ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

Date:

ಟೀಮ್ ಇಂಡಿಯಾದ ಬ್ಯಾಟಿಂಗ್ ಸೆನ್ಸೇಷನ್ ವಿರಾಟ್ ಕೊಹ್ಲಿ ಮೂಲತಃ ದೆಹಲಿಯವನಲ್ಲ,ಇವನು ಮೂಲತಃ ಮಧ್ಯ ಪ್ರದೇಶದ ಕಟ್ನಿ ನಗರವಾಸಿ.
ಅವನ ಸಂಬಂಧಿಗಳು ಇನ್ನೂ ಅಲ್ಲಿಯೇ ವಾಸವಾಗಿದ್ದಾರೆ.ಅವರುಗಳು ವಿರಾಟ್ ಜೊತೆ ಕೆಲವು ವರುಷಗಳಿಂದೀಚೆಗೆ ಮಾತಾಡಲೇ ಇಲ್ಲವಂತೆ.ವಿರಾಟ್ 2005 ರಲ್ಲಿ ಆತನ ಸಹೋದರನ ಸಾವಿನ ಸಮಯದಲ್ಲಿ ಕಟ್ನಿಗೆ ಹೋಗಿದ್ದನಂತೆ ಅನ್ನಲಾಗುತ್ತಿದೆ.
ವಿರಾಟ್ ಅತ್ತೆಯಾಗಿರೋ ಆಶಾ ಕೊಹ್ಲಿ ಕಟ್ನಿ ನಗರದ ಮೇಯರ್ ಆಗಿ ಕೆಲಸ ಮಾಡುತ್ತಿದ್ದರು.ಅವರು ನೀಡಿರೋ ಮಾಹಿತಿಯಂತೆ ವಿಭಜನೆಯಾಗೋ ಸಂದರ್ಭದಲ್ಲಿ ಕೊಹ್ಲಿಯವರ ತಾತ ಕಟ್ನಿ ನಗರದಲ್ಲಿ ಬಂದು ನೆಲೆಸಿದರಂತೆ.ವಿರಾಟ್ ತಂದೆ ಪ್ರೇಮ್ ಚಂದ್ ಕಟ್ನಿಯ ಗುಲಾಬ್ ಚಂದ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದು,ಆಮೇಲೆ ಅವರು ಸಾರಂಗ್ ಪುರ್ ಗೆ ತೆರಳಿ ಅಲ್ಲಿಂದ ಅವರು ದೆಹಲಿಯತ್ತ ತನ್ನ ವಾಸ್ತವ್ಯವನ್ನು ಹೂಡಿದರಂತೆ.

2-4

old house
ಕೊನೇಯ ಬಾರಿ ವಿರಾಟ್ ಜೊತೆ ಯಾವಾಗ ಮಾತಾಡಿರುವುದೆಂದು ಅವರ ಮಾವನವರಿಗೆ ನೆನಪಿಲ್ಲವಂತೆ ಆದರೆ ತುಂಬಾ ಸಮಯದ ಹಿಂದೆನೇ ಮಾತಾಡಿರಬಹುದು ಅನ್ನುತ್ತಾರೆ.ವಿರಾಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡಲಾರಂಭಿಸಿದ ಸಮಯದಲ್ಲಿ ಹಲವಾರು ಬಾರಿ ಆತ ತನ್ನ ಅತ್ತೆ ಮಾವನವರ ಜೊತೆ ಮಾತಾಡುತ್ತಿದ್ದನಂತೆ.
ವಿರಾಟ್ ಈಗ ಸೆಲೆಬ್ರಿಟಿ,ಅವನ ಜೊತೆ ಮಾತಾಡುವುದು ಅಷ್ಟು ಸುಲಭವಲ್ಲ,ನಾವೂ ಅವನಿಗೆ ತೊಂದರೆ ಕೊಡಲಿಛ್ಛಿಸುವುದಿಲ್ಲ,ಬದಲಾಗಿ ಅವರ ಅಮ್ಮ ಹಾಗೂ ಹಿರಿಯ ಸಹೋದರ ವಿಕಾಸ್ ಜೊತೆ ಪದೇ ಪದೇ ಮಾತಾಡುತ್ತಿರುತ್ತೇವೆ ಅನ್ನುತ್ತಾರೆ.
ವಿರಾಟ್ ಮಾವನಾದ ಗಿರೀಶ್ ಕೊಹ್ಲಿಯು ವಿರಾಟ್ ಬಗ್ಗೆ ಹೇಳೋ ಪ್ರಕಾರ ಆತ 2005 ರಲ್ಲಿ ಗಿರೀಶ್ ಪುತ್ರ ಸಾವನ್ನಪ್ಪಿದಾಗ ಬಂದಿದ್ದನಂತೆ.ವಿರಾಟ್ ಪೂರ್ವಜರ ಮನೆಯು ಕಟ್ನಿಯಲ್ಲಿದ್ದು,ವಿರಾಟ್ ತಂದೆಯವರು ಅದರಲ್ಲಿ ವಾಸ ಮಾಡುತ್ತಿದ್ದು,ಅದನ್ನು ಈಗ ಮಾರಲಾಗಿದೆಯಂತೆ ಎಂದೂ ತಿಳಿಸಿದರು.
ವಿರಾಟ್ ತಂದೆಯವರು ನೈರೋಬಿಯಲ್ಲಿ 15 ವರುಷವಿದ್ದು,ಅಲ್ಲಿಂದ ಹಿಂತಿರುಗಿದ ಮೇಲೆ ಅವರು ದೆಹಲಿಯಲ್ಲಿ ಸ್ವಂತ ವ್ಯಾಪಾರವನ್ನು ಆರಂಭಿಸಿದರಂತೆ ಇದನ್ನು ಈಗ ವಿಕಾಸ್ ನೋಡಿಕೊಳ್ಳುತ್ತಿದ್ದಾನೆ, ವಿರಾಟ್ ವೆಸ್ಟ್ ಇಂಡೀಸ್ ಟೂರ್ ನಲ್ಲಿದ್ದ ಕಾರಣದಿಂದ ಅವನ ಸಹೋದರಿಯ ವಿವಾಹ ಸಂಭ್ರಮದಲ್ಲಿ ಅವನಿಗೆ ಭಾಗವಹಿಸಲಾಗಲಿಲ್ಲ.

