ಟೀಂ ಇಂಡಿಯಾದ ನಾಯಕ, ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ನವಜೀವನಕ್ಕೆ ಕಾಲಿಟ್ಟ ತಾರಾ ಜೋಡಿ ಸಂಭ್ರಮದ ಕ್ಷಣವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇಂದಿನಿಂದ ನಾವು ಜೀವನವಿಡೀ ಪ್ರೀತಿಯಿಂದ ಬಾಳ್ತೀವಿ. ಈ ಸಂತೋಷದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ತಿದ್ದೀವಿ. ಇದು ನಮ್ ಪಾಲಿಗೆ ವಿಶೇಷ ದಿನವಾಗಿದೆ. ನಮಗೆ ಹಾರೈಸಿದ ನಿಮಗೆಲ್ಲಾ ಧನ್ಯವಾದಗಳು ಎಂದು ನವಜೋಡಿಗಳು ಟ್ವೀಟ್ ಮಾಡಿದ್ದಾರೆ. ಡಿಸೆಂಬರ್ 21ಕ್ಕೆ ದೆಹಲಿಯಲ್ಲಿ ಸಂಬಂಧಿಕರಿಗೆ ಹಾಗೂ ಡಿಸೆಂಬರ್ 26ರಂದು ಮುಂಬೈಯಲ್ಲಿ ಉದ್ಯಮಿಗಳು, ಸೆಲಬ್ರಿಟಿಗಳಿಗೆ ಔತಣಕೂಟ ಏರ್ಪಡಿಸಿದ್ದಾರಂತೆ.