ಕ್ರಿಕೆಟ್ ಕಾಶಿಯಲ್ಲಿ ದ್ವಿತೀಯ ಟೆಸ್ಟ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಲಂಡನ್ ನ ಲಾರ್ಡ್ಸ್ ಅಂಗಳದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.
ಈ ನಡುವೆ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪರ ಪಾದಾರ್ಪಣೆ ಮಾಡಲಿರುವ ಯುವ ಆಟಗಾರರೊಬ್ಬರಿಗೆ ರನ್ ಬಾರಿಸಬೇಡ ಎಂದಿದ್ದಾರೆ…!
ಇಂಗ್ಲೆಂಡ್ ಯುವ ಆಟಗಾರರಿಗೆ ಮಣೆ ಹಾಕುತ್ತಿದೆ. ಮೊದಲ ಟೆಸ್ಟ್ ನಲ್ಲಿ 20ರ ಹರೆಯದ ಆಲ್ ರೌಂಡರ್ ಸ್ಯಾಮ್ ಕರನ್ ಅವರನ್ನು ಕಣಕ್ಕಿಸಿದ್ದ ಇಂಗ್ಲೆಂಡ್ ಯಶಸ್ವಿಯಾಗಿತ್ತು.
ಎರಡನೇ ಪಂದ್ಯದಲ್ಲಿ ಡೆವಿಡ್ ಮಲನ್ ಬದಲಿಗೆ 20ರ ಹರೆಯದ ಒಲ್ಲಿ ಪೋಪ್ ಅವರನ್ನು ಇಂಗ್ಲೆಂಡ್ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಕೌಂಟಿ ಕ್ರಿಕೆಟ್ ನಲ್ಲಿ ರನ್ ಮಳೆ ಸುರಿಸಿರುವ ಪೋಪ್ ಇಂದು ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದಾರೆ.
ಪಂದ್ಯಕ್ಕೂ ಮುನ್ನ ನಡೆದಿರುವ ಪ್ರೆಸ್ ಕಾನ್ಫರೆನ್ಸ್ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ನಗ್ತಾ ನಗ್ತಾನೇ, ಪೋಪ್ ಅವರಿಗೆ ವಾರ್ನಿಂಗ್ ನೀಡಿದ್ದಾರೆ. ಚೊಚ್ಚಲ ಟೆಸ್ಟ್ ಆಡಲಿರೋ ಈ ಪ್ಲೇಯರ್ಗೆ ಭಾರತದ ವಿರುದ್ಧ ರನ್ ಗಳಿಸಬೇಡ ಅಂತ ಹೇಳಿದ್ದಾರೆ.
‘ಒಲ್ಲಿ ಪೋಪ್ ಬ್ಯಾಟ್ ಮಾಡೋದನ್ನ ನಾನು ನೋಡಿಲ್ಲ. ಆದ್ರೆ, ಇಂಗ್ಲೆಂಡ್ ಅವರನ್ನ ಸೆಲೆಕ್ಟ್ ಮಾಡಿದೆ ಅಂದ್ರೆ, ಆತ ಖಂಡಿತವಾಗಿಯೂ ಒಬ್ಬ ಒಳ್ಳೆ ಆಟಗಾರನಾಗಿರ್ತಾನೆ. ಪೋಪ್ ಈ ಪಂದ್ಯವನ್ನ ಎಂಜಾಯ್ ಮಾಡಲಿ, ಆದ್ರೆ ಹೆಚ್ಚು ರನ್ ಗಳಿಸೋದು ಬೇಡ’ ಅಂತ 20 ವರ್ಷದ ಕ್ರಿಕೆಟರ್ಗೆ ಕೊಹ್ಲಿ ಹೇಳಿದ್ದಾರೆ.