥಾ ಪರಿಸ್ಥಿತಿಯಲ್ಲೂ ತಂಡವನ್ನು ಮೇಲೆತ್ತ ಬಲ್ಲ ಬ್ಯಾಟ್ಸ್ ಮನ್.
ಇದೇ ವಿರಾಟ್ ಇಂಗ್ಲೆಂಡ್ ವಿರುದ್ಧ ಮುಕ್ತಾಯವಾದ ಮೊದಲ ಟೆಸ್ಟ್ ನಲ್ಲಿ ಭಾರತದ ಪರ ಏಕಾಂಗಿ ಹೋರಾಟ ನಡೆಸಿದರು. ಇವರ ವಿಕೆಟ್ ಪಡೆಯದೇ ಇದ್ದರೆ ಗೆಲುವು ಕೈ ತಪ್ಪುತ್ತದೆ ಎಂಬುದು ಇಂಗ್ಲೆಂಡ್ ಗೆ ಗೊತ್ತಿತ್ತು. ಅಷ್ಟೇ ಅಲ್ಲ ವಿರಾಟ್ ಗೆ ಹೆದರಿ ರಾತ್ರಿ ಇಡೀ ನಿದ್ದೆ ಬಿಟ್ಟಿದ್ದರು.
ಇಂಗ್ಲೆಂಡ್ ಆಡಿದ 1000ನೇ ಟೆಸ್ಟ್ ಪಂದ್ಯವಿದು. ಈ ಐತಿಹಾಸಿಕ ಪಂದ್ಯದಲ್ಲಿ ಎರಡೂ ತಂಡಗಳಿಗೂ ಗೆಲುವು ಬೇಕೇ ಬೇಕಿತ್ತು. ಇದು ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು.
ಭಾರತ ಸ್ಟಾರ್ ಬ್ಯಾಟ್ಸ್ ಮನ್ ಗಳ ವೈಪಲ್ಯದಿಂದ ಗೆಲ್ಲ ಬಹುದಾಗಿದ್ದ ಪಂದ್ಯವನ್ನು 31 ರನ್ ಗಳ ಅಂತರದಲ್ಲಿ ಸೋತಿತು. ನಾಯಕ ವಿರಾಟ್ ಕೊಹ್ಲಿ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.
ಕೊಹ್ಲಿ ವಿಕೆಟ್ ಪಡೆಯದೆ ಇದ್ದರೆ ನಾವು ಪಂದ್ಯವನ್ನು ಕೈಚೆಲ್ಲಬೇಕು ಎಂದು ಅರಿತ ಇಂಗ್ಲೆಂಡ್ ಕ್ರಿಕೆಟಿಗರು ರಾತ್ರಿಯೆಲ್ಲಾ ಕುಳಿತು ದೊಡ್ಡ ರಣತಂತ್ರವನ್ನೇ ಹಣೆದಿದ್ದರು. ಅದರಂತೆ ಸ್ಟೋಕ್ಸ್ ಗೆ ಬೌಲಿಂಗ್ ಮಾಡಲು ಬಿಟ್ಟು ಕೊಹ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ನಾವೆಲ್ಲ ರಾತ್ರಿಯೆಲ್ಲಾ ವಿರಾಟ್ ಕೊಹ್ಲಿ ವಿಕೆಟ್ ಹೇಗೆ ತೆಗೆಯಬೇಕು ಎಂದು ಆಲೋಚನೆ ಮಾಡಿದ್ದೇವು. ಅಲ್ಲದೆ ಆ ದಿನ ರಾತ್ರಿ ನಾವೆಲ್ಲಾ ನಿದ್ದೆ ಮಾಡದೆ ಕಂಗಾಲಾಗಿದ್ದೇವು ಎಂದು ಸ್ವತಃ ಇಂಗ್ಲೆಂಡ್ ತಂಡ ವೇಗಿ ಜೇಮ್ಸ್ ಆ್ಯಂಡ್ರೂಸನ್ ಹೇಳಿಕೊಂಡಿದ್ದಾರೆ.