ವಿಮಾನ ನಿಲ್ದಾಣದಲ್ಲಿ ಪತಿ ವಿರಾಟ್ ಕೊಹ್ಲಿ ಮೇಲೆ ಅನುಷ್ಕಾ ಶರ್ಮಾ ಗರಂ ಆಗಿದ್ದಾರೆ.
ಟೀಮ್ ಇಂಡಿಯಾ ಕ್ಯಾಪ್ಟನ್ ಕಾಲ ಕೊಹ್ಲಿ ಕ್ರಿಕೆಟ್ ಅಂಗಳದಲ್ಲಿ ಎಷ್ಟು ಆಕ್ರಮಣಕಾರಿ ಆಗಿರುತ್ತಾರೋ ಅದರಿಂಚಾಗೆ, ಅದ್ರಲ್ಲೂ ಪ್ರೀತಿಸಿ ಮದ್ವೆ ಆದ ನಟಿ ಅನುಷ್ಕಾ ವಿಷ್ಯದಲ್ಲಿ ಶಾಂತರಾಗಿರ್ತಾರೆ.
ಉತ್ತರಾಖಂಡದ ಹರಿದ್ವಾರದಲ್ಲಿ ನವೆಂಬರ್ 5ರಂದು ಹುಟ್ಟುಹಬ್ಬ ಆಚರಿಸಿಕೊಂಡ ವಿರಾಟ್ ಕೊಹ್ಲಿ ತಡರಾತ್ರಿ ಮುಂಬೈಗೆ ಬಂದಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಮೊಬೈಲಿನಲ್ಲಿ ವಿರಾಟ್-ಅನುಷ್ಕಾ ಆಗಮಿಸುವ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಅನುಷ್ಕಾ ಯಾವುದೇ ವಿಚಾರದಲ್ಲಿ ಪತಿಯ ಮೇಲೆ ಯಾವುದೋ ಕಾರಣಕ್ಕೆ ಮುನಿಸಿಕೊಂಡಂತೆ ಕಾಣುತ್ತಿತ್ತು.
ವಿರಾಟ್ ಮುನಿಸಿಕೊಂಡ ಪತ್ನಿಯನ್ನು ಸಮಾಧಾನ ಪಡಿಸುತ್ತಿದ್ದರು. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.