ಟೀಂ ಇಂಡಿಯಾದ ನಾಯಕ, ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯಕ್ಕೆ ಕಾಲಿಟ್ಟಿರೋದು ನಿಮಗೆ ಗೊತ್ತೇ ಇದೆ. ರೋಮ್ ನಲ್ಲಿ ರೊಮ್ಯಾನ್ಸ್ ಮೂಡನಲ್ಲಿ ಈ ಜೋಡಿ ಕಾಲಕಳೀತಿದೆ.
ಹನಿಮೂನ್ ಮೂಡಲ್ಲಿ ವಿರಾಟ್ ಅನುಷ್ಕಾ ಮಂಜಿನಿಂದ ಆವೃತ್ತವಾಗಿರೋ ಸ್ಥಳದಲ್ಲಿ ಸುತ್ತುತ್ತಿದ್ದಾರೆ. ಒಂದು ವಾರಗಳ ಕಾಲ ರೋಮ್ ನಲ್ಲಿ ಸುತ್ತಾಡಿ ಭಾರತಕ್ಕೆ ಈ ತಾರಾ ಜೋಡಿ ಮರಳಲಿದೆ. ಡಿಸೆಂಬರ್ 21ರಂದು ಮುಂಬೈನಲ್ಲಿ. ಡಿಸೆಂಬರ್ 26ರಂದು ಹೊಸದಿಲ್ಲಿಯಲ್ಲಿ ಆರತಕ್ಷತೆ ನಡೆಯಲಿದ್ದು ಸಿನಿಮಾ ಕಲಾವಿದರು, ಕ್ರಿಕೆಟಿಗರು, ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿರಾಟ್ ಜೊತೆಗಿನ ಫೋಟೋವನ್ನು ಅನುಷ್ಕಾ ತಮ್ಮ ಇನ್ಸ್ಟ್ರಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು ಈಗಾಗಲೇ ಲಕ್ಷಗಟ್ಟಲೆ ಲೈಕ್ಸ್ ಬಂದಿದೆ.