4-4

Virat with his father
ವಿರಾಟ್ ಕಸಿನ್ ಆಗಿರೋ ರೂಪಕ್ ಕೊಹ್ಲಿ ಯವರು ಮಲ್ಟಿನ್ಯಾಷನಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು,ವಿರಾಟ್ ಶೈಲಿಯ ಹೇರ್ ಸ್ಟೈಲ್ನ ಅವರು ಫಾಲೋ ಮಾಡುತ್ತಿದ್ದಾರೆ.
ಟಿ-20 ಯ ವಿಶ್ವಕಪ್ ಸಂದರ್ಭದಲ್ಲಿ ವಿರಾಟ್ ಗೆ ರೂಪಕ್ ಅವರು ಅಭಿನಂದನೆ ಸಲ್ಲಿಸಿದ್ದು, ಅವರು ತುಂಬಾ ಬ್ಯುಸಿಯಾಗಿರೋ ಕಾರಣದಿಂದ ಅವರ ಮನೆಯವರು ಅವರನ್ನು ಮುಕ್ತವಾಗಿರಲು ಬಿಟ್ಟಿದ್ದಾರಂತೆ,ಇದರಿಂದಾಗಿ ವಿರಾಟ್ ತನ್ನ ಸಂಪೂರ್ಣ ಸಮಯವನ್ನು ಕ್ರಿಕೆಟ್ ಸಾಧನೆಯಲ್ಲಿ ಮೀಸಲಿಡಲು ಸಾಧ್ಯವಾಗಬಹುದು ಎನ್ನುತ್ತಾರೆ.
ಕೆಲವೊಂದು ಕಾರಣಾಂತರಗಳಿಂದ ಹಾಗೂ ಏರ್ ಪೋರ್ಟ್ ಕಡೆಗಿನ ಪ್ರಯಾಣದಲ್ಲಿನ ತೊಂದರೆಯನ್ನು ತಪ್ಪಿಸಲು ಕಳೆದ 5 ತಿಂಗಳಿಂದೀಚೆಗೆ ವಿರಾಟ್ ತನ್ನ ವಾಸ್ತವ್ಯವನ್ನು ದೆಹಲಿಯಿಂದ ಗುರುಗ್ರಾಂ ಗೆ ಬದಲಾಯಿಸಿದ್ದಾರೆ ಎಂದು ವಿರಾಟ್ ಅತ್ತೆ ಆಶಾ ಕೊಹ್ಲಿ ಹೇಳುತ್ತಾರೆ.
ಯಾವ ವ್ಯಕ್ತಿಯೂ ತನ್ನ ಬುದ್ದಿವಂತಿಕೆ,ಆತ್ಮ ವಿಶ್ವಾಸ ಹಾಗೂ ಧ್ಯೇಯ ಒಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ವಿರಾಟ್ ಕೊಹ್ಲಿ ಸಾಬೀತು ಮಾಡಿ ತೋರಿಸಿದ್ದಾರೆ.ನೀವೇನಂತೀರಾ?
ವಿರಾಟ್ ರ 34 ಕೋಟಿ ಬೆಲೆಬಾಳುವ ಅವರ ಹೊಸ ಮನೆಯ ಫೋಟೋಗಳನ್ನು ವೀಕ್ಷಿಸಿ.

Master Bedroom

master_bed-700x319-600x273

Pool Deck

pool-700x323-600x277

Master Bath & Wardrobe

master_bath_and_wardobe-700x319-600x273

Living Space

dingn-700x313-600x268

3-3

virat kohli childhood photo

 

  • ಸ್ವರ್ಣಲತ ಭಟ್

POPULAR  STORIES :

ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?

ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video

ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!

ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು

ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!

ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!

ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?

ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!

ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...