ಐರ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳಿಗೆ ಟೀ ಇಂಡಿಯಾ ಸರ್ಪ್ರೈಸ್ ನೀಡಲಿದೆ ಎಂದು ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತದ ಬ್ಯಾಟಿಂಗ್ ಆರ್ಡರ್ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಮಾಡಲು ಉತ್ತಮವಾಗಿದೆ. ಇದರಿಂದ ಎದುರಾಳಿಗಳಿಗೆ ಸರ್ಪ್ರೈಸ್ ನೀಡಲು ಸಾಧ್ಯವಾಗುತ್ತದೆ. ಕೆ.ಎಲ್ ರಾಹುಲ್ ಮತ್ತು ದಿನೇಶ್ ಕಾರ್ತಿಕ್ ತಂಡದ ಸರ್ಪ್ರೈಸ್ ಆಟಗಾರರು ಎಂದು ಕೊಹ್ಲಿ ಹೇಳಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಆಡುವ 11 ಬಳಗದಲ್ಲಿ ಸ್ಥಾನ ಪಡೆಯದ ರಾಹುಲ್ ಮತ್ತು ಕಾರ್ತಿಕ್ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂಬುದನ್ನು ವಿರಾಟ್ ಸ್ಪಷ್ಟಪಡಿಸಿದ್ದಾರೆ.

ಅದೇರೀತಿ ಯುವ ಆಟಗಾರರಾದ ವಾಷಿಂಗ್ಟನ್ ಸುಂದರ್, ಸಿದ್ಧಾರ್ಥ್ ಕೌಲ್ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಆಟಗಾರರು ಸಹ ಬದಲಾವಣೆಗಳಿಗೆ ಒಪ್ಪಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ 6 ನೇ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದು ಅಚ್ಚರಿ ನೀಡಿದ್ದರು.







